ಅ ನೇಕ ಗ್ರಾಹಕರಿಗೆ ಹೊಸ ಕಂಪ್ಯೂಟರ್ ಖರೀದಿಸುವುದು ಗೊಂದಲ ಮತ್ತು ಸಂಕೀರ್ಣ ಅನುಭವ ನೀಡುತ್ತದೆ. ಕಂಪ್ಯೂಟರ್ ಬಿಡಿಭಾಗಗಳಿಗೆ ಸಂಬಂಧಿಸಿದಂತಹ ವಿವರಗಳು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವುದಿಲ್ಲ.

ತಾಂತ್ರಿಕ ಮಾಹಿತಿಯ ಕುರಿತು ಹಲವರ ಬಳಿ ಕೇಳಿ ತಿಳಿದುಕೊಂಡು ನಂತರ ಸುಧಾರಿತ ಬಿಡಿಭಾಗಗಳನ್ನು ಹೊಂದಿರುವ ಕಂಪ್ಯೂಟರ್ಗಳನ್ನು ಖರೀದಿಸುತ್ತಾರೆ. ಕಂಪ್ಯೂಟರ್ಗಳನ್ನು ಖರೀದಿಸುವಾಗ ಈ ಕೆಳಕಂಡ ಅಂಶಗಳನ್ನು ಗಮನಿಸಬೇಕು.

ಪ್ರೊಸೆಸರ್: ಕಂಪ್ಯೂಟರ್ನ ಒಟ್ಟಾರೆ ಸಾಮರ್ಥ್ಯಕ್ಕೆ ಅತ್ಯಂತ ಮಹತ್ವದ ಕೊಡುಗೆ ನೀಡುವ ಏಕೈಕ ಭಾಗ ಪ್ರೊಸೆಸರ್. ಇದು ಗೇಮಿಂಗ್ ಸೇರಿದಂತೆ ಎಲ್ಲ ಕಂಪ್ಯೂಟರ್ ಕಾರ್ಯಕ್ರಮಗಳ ಕೇಂದ್ರ ಬಿಂದು.

ಆದರೆ ಕಳೆದ ಕೆಲವು ವರ್ಷಗಳಲ್ಲಿ ಪ್ರೊಸೆಸರ್ ಬಹಳಷ್ಟು ಬದಲಾಗಿದೆ. ಕಂಪ್ಯೂಟರ್ ವಿದ್ಯುತ್ ಕ್ಷಮತೆ ಮತ್ತು ವೇಗವಾಗಿ ಕಾರ್ಯ ನಿರ್ವಹಿಸುವಂತೆ ಪ್ರೊಸೆಸರ್ ಸುಧಾರಣೆಯಾಗುತ್ತಲೇ ಇದೆ. ಡೆಸ್ಕ್ ಟಾಪ್ ಮತ್ತು ಇನ್ನಷ್ಟು ಮೊಬೈಲ್ ಲ್ಯಾಪ್ಟಾಪ್ಗಳ (ಹಗುವಾರದ, ತೆಳ್ಳಗಿನ ಮತ್ತು ಇನ್ನಷ್ಟು ವಿದ್ಯುತ್ ಕ್ಷಮತೆ) ಕಾರ್ಯವೈಖರಿ ಸುಧಾರಣೆಯಾಗುವಂತೆ ಮಾಡುತ್ತಿದೆ.

