`ನಾನು ಹುಟ್ಟಿ ಬೆಳೆದಿದ್ದು ಮಂಗಳೂರಿನ ತೊಕ್ಕೊಟ್ಟಿನಲ್ಲಿ. ಅಲ್ಲೇ ಬಿಕಾಂ ಮುಗಿಸುವ ಹೊತ್ತಿಗೆ ಸ್ಥಳೀಯ ಚಾನೆಲ್ `ನಮ್ಮ ಟಿವಿ~ಯಲ್ಲಿ ನಿರೂಪಕಿಯಾಗುವ ಅವಕಾಶ ಸಿಕ್ಕಿತು. ಅದೂ ನಾನು ಆಯ್ದುಕೊಂಡ ಕ್ಷೇತ್ರವಾಗಿರಲಿಲ್ಲ. ಆಂಕರಿಂಗ್ ಕ್ಷೇತ್ರ ನನಗೆ ಊಟ ನೀಡುತ್ತದೆ ಎಂದೂ ತಿಳಿದಿರಲಿಲ್ಲ. ಓರಗೆಯವರ ಒತ್ತಾಯದ ಮೇರೆಗೆ ಅರ್ಜಿ ಸಲ್ಲಿಸಿದೆ.

ಶಾಲೆ ಕಾಲೇಜುಗಳಲ್ಲಿ ವೇದಿಕೆ ಹತ್ತಿ ಮಾತನಾಡಿ ಅನುಭವವಿದ್ದ ನನಗೆ ಆಡಿಷನ್ ಕಷ್ಟವೆನಿಸಲಿಲ್ಲ. ಮಾತುಗಾರಿಕೆಯಲ್ಲಿ ಪಳಗಿದ್ದೇನೆ ಎಂಬ ಕಾರಣಕ್ಕೆ ವಾರಕ್ಕೆ ಮೂರು ಕಾರ್ಯಕ್ರಮಗಳ ಜವಾಬ್ದಾರಿ ನನ್ನ ಹೆಗಲೇರಿತು.

ಹೀಗೆ ಆರಂಭವಾದ ನನ್ನ ವೃತ್ತಿ ಬದುಕು ಈಟಿವಿ ಮಂಗಳೂರು ಆಡಿಷನ್ನೊಂದಿಗೆ ಸಂಪೂರ್ಣ ಬದಲಾಯಿತು. ಹೊಸ ಕನಸುಗಳೊಂದಿಗೆ ಉದ್ಯಾನನಗರಿಗೆ ಕಾಲಿಟ್ಟೆ. ಅಲ್ಲಿಂದ ಆರಂಭಗೊಂಡ ಬದುಕಿನ ಪಯಣ ಇದೀಗ ಝೀ-ಕನ್ನಡದಲ್ಲಿ ನೆಲೆ ನಿಂತಿದೆ.

`ಕುಣಿಯೋಣು ಬಾರಾ~ ನನಗೆ ಖುಷಿ ನೀಡಿದ ಕಾರ್ಯಕ್ರಮ. ಮಕ್ಕಳೊಂದಿಗೆ ಮಗುವಾಗಿ ಬೆರೆಯಲು ಅವಕಾಶ ನೀಡಿತ್ತು. ಮೊದಲಿನಿಂದಲೂ ನೃತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ನನಗೆ ಅದು ಉತ್ತಮ ವೇದಿಕೆಯಾಯಿತು. ನನ್ನನ್ನು ಸೆಲೆಬ್ರಿಟಿ ಆಂಕರ್ ಆಗಿ ಗುರುತಿಸಲೂ ಅದು ನೆರವಾಯಿತು. ಕೊರಿಐಓಗ್ರಫರ್ ತರುಣ್ ಐದು ತಿಂಗಳು ನೀಡಿದ ತರಬೇತಿಯಿಂದ ಸಾಕಷ್ಟು ಕಲಿತುಕೊಂಡೆ.

ಯಾವುದೇ ಕಾರ್ಯಕ್ರಮವನ್ನು ಮನೆಯಲ್ಲಿ ಕುಳಿತು ನೋಡುವುದಕ್ಕೂ, ನಿರೂಪಕಿಯಾಗಿ ನೋಡುವುದಕ್ಕೂ ವ್ಯತ್ಯಾಸವಿದೆ. ಕಾರ್ಯಕ್ರಮ ಪ್ರಸಾರವಾದ ಬಳಿಕ ಕೆಲವು ಮಂದಿ `ಆ ವೇದಿಕೆಯಲ್ಲಿ ನಡೆಯುವುದೆಲ್ಲಾ ನಾಟಕವಲ್ಲವೇ, ಸುರಿಯುವ ಕಣ್ಣೀರು ಸುಳ್ಳಿನದ್ದಲ್ಲವೇ~ ಎಂದು ಪ್ರಶ್ನಿಸುತ್ತಿದ್ದರು.

