ಸೋಮವಾರ, ಮೇ 10, 2021
25 °C

ಮಾಧ್ಯಮಗಳಿಂದ ಸ್ವಯಂ ನಿಯಂತ್ರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್):  ಭಾರತೀಯ ಮಾಧ್ಯಮಗಳಲ್ಲಿ ಪ್ರಕಟವಾಗುವ ವರದಿಗಳ ಮೇಲೆ ಬಾಹ್ಯ ಸಂಸ್ಥೆಗಳು ನಿಯಂತ್ರಣ ಹೇರುವುದಕ್ಕಿಂತ ಅವುಗಳೇ ಸ್ವಯಂ ಆಗಿ ನಿಯಂತ್ರಣ ಹೇರಿಕೊಳ್ಳುವುದು ಉತ್ತಮ ಮಾರ್ಗ ಎಂದು ಮಾಧ್ಯಮ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

`ಭಾರತೀಯ ಪತ್ರಿಕಾ ಮಂಡಳಿಯಂತಹ ಸಂಸ್ಥೆಗಳು ಮಾಧ್ಯಮಗಳಿಗಾಗಿ ನೀತಿ ಸಂಹಿತೆ ರೂಪಿಸುವುದು ಮಾಧ್ಯಮಗಳ ನಿಯಂತ್ರಣಕ್ಕೆ ಇರುವ ಏಕೈಕ ದಾರಿ ಎಂದು ತೋರುತ್ತದೆ~ ಎಂದು ಅಂತರರಾಷ್ಟ್ರೀಯ ಮಾಧ್ಯಮ ವೀಕ್ಷಕ ಮತ್ತು `ಇಂಡಿಯಾಸ್ ನ್ಯೂಸ್‌ಪೇಪರ್ ರೆವಲ್ಯೂಷನ್~ ಲೇಖಕ ರಾಬಿನ್ ಜೆಫ್ರಿ ಹೇಳಿದ್ದಾರೆ.

`ವಿದೇಶದ ಇಂಗ್ಲಿಷ್ ಮಾಧ್ಯಮಗಳು ಈ ನಿಟ್ಟಿನಲ್ಲಿ ಇದುವರೆಗೆ ತೃಪ್ತಿಕರವಾದ ಮಾರ್ಗ ಕಂಡುಕೊಂಡಿಲ್ಲ. ಆದರೆ, ಸ್ವಯಂ ನಿಯಂತ್ರಣ ಮಾತ್ರ ಇದಕ್ಕೆ ಅತ್ಯುತ್ತಮ ದಾರಿ~ ಎಂದು ನವದೆಹಲಿ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಭಾರತೀಯ ಸಂಪಾದಕರ ಮಂಡಳಿ ಆಯೋಜಿಸಿದ್ದ ರಾಜೇಂದ್ರ ಮಥುರ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಜೆಫ್ರಿ ಅಭಿಪ್ರಾಯಪಟ್ಟಿದ್ದಾರೆ. ಮೂಲತಃ ಕೆನಡಾ ಪತ್ರಕರ್ತರಾದ ಜೆಫ್ರಿ  ಭಾರತ, ಆಸ್ಟ್ರೇಲಿಯಾ, ಸಿಂಗಪುರದಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.