ಇದೇ ಸಂದರ್ಭದಲ್ಲಿ ಜನರು ಕಂಪ್ಯೂಟರ್ ಬಳಸುವ ರೀತಿಯಲ್ಲಿ ಕ್ರಾಂತಿಕಾರಕ ಬದಲಾವಣೆಯಾಗುತ್ತಿದೆ. ಇಂದು ಬಹಳಷ್ಟು ಜನರು ಬಹು ಉದ್ದೆೀಶಗಳಿಗೆ ಕಂಪ್ಯೂಟರ್ ಬಳಸುತ್ತಾರೆ. ವೆಬ್ಸೈಟ್ಗಳನ್ನು ಹುಡುಕಾಡಲು, ಹಾಡುಗಳನ್ನು ಕೇಳಲು, ಭದ್ರತಾ ಸಾಫ್ಟ್ವೇರ್ಗಳನ್ನು ಬಳಸಲು, ಕರೆ ಮಾಡಲು ಮತ್ತು ಒಂದಕ್ಕಿಂತ ಹೆಚ್ಚು ದಾಖಲೆಗಳೊಂದಿಗೆ ಕೆಲಸ ಮಾಡಲು ಕಂಪ್ಯೂಟರ್ನಲ್ಲಿ ಹಲವು ಪ್ರೋಗ್ರಾಮ್ಗಳನ್ನು ಬಳಸುತ್ತಾರೆ.

ಕಂಪ್ಯೂಟರ್ಗಳು ಬಳಕೆದಾರನ ಬಹು ಉದ್ದೆೀಶದ ಹವ್ಯಾಸಗಳಿಗೆ ಹೊಂದಿಕೊಳ್ಳುವಂತೆ ವೇಗವಾಗಿ ಪ್ರಕ್ರಿಯೆ ನಡೆಸಬೇಕು. ಇದಕ್ಕಾಗಿ ಹಲವು ಆಧುನಿಕ ಕಂಪ್ಯೂಟರ್ಗಳು ಅತ್ಯಾಧುನಿಕ ತಂತ್ರಜ್ಞಾನದ ಪ್ರೊಸೆಸರ್ಗಳನ್ನು ಹೊಂದಿದ್ದು, ಅವು ಒಂದೇ ಸಮಯಕ್ಕೆ ಹಲವು ಕೆಲಸಗಳನ್ನು ನಿರ್ವಹಿಸಬಲ್ಲವಾಗಿವೆ.

ಇಂಟೆಲ್ನ ಟರ್ಬೋ ಬೂಸ್ಟ್ 2.0 ತಂತ್ರಜ್ಞಾನವೂ ಈ ಮಾದರಿಯ ಅತ್ಯಾಧುನಿಕ ಪ್ರೊಸೆಸರ್ ತಂತ್ರಜ್ಞಾನಗಳಲ್ಲಿ ಒಂದು. ಇದೊಂದು ಮೇಧಾವಿ ತಂತ್ರಜ್ಞಾನ. ಅಗತ್ಯಬಿದ್ದರೆ ತಾನೇ ತಾನಾಗಿ ಪ್ರೊಸೆಸರ್ ಅನ್ನು ಇನ್ನಷ್ಟು ಸಮರ್ಥಗೊಳಿಸಲು ಹೆಚ್ಚುವರಿಯಾಗಿ ಕೆಲಸ ಮಾಡುತ್ತದೆ. ಇಲ್ಲದಿದ್ದಲ್ಲಿ ಮೊದಲಿನ ಮೋಡ್ಗೆ ತಾನೇ ಹಿಂದಿರುಗುತ್ತದೆ. ಇದರಿಂದಾಗಿ ಕಂಪ್ಯೂಟರ್ನ ವಿದ್ಯುತ್ ಕ್ಷಮತೆ ಹೆಚ್ಚುತ್ತದೆ.

ಇನ್ನೊಂದು ಅಚ್ಚರಿಯ ವಿಷಯವೆಂದರೆ ಅತ್ಯಂತ ಸರಳ ಆಪ್ಲಿಕೇಷನ್ಗಳ ಕಾರ್ಯ ವೈಖರಿಗೂ ಟರ್ಬೋ ಬೂಸ್ಟ್ 2.0 ಸಹಕಾರಿಯಾಗುತ್ತದೆ.

