ಮಂಗಳವಾರ, ಜೂನ್ 15, 2021
24 °C

ಮಾತಿನಲ್ಲಿ ತೂಕವಿರಲಿ: ರಂಭಾಪುರಿ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕರ್ಣ: ‘ಮಾತು ಜ್ಯೋತಿರ್ಲಿಂಗ. ಉತ್ತಮ ಮಾತು ಮನುಷ್ಯನ ಗೆಲುವಿಗೆ ಕಾರಣವಾಗಬಹುದು. ಕೆಟ್ಟ ಮಾತು ಅವನತಿಗೂ ಕಾರಣವಾಗಬಹುದು. ಆಡುವ ಮಾತಿನಲ್ಲಿ ತೂಕವಿದ್ದರೆ ಗೌರವ, ಘನತೆ ಹೆಚ್ಚಾಗುತ್ತದೆ’ ಎಂದು  ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ಅಭಿಪ್ರಾಯಪಟ್ಟರು.ಗೋಕರ್ಣ ಕ್ಷೇತ್ರದ ಬಾಳೆ ಹೊನ್ನೂರು ವೀರಶೈವ ಮಠದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಶಿವಭಜನಾ ಸಪ್ತಾಹದ ಮಂಗಲ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.‘ಸಮಾಜದ ಎಲ್ಲ ರಂಗಗಳಲ್ಲಿ ಇಂದು ಗೊಂದಲ ಮತ್ತು ಸಮಸ್ಯೆ ತಲೆದೋರಿದೆ. ಆಡುವ ಮಾತೇ ಇದಕ್ಕೆ ಕಾರಣ ಎನ್ನಬಹುದು. ದಾರಿ ತಪ್ಪಿದರೆ ಹಿಂತಿರುಗಿ ಸರಿ ದಾರಿ ಕಂಡುಕೊಳ್ಳ ಬಹುದು. ಆದರೆ ಮಾತು ತಪ್ಪಿದರೆ ಹಿಂತಿರುಗಿ ಬರುವುದಿಲ್ಲ’ ಎಂದು ಅವರು ಹೇಳಿದರು.

ಕಲಘಟಗಿ ಹನ್ನೆರಡು ಮಠದ ರೇವಣಸಿದ್ಧ ಶಿವಾಚಾರ್ಯರು ಮಾತನಾಡಿ, ಧರ್ಮವು ಬಾಳಿಗೆ ದಾರಿ ತೋರಬಲ್ಲುದು. ಗುರು ಮತ್ತು ಗುರಿಯಿಟ್ಟು ಜೀವನ ಮುನ್ನಡೆಸಿದರೆ ಬಾಳು ಧನ್ಯವಾಗುತ್ತದೆ ಎಂದರು.ಈಶ್ವರಯ್ಯ ನಾವಳ್ಳಿಮಠ, ವೀರೇಶ ಪಾಟೀಲ, ಶ್ರೀಧರ ಪರಿಮಳಾಚಾರ್ಯ, ಕುಷ್ಟಗಿ ಪಂಚಾಕ್ಷರಯ್ಯ, ಮಹಾ ಬಲೇಶ್ವರ ಹನ್ನೆರಡುಮಠ, ಸಾವಿತ್ರಮ್ಮ ಮರಗಾಲ, ಎಸ್.ಆರ್.ನರೇಂದ್ರಮಠ, ಎ.ಎಂ.ಹಿರೇಮಠ ಮೊದಲಾದವರು ಹಾಜರಿದ್ದರು.

ಎಸ್.ಎಸ್.ಪಾಟೀಲ ಸ್ವಾಗತಿಸಿ ದರು. ಪ್ರಕಾಶ ಬೆಂಡಿಗೇರಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.