ಗುರುವಾರ , ಮೇ 13, 2021
24 °C

ಮಾವಿನ ಗೋದಾಮಿಗೆ ಬೆಂಕಿ: ಭಾರೀ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂತೇಬೆನ್ನೂರು: ಇಲ್ಲಿನ ಸಾಸಲು ರಸ್ತೆಯಲ್ಲಿನ ಬಾಷಾಖಾನ್ ಅವರ ಜಮೀನಿನಲ್ಲಿ ನಿರ್ಮಿಸಲಾಗಿದ್ದ ಮಾವಿನ ಗೋದಾಮಿಗೆ ಶನಿವಾರ ಮುಂಜಾನೆ ಆಕಸ್ಮಿಕ ಬೆಂಕಿ ತಗುಲಿ ಪೂರ್ಣ ಸುಟ್ಟು ಭಸ್ಮವಾಗಿದೆ.ಮಾವು ಗೇಣಿದಾರರಾದ ನಾಗರಾಜ್, ಇಮ್ರಾನ್ ಹಾಗೂ ಅಫ್ಸರ್ ಇದರಲ್ಲಿ ತೋಟಗಳಿಂದ ಕಿತ್ತು ತಂದ ಮಾವಿನ ಫಸಲನ್ನು ಸಂಗ್ರಹಿಸಿದ್ದರು. ಉತ್ತಮ ತಳಿಯ ಬಾದಾಮಿ ಜಾತಿಗೆ ಸೇರಿದ ಸುಮಾರು 10 ಟನ್‌ಗಳಷ್ಟು ಹಣ್ಣುಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಶನಿವಾರ ಮುಂಬೈಗೆ ರವಾನಿಸಲು ರಾತ್ರಿ 2ರವರೆಗೆ ಪ್ಯಾಕಿಂಗ್ ಮಾಡಿ ಮನೆಗೆ ತೆರಳಿದ ನಂತರ ಈ ಅವಘಡ ಸಂಭವಿಸಿದೆ.ರೂ. 12 ಲಕ್ಷ ಮೌಲ್ಯದ ಮಾವು, 3 ಲಕ್ಷ ಬೆಲೆ ಬಾಳುವ ಪ್ಯಾಕಿಂಗ್ ಪರಿಕರಗಳು, ತೂಕದ ಯಂತ್ರ, ಚಪ್ಪಡಿ ಕಲ್ಲುಗಳು, ಪ್ಲಾಸ್ಟಿಕ್ ಶೀಟ್‌ಗಳು ಸುಟ್ಟು ಕರಕಲಾಗಿವೆ. ಜಮೀನಿನ ಸುತ್ತ ಇದ್ದ 50 ಮಾವಿನ ಮರಗಳಿಗೆ ಹಾನಿಯಾಗಿದೆ. ಒಟ್ಟಾರೆ ರೂ. 16 ಲಕ್ಷ ನಷ್ಟ ಸಂಭವಿಸಿದೆ ಎನ್ನುತ್ತಾರೆ ಎಂ. ಸಿದ್ದಪ್ಪ.ಚನ್ನಗಿರಿ ಅಗ್ನಿಶಾಮಕ ಮತ್ತು ತುರ್ತು ಸೇವಾದಳದ ಸಿಬ್ಬಂದಿ ಬೆಂಕಿ ನಂದಿಸಿದರು.ಶುಕ್ರವಾರವಷ್ಟೇ ತೋಟಗಾರಿಕೆ ಹಾಗೂ ಸಕ್ಕರೆ ಸಚಿವ ಎಸ್.ಎ. ರವೀಂದ್ರನಾಥ್ ಮಾವಿನ ಸಂಸ್ಕರಣಾ ಘಟಕ ನಿರ್ಮಿಸುವ ಭರವಸೆ ನೀಡಿದ್ದರು. ಇಂತಹ ಆಕಸ್ಮಿಕಗಳಿಂದ ನಷ್ಟ ಸಂಭವಿಸುವುದನ್ನು ತಪ್ಪಿಸಲು ಶೀಘ್ರ ನಿರ್ಮಿಸಬೇಕು ಎಂದು ಸಿರಾಜ್ ಅಹಮದ್, ಅಂಜು ಒತ್ತಾಯಿಸಿದ್ದಾರೆ.ಪಿಎಸ್‌ಐ ಲಿಂಗನಗೌಡ ನೆಗಳೂರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.