ಬಹು ಕೆಲಸಗಳನ್ನು ನಿರ್ವಹಿಸುವಾಗ ಪ್ರೊಸೆಸರ್ನ ಸಂಪನ್ಮೂಲಗಳ ಗರಿಷ್ಠ ಬಳಕೆಗೆ ಹೈಪರ್ ಥ್ರೆಡ್ಡಿಂಗ್ ತಂತ್ರಜ್ಞಾನ ಸಹಕಾರಿಯಾಗುತ್ತದೆ. ಇದರಿಂದಾಗಿ ಹಿಂದಿನ ಪೀಳಿಗೆಯ ಪ್ರೊಸೆಸರ್ಗಳಿಗೆ ಹೋಲಿಸಿದರೆ ಎರಡನೇ ಪೀಳಿಗೆಯ `ಕೋರ್ ಐ7~ ಪ್ರೊಸೆಸರ್ನ ಕಾರ್ಯಕ್ಷಮತೆಯಲ್ಲಿ ಶೇಕಡ 60ರಷ್ಟು ಹೆಚ್ಚಳ ಸಾಧ್ಯ.

ಹೆಚ್ಚು ಲೇನ್ಗಳು ಲಭ್ಯವಿರುವಂತೆ ಹೆಚ್ಚು ವೇಗವಾಗಿ ಮಾಹಿತಿ ಸಂಸ್ಕರಿಸಬಹುದು. ಎಂಟು ಮಾರ್ಗಗಳ ಬಹು ಉದ್ದೆೀಶದ ಪ್ರೊಸೆಸಿಂಗ್ಗೆ ಸಾಧ್ಯವಾಗುವಂತೆ ಇಂಟೆಲ್ನ ಪ್ರೊಸೆಸರ್ಗಳು ಹೈಪರ್ ತ್ರೆಡ್ಗಳ ಸಂಖ್ಯೆ ದ್ವಿಗುಣಗೊಳಿಸುತ್ತದೆ. ಇದರಿಂದಾಗಿ ಕೆಲಸದಲ್ಲಿ ಮತ್ತು ಪ್ರೊಸೆಸಿಂಗ್ ಸಮಯದಲ್ಲಿ ಸುಧಾರಣೆಯಾಗುತ್ತದೆ.

ಪ್ರೊಸೆಸರ್ಗಳು ಕೆಲಸವನ್ನು ತ್ವರಿತವಾಗಿ ಮುಗಿಸುವುದರಿಂದ ಸಮಯದ ಉಳಿತಾಯವಾಗಲಿದೆ. ಕೋರ್ ಐ5 ಪ್ರೊಸೆಸರ್ಗಳು ಹಿಂದಿನ ಪೀಳಿಗೆಯ ಇಂಟೆಲ್ ಪ್ರೀಮಿಯಂ ಪ್ರೊಸೆಸರ್ಗಳಿಗಿಂತ ದುಪ್ಪಟ್ಟು ವೇಗವಾಗಿ ಕೆಲಸ ಮಾಡುತ್ತವೆ.

ದಿನನಿತ್ಯದ ಕಂಪ್ಯೂಟರ್ ಬಳಕೆದಾರರಿಗೆ ಕಂಪ್ಯೂಟರ್ ಪ್ರೊಸೆಸರ್ ಅನ್ನು ಅಭಿವೃದ್ಧಿಪಡಿಸುವುದು ಸುಲಭದ ಕೆಲಸವೇನಲ್ಲ. `ಸಿಪಿಯು~ ಎಲ್ಲ ಲ್ಯಾಪ್ಟಾಪ್ ಮತ್ತು ಡೆಸ್ಕ್ಟಾಪ್ ಕಂಪ್ಯೂಟರ್ಗಳ ಮೂಲ ಅಡಿಪಾಯದಂತೆ ಕೆಲಸ ಮಾಡುತ್ತವೆ. ಪರಿಣಾಮದ ಕುರಿತು ಹೇಳುವುದಾದರೆ ಕಂಪ್ಯೂಟರ್ ಪ್ರೊಸೆಸರ್ ಬದಲಿಸುವುದೆಂದರೆ ಮನೆಯೊಂದರ ಅಡಿಪಾಯ ಬದಲಿಸಿದಂತೆಯೇ. ಅಷ್ಟು ಸಂಕೀರ್ಣ, ದುಬಾರಿ ವೆಚ್ಚದ ಮತ್ತು ಕೇವಲ ತಜ್ಞರು ಮಾತ್ರ ಕೈಗೊಳ್ಳಬಹುದಾದ ತಾಂತ್ರಿಕ ಪ್ರಕ್ರಿಯೆ ಅದು.

