ರುಕ್ಮಿಣಿ ಮಾಲಾ. ತವರು ದಕ್ಷಿಣ ಕನ್ನಡ. ಮೈಸೂರಿನಲ್ಲಿ ನೆಲೆ. ವಿಚಾರವಾದಿ ಜಿ.ಟಿ. ನಾರಾಯಣ ರಾವ್ ಅವರ ಸೊಸೆ ಎನ್ನುವ ಹೆಮ್ಮೆ ಅವರದು. ರುಕ್ಮಿಣಿ ಅವರ ಕಥೆ, ಹಾಸ್ಯಲೇಖನ, ಮಕ್ಕಳ ಕಥೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. `ಮಾಲಾ ಲಹರಿ~ ಅವರ ಬ್ಲಾಗ್ ಹೆಸರು (http://rukminimala.wordpress.com).

ಕಥೆ, ಚಾರಣ, ಲಹರಿ, ಪತ್ರಿಕಾ ಬರಹಗಳು, ಪ್ರವಾಸ, ಸ್ವಗತ- ಹೀಗೆ, ರುಕ್ಮಿಣಿಮಾಲಾ ಅವರ ಬರಹ ವೈವಿಧ್ಯಮಯವಾದುದು. ತಮ್ಮ ಅನುಭವಗಳನ್ನು, ತಮ್ಮ ಓದನ್ನು, ತಾವು ಕಂಡಿದ್ದನ್ನು ಸಹೃದಯರೊಂದಿಗೆ ಹಂಚಿಕೊಳ್ಳುವ ಬಯಕೆ ಅವರದು. ಬರವಣಿಗೆ ಸರಳವಾಗಿದೆ, ಓದಿನ ರುಚಿಗೆ ತಕ್ಕನಾಗಿದೆ.

ಅಂದಹಾಗೆ, ರುಕ್ಮಿಣಿಮಾಲಾ `ಪ್ರಜಾವಾಣಿ~ ಪತ್ರಿಕೆಯ ಕಟ್ಟಾ ಅಭಿಮಾನಿ. ಅವರ ಹಾಗೂ ಪತ್ರಿಕೆಯ ನಡುವಣ ಸಂಬಂಧವನ್ನು ಆಪ್ತವಾಗಿ ಬಿಂಬಿಸುವ ಬರಹ- `ಬೆಳ್ಳಿಹಬ್ಬದತ್ತ ಪ್ರಜಾವಾಣಿಯ ನಂಟು~. ಈ ಲೇಖನ ಜಿ.ಟಿ.ನಾರಾಯಣ ರಾಯರು ಪತ್ರಿಕೆಯೊಂದಿಗೆ ಹೊಂದಿದ್ದ ನಂಟನ್ನೂ ಚಿತ್ರಿಸುತ್ತದೆ.

ತಮ್ಮ ಮಾವ ನಾರಾಯಣ ರಾಯರ ಬಗೆಗಿನ ರುಕ್ಮಿಣಿಮಾಲಾ ಅವರ ಗೌರವ ಬ್ಲಾಗಿನ ಕೆಲವು ಬರಹಗಳಲ್ಲಿ ವ್ಯಕ್ತವಾಗುತ್ತದೆ. ರಾಯರ ಒಂದು ಸಂದರ್ಶನವೂ ಇಲ್ಲಿದೆ. ರಾಮನಗರದ ಬೆಟ್ಟಗಳು, ಎಡಕಲ್ಲು ಗುಹೆ, ನಾರಾಯಣದುರ್ಗ- ಸೊಗಸಾದ ಪ್ರವಾಸ ಬರಹಗಳೂ ಇವೆ.

ಮಾಲಾ ಲಹರಿಯ ಒಂದು ಮಾದರಿ:
ಕಳೆದ ಒಂದೂವರೆ ವರ್ಷಗಳಿಂದ (2011) ಯೋಗಾಭ್ಯಾಸಕ್ಕೆ ಹೋಗುತ್ತಿದ್ದೇನೆ. ಅದರಲ್ಲಿ ಸುಮಾರು ನಲವತ್ತರಿಂದ ಐವತ್ತು ದಿನಗಳು (ಕೆಲವು ದಿನ ಅನಿವಾರ್ಯ ಕಾರಣಗಳಿಂದ, ಇನ್ನು ಕೆಲವು ದಿನ ಕಾರಣಗಳನ್ನು ಸೃಷ್ಟಿಸಿ) ಹೋಗದೆ ಇದ್ದದ್ದೂ ಸೇರಿವೆ.

ಸಮಯ ಸಂಜೆ 5ರಿಂದ 6.15ರವರೆಗೆ. ಕ್ರಿಯಾತ್ಮಕ ಯೋಗಾಸನ, ಸೂರ್ಯ ನಮಸ್ಕಾರ, ಆಸನಗಳು ದ ನಂತರ ಕೊನೆಗೆ ಶವಾಸನ ಕ್ಕೆ ತಯಾರಿ. ಶವಾಸನವೇನು ಬಹಳ ಸುಲಭದ ಆಸನ. ಸುಮ್ಮನೆ ಮಲಗಿದರಾಯಿತು ಎನ್ನುವವರೇ ಬಹಳ ಜನ. ಕೆಲವು ಮಂದಿ ನಿದ್ದೆ ಕೂಡ ಮಾಡುತ್ತಾರಂತೆ. ಅದು ನಿದ್ರಾಸನವಾಯಿತೇ ವಿನಾ ಶವಾಸನವಾಗಲು ಸಾಧ್ಯವಿಲ್ಲ. ಆದರೆ ನನಗೆ ಮಾತ್ರ ಇದುವರೆಗೆ ಈ ಶವಾಸನದ ಮಾಯೆಯನ್ನು ಹಿಡಿಯಲಾಗಲೇ ಇಲ್ಲ.

