ಭಾನುವಾರ, ಮೇ 16, 2021
26 °C

ಮಾತು ಕೇಳದ ಆಯುಕ್ತೆ: ಅಧ್ಯಕ್ಷೆ ಅಳಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ರಾಜಧಾನಿಗೆ ಸಮೀಪವೇ ಇದ್ದರೂ ನಗರ ಅಭಿವೃದ್ಧಿ ಪಡಿಸುವಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ನಗರಸಭೆಗೆ ಪೂರ್ಣಾವಧಿ ಆಯುಕ್ತರನ್ನು ನೇಮಿಸುವಂತೆ ಬೇಡಿಕೊಳ್ಳುತ್ತಿದ್ದರೂ ಬೇಡಿಕೆ ಈಡೇರಿಸುತ್ತಿಲ್ಲ ಎಂದು ನಗರಸಭೆ ಅಧ್ಯಕ್ಷೆ ದೇವಿಕಾ ಸೋಮವಾರ ಇಲ್ಲಿ ಅಳಲು ತೋಡಿಕೊಂಡರು.ನಗರಸಭೆ ಪ್ರಭಾರ ಆಯುಕ್ತೆ ರೋಹಿಣಿ ಸಿಂಧೂರಿ ಮಾತು ಕೇಳುತ್ತಿಲ್ಲ. ಸಾಮಾನ್ಯಸಭೆ ನಡೆಸುವಂತೆ ಪತ್ರ ಬರೆದರೂ ಅದಕ್ಕೆ ಸಮ್ಮತಿಸುತ್ತಿಲ್ಲ. ಅಧ್ಯಕ್ಷರ ಯಾವುದೇ ಸೂಚನೆ ಪಾಲಿಸದೆ ನಗರದ ಅಭಿವೃದ್ಧಿ ಕುಂಠಿತಗೊಂಡಿದೆ. ಆಯುಕ್ತರು ಅಧಿಕಾರಿಗಳನ್ನು ದಿಕ್ಕು ತಪ್ಪಿಸುವ ಮೂಲಕ ನಗರಸಭೆ ಆಡಳಿತವನ್ನು ಕುಂಠಿತಗೊಳಿಸುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.ಮುಖ್ಯಮಂತ್ರಿ ವಿಶೇಷ ಅನುದಾನದ ಅನೇಕ ಕಾಮಗಾರಿಗಳಿಗೆ ಸಾಮಾನ್ಯಸಭೆ ಒಪ್ಪಿಗೆ ನೀಡಬೇಕಾಗಿದೆ. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ತ್ಯಾಜ್ಯ ವಿಲೇವಾರಿ ಮಾಡಲಾಗಿದೆ ಸ್ವಚ್ಛತೆ ಇಲ್ಲದಂತಾಗಿದೆ. ಆಯುಕ್ತರು ಸರಿಯಾಗಿ ಕಚೇರಿಗೆ ಬಾರದೆ ಜನ ಸಾಮಾನ್ಯರು ಪರದಾಡುವಂತಾಗಿದೆ. ಯಾವುದೇ ಕಡತಗಳನ್ನು ಆಯುಕ್ತರು ಸೂಕ್ತ ಸಮಯಕ್ಕೆ ವಿಲೇವಾರಿ ಮಾಡುತ್ತಿಲ್ಲ ಎಂದು ದೂರಿದರು.ನಗರದ ಅಭಿವೃದ್ಧಿ ಚುಕ್ಕಾಣಿ ಕೈತಪ್ಪಿದೆ. ಆಯುಕ್ತರ ಅಸಹಕಾರ ಧೋರಣೆ ಸಂಬಂಧ ಇಲ್ಲಿಯ ಶಾಸಕರು, ಸಂಸದರಿಗೆ ತಿಳಿದಿದ್ದರೂ ಸಹಕರಿಸತ್ತಿಲ್ಲ. ಪೂರ್ಣಾವಧಿ ಆಯುಕ್ತರನ್ನು ನೇಮಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರದ ಶಾಸಕರು, ಸಂಸದರೇ ನಗರದ ಅಧೋಗತಿಯ ನೇರ ಹೊಣೆ ಹೊರಬೇಕು ಎಂದರು.ನಗರ `ಶಾಪಗ್ರಸ್ಥ ನಗರ~ ಎಂಬ ಹಣೆಪಟ್ಟಿಗೆ ಗುರಿಯಾಗಿದ್ದು, ಅದನ್ನು ಸರ್ಕಾರ ಹೋಗಲಾಡಿಸಬೇಕು. ನಗರಸಭೆಯಲ್ಲಿ ಶೇ 70ರಷ್ಟು ಸಿಬ್ಬಂದಿ ಕೊರತೆ ಇದ್ದು, ಖಾಲಿ ಹುದ್ದೆ ತುಂಬಬೇಕು. ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೂಮಿ ನೀಡದೆ ಸ್ವಚ್ಛತೆ ಹದಗೆಡುತ್ತಿದೆ. ಕೂಡಲೇ ಭೂಮಿ ನೀಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಅಸ್ಲಾಂ ಪಾಷ, ಸದಸ್ಯರಾದ ಬಾಲಕೃಷ್ಣ, ಹನುಮಂತರಾಯಪ್ಪ, ನದೀಂಪಾಷ, ನಯಾಜ್ ಅಹಮದ್ ಇದ್ದರು.