ಅನೇಕ ಗ್ರಾಹಕರಿಗೆ ಭವಿಷ್ಯದ ದೃಷ್ಟಿಯಿಂದ ಅತ್ಯುತ್ತಮ ಪ್ರೊಸೆಸರ್ಗಳ ಮೇಲೆ ಹಣ ಹೂಡುವುದು ವಿವೇಕದ ಕೆಲಸದಂತೆ ಕಾಣುತ್ತದೆ. ಇಲ್ಲದಿದ್ದಲ್ಲಿ ಇಂದು ಕೆಲವು ರೂಪಾಯಿ ಉಳಿಸಿ ಅಗ್ಗದ ಪ್ರೊಸೆಸರ್ ಖರೀದಿಸಿದರೆ ಮುಂಬರುವ ವರ್ಷಗಳಲ್ಲಿ ಹತಾಶೆ ಅನುಭವಿಸಬೇಕಾಗಬಹುದು.

ಹೆಚ್ಚು ಸಾಮರ್ಥ್ಯವೆಂದರೆ ಹೆಚ್ಚು ವಿದ್ಯುತ್ ಬಳಕೆ ಎಂದು ಕಳವಳಪಡಬೇಕಾಗಿಲ್ಲ. ಆದರೆ, ಎಲ್ಲ ಸಂದರ್ಭಗಳಲ್ಲಿಯೂ ಅದು ನಿಜವಾಗಿರುವುದಿಲ್ಲ. ಉತ್ತಮ ಬ್ರಾಂಡ್ನ `ಸಿಪಿಯು~ ಇರುವ ಕಂಪ್ಯೂಟರ್ ಖರೀದಿಸಿದರೆ ಕೆಲಸದ ಸಾಮರ್ಥ್ಯ ಹೆಚ್ಚುವುದು ಮಾತ್ರವಲ್ಲ, ವಿದ್ಯುತ್ ಬಳಕೆಯೂ ಕಡಿಮೆಯಾಗಿರುತ್ತದೆ. ಅದರಲ್ಲೂ ಲ್ಯಾಪ್ಟಾಪ್ ಬಳಕೆದಾರರಿಗೆ ದೀರ್ಘಾವಧಿಯ ಬ್ಯಾಟರಿ ಮತ್ತು ಹೆಚ್ಚು ಸಮಯ ಕೊಂಡೊಯ್ಯುವ ಸ್ವಾತಂತ್ರ್ಯ ಇರುತ್ತದೆ.

ಕ್ಲಾಕ್ ಸ್ಪೀಡ್: ಒಂದು ಕೆಲಸವನ್ನು ಪ್ರೊಸೆಸರ್ ಎಷ್ಟು ವೇಗವಾಗಿ ನಿರ್ವಹಿಸುತ್ತದೆ ಎನ್ನುವುದಕ್ಕೆ ಕ್ಲಾಕ್ ಸ್ಪೀಡ್ ಎನ್ನುತ್ತಾರೆ. ಇದನ್ನು ಗೀಗಾಹರ್ಟ್ಸ್ನಲ್ಲಿ ಅಳೆಯುತ್ತಾರೆ.

