ಬೆಂಗಳೂರು: ಕೃಷಿ ಮಾರಾಟ ಇಲಾಖೆಯು ದೇವನಹಳ್ಳಿ ಮುಖ್ಯರಸ್ತೆ ಯಲ್ಲಿರುವ ಮಾವಿನ ಹಣ್ಣಿನ ಸಗಟು ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ನೇರ ಮಾರಾಟಕ್ಕೆ ಪ್ರತ್ಯೇಕ ಮಳಿಗೆಯನ್ನು ತೆರೆದಿದೆ.

ಈ ಮಳಿಗೆಯನ್ನು ಶುಕ್ರವಾರ ಉದ್ಘಾಟಿಸಿದ ಕೃಷಿ ಮಾರಾಟ ಇಲಾಖೆಯ ನಿರ್ದೇಶಕ ಡಾ.ಸಿ.ಸೋಮ ಶೇಖರ, `ಈ ಮಳಿಗೆಯಲ್ಲಿ ರೈತರು ಮಾವಿನ ಹಣ್ಣುಗಳನ್ನು ನೇರವಾಗಿ ಮಾರಾಟ ಮಾಡಲು ಅವಕಾಶವಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ~ ಎಂದು ಅವರು ಹೇಳಿದರು. `ರೈತರ ಉತ್ಪನ್ನಗಳನ್ನು ನೇರವಾಗಿ ಖರೀದಿಸಲು ಹಾಪ್ಕಾಮ್ಸ, ಮೆಟ್ರೊ ಕ್ಯಾಷ್ ಅಂಡ್ ಕ್ಯಾರಿ, ರಿಲಾಯನ್ಸ್ ಫ್ರೆಶ್ ಸೇರಿದಂತೆ ಇತರೆ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಸದ್ಯದಲ್ಲೇ ಪ್ರಕ್ರಿಯೆ ಆರಂಭಗೊಳ್ಳಲಿದೆ~ ಎಂದು ಹೇಳಿದರು.

ಮಳಿಗೆಯ ಆವರಣದಲ್ಲೇ ರೈತರ ಮಾಹಿತಿ ಹಾಗೂ ಕುಂದುಕೊರತೆಗಳ ನಿವಾರಣಾ ಕೇಂದ್ರವನ್ನು ಉದ್ಘಾಟಿಸಲಾಯಿತು. ಹಣ ಪಾವತಿ ವಿಳಂಬ, ಅನಧಿಕೃತ ಮಾರುಕಟ್ಟೆ, ತೂಕದಲ್ಲಿ ಮೋಸ ಸೇರಿದಂತೆ ಯಾವುದೇ ದೂರನ್ನು ರೈತರು ಸಲ್ಲಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.