ಮತ್ತೂ ಕೆಲವರು ರಿಯಾಲಿಟಿ ಶೋಗಳು ಜನಸಾಮಾನ್ಯರ ದೌರ್ಬಲ್ಯ ಮುಂದಿಟ್ಟುಕೊಂಡು ಟಿಆರ್ಪಿ ಹೆಚ್ಚಿಸಿಕೊಳ್ಳುವ ಕಾರ್ಯಕ್ರಮಗಳು ಎಂದೆಲ್ಲಾ ಟೀಕಿಸುತ್ತಿದ್ದರು. ಇದು ನನಗೆ ಅತ್ಯಂತ ನೋವು ಕೊಡುವ ಮಾತುಗಳು.

ನಾನು ಕಂಡಂತೆ, ಚಾನೆಲ್ಗಳು ಟಿಆರ್ಪಿ ಹೆಚ್ಚಳಕ್ಕಾಗಿ ಬಳಸಿಕೊಳ್ಳುವ ಕಾರ್ಯಕ್ರಮ ಇದಲ್ಲ. ಅಲ್ಲಿ ನೈಜವಾಗಿ ಏನು ನಡೆಯುತ್ತದೆಯೋ ಅದನ್ನೇ ಮುಚ್ಚುಮರೆ ಇಲ್ಲದೆ ತೋರಿಸುತ್ತಾರಷ್ಟೆ. ಅಲ್ಲಿ ಹಾಕುವ ಕಣ್ಣೀರು ನಾಟಕದ್ದಲ್ಲ. ಸೂಕ್ಷ್ಮ ಮನಸ್ಸಿನ ನನ್ನಂಥವಳು ಸಹಜವಾಗಿ ಭಾವನೆಗಳನ್ನು ಹತ್ತಿಕ್ಕಿಕೊಳ್ಳಲಾರದೆ ಅದು ಕಣ್ಣೀರ ರೂಪದಲ್ಲಿ ಹೊರಬಂದರೆ ಅದಕ್ಕೆ ಬೇರೆ ಅರ್ಥ ಕಟ್ಟುವವರೇ ಹೆಚ್ಚು.

ನಮ್ಮ ಟೀಂ ಎಂಬ ಮಾತು ಬಂದಾಗ ಅಲ್ಲಿ ಅಳು, ಸಣ್ಣ ಜಗಳ ಇವೆಲ್ಲಾ ಸಾಮಾನ್ಯ. ಒಬ್ಬ ನಿರೂಪಕಿಯಾಗಿ ನನ್ನ ಚಾನೆಲ್ನಲ್ಲಿ ಇಂತಹ ಪೂರ್ವನಿಯೋಜಿತ ನಾಟಕೀಯ ಘಟನೆಗಳು ನಡೆದಿಲ್ಲ.

ಎರಡೂವರೆ ವರ್ಷಗಳ ಕಾಲ ಪ್ರಸಾರಗೊಂಡ `ಕಾಮಿಡಿ ಕಿಲಾಡಿಗಳು~ ನನ್ನ ಬದುಕಿಗೊಂದು ಹೊಸ ತಿರುವುಕೊಟ್ಟಿತ್ತು. ಆ ಅವಧಿಯ ಕಾರ್ಯಕ್ರಮಗಳ ಟಿಆರ್ಪಿಯಲ್ಲಿ ಅದು ನಂ.1 ಎಂದು ಗುರುತಿಸಿಕೊಂಡಿದ್ದು ಸಂತಸ ನೀಡಿತ್ತು. ಈಗ `ಸೂಪರ್~ ಸೀಸನ್ 2-ನಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿರುವುದೂ ಅಷ್ಟೇ, ವಿಭಿನ್ನ ಅನುಭವವನ್ನೇ ನೀಡುತ್ತಿದೆ.