ಹಿಂದೆ ದೊಡ್ಡ ಸಂಖ್ಯೆಯೆಂದರೆ ಪ್ರೊಸೆಸರ್ಗಳು ಹೆಚ್ಚು ವೇಗವಾಗಿ ಕೆಲಸ ಮಾಡುತ್ತವೆ ಎಂದರ್ಥವಾಗಿತ್ತು. ಆದರೆ, ಪ್ರೊಸೆಸರ್ಗಳ ತಂತ್ರಜ್ಞಾನದಲ್ಲಿ ಸುಧಾರಣೆ ಕಂಡುಬರುತ್ತಿದ್ದಂತೆ, ಅಂದರೆ ಟರ್ಬೋ ಬೂಸ್ಟ್ ಮತ್ತು ಹೈಪರ್ ಥ್ರೆಡಿಂಗ್ ತಂತ್ರಜ್ಞಾನಗಳಂತೆ, `ಸಿಪಿಯು~ಗಳು ಹೆಚ್ಚು ಕ್ಲಾಕ್ ಸ್ಪೀಡ್ ಸಾಧಿಸುವ ಅಗತ್ಯವಿಲ್ಲದೆಯೇ ಅತ್ಯಂತ ವೇಗವಾಗಿ ಕಾರ್ಯ ನಿರ್ವಹಿಸುವುದು ಸಾಧ್ಯವಾಗುತ್ತಿದೆ.
ಪ್ರೊಸೆಸರ್ಒಂದರಲ್ಲಿರುವ ಕೋರ್ಗಳ ಸಂಖ್ಯೆಯನ್ನು ನೀವು ಗಮನಿಸಬೇಕು. ಇಂದಿನ ಪ್ರೊಸೆಸರ್ಗಳ ಹೆಚ್ಚು ವೇಗವಾಗಿ ಕೆಲಸ ಮಾಡುವುದಲ್ಲದೇ, ಹೆಚ್ಚು ವಿದ್ಯುತ್ ಕ್ಷಮತೆಯನ್ನೂ ಹೊಂದಿವೆ. ಹಾಗಾಗಿ ಕ್ಲಾಕ್ ಸ್ಪೀಡ್ ಹೊರೆಯೇನಲ್ಲ. ಈ ಬಗ್ಗೆ ನಿಮ್ಮ ದಾರಿ ತಪ್ಪಿಸುವವರಿದ್ದರೆ ಅವರ ಮಾತಿಗೆ ಕಿವಿ ಕೊಡಬೇಡಿ.

ಒಂದೇ ಫ್ಯಾಮಿಲಿ ಅಥವಾ ಬ್ರಾಂಡ್ಗೆ ಸೇರಿದ ಪ್ರೊಸೆಸರ್ಗಳನ್ನು (ಉದಾಹರಣೆ ಕೋರ್ ಐ7, ಕೋರ್ ಐ5 ಮತ್ತು ಕೋರ್ ಐ3) ಕಂಪ್ಯೂಟರ್ ಬಳಸದಿದ್ದರೆ ಮತ್ತು ಒಂದೇ ಸಂಖ್ಯೆಯ ಕೋರ್ಗಳನ್ನು ಉಪಯೋಗಿಸದಿದ್ದರೆ, ಕಂಪ್ಯೂಟರ್ಗಳನ್ನು ಕ್ಲಾಕ್ ಸ್ಪೀಡ್ಗಳ ಆಧಾರದ ಮೇಲೆ ಹೋಲಿಕೆ ಮಾಡಬಾರದು.

ಬ್ರಾಂಡ್ಗೆ ತಕ್ಕಂತೆ `ಸಿಪಿಯು~ನ ಮೂಲ ವಿನ್ಯಾಸ ಬಹಳ ವ್ಯತ್ಯಾಸ ಹೊಂದಿರುತ್ತವೆ. ಇಂಟೆಲ್ ಟರ್ಬೊ ಬೂಸ್ಟ್ ತಂತ್ರಜ್ಞಾನ ಹೊಂದಿರುವ ಇಂಟೆಲ್ ಕೋರ್ ಐ5 ಮತ್ತು ಕೋರ್ ಐ7 ಪ್ರೊಸೆಸರ್ಗಳು ಹೆಚ್ಚು ಕಂಪ್ಯೂಟಿಂಗ್ ಸಾಮರ್ಥ್ಯ ಹೊಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.