ಮಂಗಳವಾರ, ಏಪ್ರಿಲ್ 20, 2021
32 °C

ಮಾರುಕಟ್ಟೆ ಸ್ಥಳಾಂತರಕ್ಕೆ ರೈತರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ನಗರದ ಗಾಂಧಿವೃತ್ತದಲ್ಲಿರುವ ಹೂವಿನ ಅಂಗಡಿಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರ ಮಾಡಬಾರದೆಂದು ಒತ್ತಾಯಿಸಿ ವ್ಯಾಪಾರಿಗಳು ಮತ್ತು ಕೆಲವು ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಹೂವುಗಳನ್ನು ಚೆಲ್ಲಿ ಪ್ರತಿಭಟನೆ ನಡೆಸಿದರು.ಈಗಿರುವ ಮಾರುಕಟ್ಟೆ ಸ್ಥಳ ಕಿಷ್ಕಿಂಧೆಯಾಗಿದ್ದು, ಹೂವಿನ ಸಗಟು ವ್ಯಾಪಾರಿಗಳನ್ನು ಎಪಿಎಂಸಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಹೂವು ಬೆಳೆಗಾರರು ಹಲವಾರು ಬಾರಿ ಪ್ರತಿಭಟನೆಗಳನ್ನು ಮಾಡಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸ್ಪಂದಿಸಿರಲಿಲ್ಲ. ಇತ್ತೀಚೆಗಷ್ಟೇ ಸ್ಥಳಾಂತರದ ಬಗ್ಗೆ ಸೂಚನೆ ಹೊರಬಿದ್ದಿತ್ತು. ಇದರಿಂದಾಗಿ ಈಗ ರೈತರ ಬೇಡಿಕೆಯ ವಿರುದ್ಧವಾಗಿ ವ್ಯಾಪಾರಿಗಳು ಪ್ರತಿಭಟನೆಗಿಳಿದ್ದಾರೆ.ಗಾಂಧಿವೃತ್ತದಲ್ಲಿನ ಹೂವಿನ ಅಂಗಡಿಗಳನ್ನು ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಲು ಜಿಲ್ಲಾಧಿಕಾರಿಯಿಂದ ಆದೇಶ ಬಂದಿದೆ. ಆದರೆ, ಆ ಸ್ಥಳ ದೂರವಾಗಿದ್ದು, ರೈತರು ಹೂವುಗಳನ್ನು ಮಾರಾಟಕ್ಕೆ ತರಲು ಸಾಧ್ಯವಿಲ್ಲ. ಅಲ್ಲದೆ ಸಂಜೆಯ ಸಮಯದಲ್ಲಿ ಹೂವನ್ನು ಖರೀದಿಸಲು ಗ್ರಾಹಕರು ಅಲ್ಲಿಗೆ ಬರುವುದಿಲ್ಲ ಇದರಿಂದ ಹೂ ಮಾರಾಟವಾಗುವುದಿಲ್ಲ ಎಂದು ವ್ಯಾಪಾರಿಗಳು ದೂರಿದರು.ನಗರದ ಮಾರುಕಟ್ಟೆಗೆ ಈಗ ವಿವಿಧ ಕಡೆಯಿಂದ ಹೂವು ಮಾರಾಟಕ್ಕೆ ಬೆಳೆಗಾರರು ತರುತ್ತಿದ್ದಾರೆ. ಈಗಿರುವ ಮಾರುಕಟ್ಟೆ ಎಲ್ಲದಕ್ಕೂ ಹತ್ತಿರವಾಗಿದೆ. ಇಲ್ಲಿಂದ ಎಪಿಎಂಸಿ ಮಾರುಕಟ್ಟೆಗೆ ಹೂವು ಮಾರಾಟವನ್ನು ಸ್ಥಳಾಂತರ ಮಾಡಿದರೆ ಬಸ್‌ನಿಲ್ದಾಣದಿಂದ ಅಲ್ಲಿಗೆ ಹೊಗಲು ಗಂಟುಗಳೊಂದಿಗೆ ತೆರಳಲು ಹೆಚ್ಚಿನ ಬಾಡಿಗೆ ನೀಡಬೇಕಾಗುತ್ತದೆ. ಇದರಿಂದ ಹೂವು ಬೆಳೆಗಾರರಿಗೆ ತೊಂದರೆಯಾಗಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.ನಗರಸ ಭೆವತಿಯಿಂದ ನೂತನವಾಗಿ ನಿರ್ಮಿಸಿರುವ ಮಳಿಗೆಯಲ್ಲಿಯೇ ತಮಗೂ ಜಾಗ ನೀಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಬಿ.ಎಚ್. ರಾಜಗೋಪಾಲ, ತಿಪ್ಪೇಸ್ವಾಮಿ, ರಾಘವೇಂದ್ರ, ನಾಗರಾಜ್, ಮಂಜಣ್ಣ, ರಾಜಪ್ಪ, ಪ್ರವೀಣ್, ರಾಜಗೋಪಾಲರೆಡ್ಡಿ, ರಂಗನಾಥರೆಡ್ಡಿ, ವೆಂಕಟಶಿವರೆಡ್ಡಿ, ಈರಪ್ಪ, ಉಪ್‌ನಾಯಕನಹಳ್ಳಿ ವಿನಾಯಕ್, ತಾರಾನಾಥರೆಡ್ಡಿ ಪಾಲ್ಗೊಂಡಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.