ಕಾಮಿಡಿ ಕಿಲಾಡಿಗಳು~ ಕಾರ್ಯಕ್ರಮ ಮಾಡುತ್ತಿದ್ದಾಗ ಚಿತ್ರರಂಗದಿಂದ ಅವಕಾಶದ ಕರೆ ಬಂದಿತ್ತು. ಕಿರುತೆರೆಯಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ನಿರೂಪಕಿಯಾಗಿ ಕಾಣಿಸಿಕೊಂಡವರು ಬೆಳ್ಳಿತೆರೆಗೆ ಹೋಗಿ ಬರಿಗೈಯಿಂದ ವಾಪಾಸ್ಸಾಗುತ್ತಿದ್ದ ಕಾಲವದು. ಆಗೆಲ್ಲಾ ನನಗೆ ಭಯವಾಗುತ್ತಿತ್ತು. ಟೀವಿ ಮೂಲಕ ಆಗಷ್ಟೇ ಅನು ವೀಕ್ಷಕರಿಗೆ ಪರಿಚಿತಳಾಗುತ್ತಿದ್ದಳು.

ಮುಂದೆ ಅಲ್ಲೂ ಗುರುತಿಸಿಕೊಳ್ಳಲಾಗದೆ, ಇಲ್ಲೂ ನೆಲೆಸಿಗದಂತಾದರೆ ಹೇಗೆ ಎಂಬ ಭಯದಿಂದ ಕಿರುತೆರೆಯಲ್ಲೇ ಉಳಿದುಕೊಂಡೆ. ಆದರೆ ಚಿತ್ರರಂಗ ಪ್ರವೇಶಿಸದ ಬಗ್ಗೆ ನೋವೇನೂ ಇಲ್ಲ.

ಹೀಗಿದ್ದೂ ಬರಗೂರು ನಿರ್ದೇಶನದ `ಭೂಮಿ ತಾಯಿ~ ಚಿತ್ರದಲ್ಲಿ ನಟಿ ಸುಧಾರಾಣಿ ಮಗಳಾಗಿ ನಟಿಸುವ ಅವಕಾಶ ದೊರೆಯಿತು. ನನ್ನ ವ್ಯಕ್ತಿತ್ವಕ್ಕೆ ಸಂಪೂರ್ಣ ವಿಭಿನ್ನವಾಗಿ, ಅಂದರೆ ಹಳ್ಳಿ ಹುಡುಗಿಯಾಗಿ ನಟಿಸಬೇಕಿತ್ತು. ಸವಾಲಾದ ಪಾತ್ರವನ್ನು ಯಶಸ್ವಿಯಾಗಿ ಮಾಡಿ, ನಿರ್ದೇಶಕರಿಂದ ಭೇಷ್ ಎನಿಸಿಕೊಂಡೆ.

ಮಾತು ಮುದನೀಡಿದರಷ್ಟೇ ಹಿತ. ಇತರರಿಗೆ ನೋವು ಮಾಡುವಂತಹ ಮಾತು ಎಷ್ಟೇ ಲಾಲಿತ್ಯದಿಂದ ಕೂಡಿದ್ದರೂ ಹಿಂಸೆ ಎನಿಸುತ್ತದೆ. ಇಂದು ಚಾನೆಲ್ಗಳಿಗೆ ಕಡಿಮೆಯಿಲ್ಲ. ಕೈಯಲ್ಲಿ ರಿಮೋಟ್ ಹಿಡಿದ ಪ್ರೇಕ್ಷಕ ಅರ್ಥವಿಲ್ಲದ ಮಾತನ್ನು ಕೇಳುತ್ತಾ ಕೂರುವ ತಾಳ್ಮೆ ಪ್ರದರ್ಶಿಸುವುದಿಲ್ಲ.

ಲಕ್ಷ್ಮಿ ನಡೆಸಿಕೊಡುವ `ನಾನಾ ನೀನಾ~ ಕಾರ್ಯಕ್ರಮದಲ್ಲಿ ಜಾಹೀರಾತು ಬಂದರೂ ಚಾನೆಲ್ ಬದಲಾಗುವುದಿಲ್ಲ ಎಂದರೆ ಅವರ ಮಾತಿನ ಮೋಡಿಯ ಕಿಮ್ಮತ್ತು ಅರಿವಾಗುತ್ತದೆ. ಮನಸ್ಸಿಗೆ ಕಿರಿಕಿರಿಯಾಗದಂತೆ ಮಾತಾಡುವುದೂ ಒಂದು ಕಲೆ. ಅದನ್ನು ಹೊಸಬರು ಅಳವಡಿಸಿಕೊಳ್ಳಬೇಕಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.