ಮಾಲೆ (ಐಎಎನ್ಎಸ್): ಮಾಲ್ಡೀವ್ಸ್ ವಿಶ್ವದಲ್ಲಿಯೇ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಕತಾರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ೨೦೧೩ನೇ ಸಾಲಿನ ‘ವಿಶ್ವ ಪ್ರವಾಸಿ ಪ್ರಶಸ್ತಿ’ ಪಡೆದುಕೊಂಡಿದೆ. ಮಾಲ್ಡೀವ್ಸ್ ಮೂರನೇ ಬಾರಿಗೆ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿದೆ. ‘ವಿಶ್ವ ಪ್ರವಾಸಿ ಪ್ರಶಸ್ತಿ’ಯು ವಿಶ್ವ ಪ್ರವಾಸೋದ್ಯಮ ವಲಯದ ಆಸ್ಕರ್ ಪ್ರಶಸ್ತಿ ಎಂದು ಬಣ್ಣಿಸಲಾಗಿದೆ.

ಇಂಡೋನೇಷ್ಯಾದ ಬಾಲಿ, ವೆಸ್ಟ್ಇಂಡೀಸ್ನ ಬಾರ್ಬೊಡಾಸ್, ಗ್ರೀಸ್ನ ಕುಕ್ ದ್ವೀಪ, ಮಡೇರಿಯಾ ದ್ವೀಪ, ಮಾರಿಷಸ್, ಸಿಷೇಲ್ಸ್, ಇಟಲಿಯ ಸಿಸಿಲಿ, ತಾಂಜಾನಿಯಾದ ಸೇಂಟ್ ಲೂಸಿಯಾ ಮತ್ತು ಜಂಜಿಬಾರ್ ದ್ವೀಪಗಳೂ ಸಹ ಆಕರ್ಷಕ ಪ್ರವಾಸಿ ದ್ವೀಪಗಳ ಸಾಲಿನಲ್ಲಿದ್ದು, ಪ್ರಶಸ್ತಿಗೆ ಪೈಪೋಟಿ ನಡೆಸಿದವು ಎಂದು ಮಾಧ್ಯಮಗಳು ವರದಿ ಮಾಡಿವೆ. ಪ್ರತಿಷ್ಠಿತ ಪ್ರಶಸ್ತಿಯ ಜತೆಗೆ ಮಾಲ್ಡೀವ್ಸ್ನ ಅನೇಕ ರೆಸಾರ್ಟ್ಗಳು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿವೆ.

ವಿಶ್ವದ ಪ್ರಮುಖ ಏರ್ಪೋರ್ಟ್ ದ್ವೀಪ ಪ್ರಶಸ್ತಿಯನ್ನು ಹುಲ್ಹುಲೇ ದ್ವೀಪ ಹೋಟೆಲ್ ಪಡೆದುಕೊಂಡಿದೆ. ಕನ್ರಾಡ್ ಮಾಲ್ಡೀವ್ಸ್ ರಂಗಾಲಿ ದ್ವೀಪವು ವಿಶ್ವದ
ಪ್ರಸಿದ್ದ ನೀರಿನಲ್ಲಿರುವ ರೆಸಾರ್ಟ್ ಪ್ರಶಸ್ತಿಗೆ ಭಾಜನವಾಯಿತು. ವಿಶ್ವದ ಅತ್ಯಂತ ರಮ್ಯ ರೆಸಾರ್ಟ್ ಪ್ರಶಸ್ತಿ ಇದೇ ದ್ವೀಪದ ಬಾರೋಸ್ಗೆ ಸಂದಿದೆ. ‘ಈ ಶಸ್ತಿಗಳು ಮಾಲ್ಡೀವ್ಸ್ನಲ್ಲಿ ಪ್ರವಾಸಿಗರಿಗೆ ವಿಶಿಷ್ಠ ಸೌಲಭ್ಯ ದೊರೆಯುತ್ತವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ’ ಎಂದು ಮಾಲ್ಡೀವ್ಸ್ನ ಮಾರುಕಟ್ಟೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೇಳಿದೆ.

ನವೆಂಬರ್ ತಿಂಗಳೊಂದರಲ್ಲಿಯೇ ಹತ್ತು ಲಕ್ಷಕ್ಕೂ ಅಧಿಕ ಪ್ರವಾಸಿಗರು ಮಾಲ್ಡೀವ್ಸ್ಗೆ ಭೇಟಿ ನೀಡಿದ್ದು, ಇದು ಒಂದು ದಾಖಲೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.