ವಿ.ವಿ ವಿರುದ್ಧ ಕ್ರಮ: ದೇವಿಕಾ

ತುಮಕೂರು:
ನಗರಸಭೆ ಒಪ್ಪಿಗೆ ಪಡೆಯದೆ ತುಮಕೂರು ವಿಶ್ವವಿದ್ಯಾನಿಲಯ ಕಟ್ಟಡ ನಿರ್ಮಾಣ ಮಾಡಿದೆ. ಕುಡಿಯುವ ನೀರು, ಒಳಚರಂಡಿ ಸಂಪರ್ಕ ಪಡೆದಿದೆ ಎಂಬ ದೂರು ಬಂದಿದೆ. ನಗರಸಭೆ ಎಂಜಿನಿಯರಿಂದ ಮಾಹಿತಿ ಕೇಳಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ದೇವಿಕಾ ತಿಳಿಸಿದರು.ಶೈಕ್ಷಣಿಕ ಸಂಸ್ಥೆಗಳು ನಗರಸಭೆ ಅನುಮತಿ ಪಡೆಯದೆ ಕಟ್ಟಡ ನಿರ್ಮಿಸಿಕೊಳ್ಳಲು ಅವಕಾಶ ಇದೆ ಎಂದೂ ಹೇಳಲಾಗಿದೆ. ಈ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಕೇಳಲಾಗಿದೆ. ಒಂದು ವೇಳೆ ಕಾನೂನು ಉಲ್ಲಂಘಿಸಿದ್ದರೆ ವಿ.ವಿ. ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಹೇಳಿದರು.43 ಕೊಳವೆಬಾವಿಗೆ ಒಪ್ಪಿಗೆ

ತುಮಕೂರು: ನಗರದ ನೀರಿನ ಸಮಸ್ಯೆ ಬಗೆಹರಿಸಲು ಹೊಸದಾಗಿ 43 ಕೊಳವೆ ಬಾವಿ ಕೊರೆಯಲು ನಿರ್ಧರಿಸಲಾಗಿದೆ. ನೀರು ಕಡಿಮೆಯಾಗಿರುವ 45 ಕೊಳವೆ ಬಾವಿಗಳನ್ನು ಆಳಪಡಿಸಲು ಒಪ್ಪಿಗೆ ಸಿಕ್ಕಿದೆ. ಹೊಸ 43 ಕೊಳವೆ ಬಾವಿಗಳಿಗೆ ಬೇಕಾದ ಮೋಟರ್ ಪಂಪ್‌ಅನ್ನು ಈಗಾಗಲೇ ಜಿಲ್ಲಾಧಿಕಾರಿ ಖಾತೆ ಹಣದಿಂದ ನೀಡಲಾಗಿದೆ ಎಂದು ನಗರಸಭೆ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.