ಶವಾಸನಕ್ಕೆ ಜಮಾಖಾನದಲ್ಲಿ ಅಂಗಾತ ಮಲಗಬೇಕು. ಒಂದೊಂದೇ ಅಂಗಗಳಿಗೆ ವಿಶ್ರಾಂತಿ ಎಂದು ಗುರುಗಳು ಹೇಳುತ್ತಾ ಹೋಗುತ್ತಾರೆ. ಎಲ್ಲ ಅಂಗಗಳು ಏನೋ ಹೇಳಿದ್ದು ಕೇಳುತ್ತವೆ. ಮನಸ್ಸಿನಲ್ಲಿ ಯಾವುದೇ ಆಲೋಚನೆಗಳು ಬೇಡ, ಬಂದರೂ ಅದನ್ನು ಅರ್ಧದಲ್ಲೇ ತುಂಡರಿಸಿ ಎಂದು ಗುರುಗಳೇನೋ ಹೇಳುತ್ತಾರೆ.

ಆದರೆ ಅಲ್ಲೇ ನನಗೆ ಎದುರಾಗುವುದು ಸಮಸ್ಯೆ. ಮನಸ್ಸಿನಲ್ಲಿ ಆಲೋಚನೆಗಳ ಮಹಾಪೂರವೇ ಮಳೆಗಾಲದಲ್ಲಿ ನದಿ ನೀರು ಹರಿದ ಹಾಗೇ ಹರಿದು ಬರುತ್ತದೆ. ತುಂಡರಿಸಲು ಪ್ರಯತ್ನಪಟ್ಟಷ್ಟೂ ಅದು ಹೆಚ್ಚೆಚ್ಚು ಬೆಳೆಯುತ್ತ ಹೋಗುತ್ತದೆ. ಎಷ್ಟು ಹೇಳಿದರೂ ಮನಸ್ಸು ವಿಶ್ರಾಂತಿ ತೆಗೆದುಕೊಳ್ಳಲೊಪ್ಪುವುದೇ ಇಲ್ಲ.

ಆಗ ನನಗೆದುರಾಗುವ ಪ್ರಶ್ನೆಗಳು, ಉದಾಹರಣೆಗೆ, ಈಗ ಗುರುಗಳು ಮಲಗಿಕೊಂಡೇ ನಮಗೆ ನಿರ್ದೇಶನ ನೀಡುತ್ತಾರೋ? ಒಂದೊಂದೇ ಅಂಗಗಳಿಗೆ ವಿಶ್ರಾಂತಿ ವಿಶ್ರಾಂತಿ ಎನ್ನುವ ಬದಲು ಶರೀರದ ಎಲ್ಲ ಅಂಗಾಂಗಗಳಿಗೆ ವಿಶ್ರಾಂತಿ ಎಂದು ಒಂದೇಸಲ ಹೇಳಿದರೆ ಸಾಕಲ್ಲವೆ? ಹೀಗೆ ಮನಸ್ಸು ಏನೆಲ್ಲ ಯೋಚಿಸುತ್ತಿದ್ದರೂ `ಈಗ ಮನಸ್ಸನ್ನು ಒಳ್ಳೆಯ ಆಲೋಚನೆಗಳತ್ತ ಕೊಂಡೊಯ್ಯೋಣ.

ಇಷ್ಟ ದೇವರನ್ನು ಪ್ರಾರ್ಥಿಸೋಣ~ ಎಂದು ಗುರುಗಳು ಹೇಳುವುದು ಕೇಳಿಸುತ್ತದೆ. ಆ ಕೂಡಲೇ ನನಗೆ ಸಂಶಯ ಶುರು. ನನಗೆ ಇಷ್ಟ ದೇವರು ಯಾರಾಗಬಹುದು? ಗಣಪತಿ, ಶಿವ, ಸುಬ್ರಹ್ಮಣ್ಯ, ವೆಂಕಟೇಶ್ವರ, ದುರ್ಗೆ... ಇವರಲ್ಲಿ ಯಾರೆಂದು ತೀರ್ಮಾನಕ್ಕೆ ಬರಲಾಗದೆ ದೇವನೊಬ್ಬನೆ ನಾಮ ಹಲವು ಎಂದು ಮನಸ್ಸನ್ನು ಸಂತೈಸುತ್ತೇನೆ.

ಶವಾಸನ ಎಂದರೆ ಅಲುಗಾಡದೆ ಮಲಗುವುದು ತಾನೆ. ಬೇರೆ ಯಾವ ಹೊತ್ತಿಗೂ ತುರಿಸದ ತಲೆ ನನಗೆ ಅದೇವೇಳೆ ಜೋರು ತುರಿಸಲು ತೊಡಗುತ್ತದೆ. ಕೈ ತನ್ನಿಂದ ತಾನೇ ತಲೆ ತುರಿಸಲು ಮೇಲೆ ಹೋಗುತ್ತದೆ. ಸೊಳ್ಳೆ ಕಾಲಿಗೇ ಕಚ್ಚಲು ಬರುತ್ತದೆ. ಸೊಳ್ಳೆ ಕಡಿದಾಗಲೂ ಅಲುಗಾಡದೆ ಇರಲು ನಾನೇನು ಕರ್ಣನಲ್ಲವಲ್ಲ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.