ಚಿಕ್ಕಬಳ್ಳಾಪುರ: ನೂತನ ಬಸ್ಗಳ ಸೌಕರ್ಯದ ಕುರಿತು ಮಾಹಿತಿ ಮತ್ತು ಪ್ರಚಾರ ನೀಡಬೇಕಿದ್ದ ಕೆಸ್ಆರ್ಟಿಸಿ ಅಧಿಕಾರಿಗಳು ಎಲ್ಲವನ್ನೂ ಮರೆತು ದಿಢೀರ್ನೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂತು. ಮಾಧ್ಯಮ ಪ್ರತಿನಿಧಿಗಳಿಗೂ ಸೇರಿದಂತೆ ಯಾರಿಗೂ ಯಾವುದೇ ಮಾಹಿತಿ ನೀಡದೇ ನೂತನ ಬಸ್ಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದಕ್ಕೆ ಕೆಲವರಿಂದ ಅಸಮಧಾನ ವ್ಯಕ್ತವಾಯಿತು.

`ಪ್ರಪ್ರಥಮ ಬಾರಿಗೆ ಎರಡೂ ತಾಲ್ಲೂಕುಗಳ ನಡುವೆ ನೂತನ ಬಸ್ಗಳ ಸಂಚಾರ ಆರಂಭಿಸಲಾಗುತ್ತಿದೆ. ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ನಿವಾಸಿಗಳಿಗೆ ಇದು ಮುಖ್ಯವಾದ ಕಾರ್ಯಕ್ರಮ. ಆದರೆ ಇದರ ಕುರಿತು ಕೆಎಸ್ಆರ್ಟಿಸಿ ಅಧಿಕಾರಿಗಳು ಅಥವಾ ಸಿಬ್ಬಂದಿಗಳಾಗಲಿ ಯಾವುದೇ ಮಾಹಿತಿ ಮತ್ತು ಪ್ರಚಾರ ನೀಡಿಲ್ಲ. ಇದರ ಕುರಿತು ಮಾಧ್ಯಮದಲ್ಲೂ ಯಾವುದೇ ವಿಷಯ ಬಂದಿಲ್ಲ~ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.

`ಅವಸರ ಅವಸರವಾಗಿ ಕೆಎಸ್ಆರ್ಟಿಸಿ ಸಂಸ್ಥೆಯ ಸಿಬ್ಬಂದಿ ಕಾಟಾಚಾರಕ್ಕೆ ಕಾರ್ಯಕ್ರಮ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು, ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಸದಸ್ಯರು ಮುಂತಾದವರನ್ನು ಆಹ್ವಾನಿಸಲು ಸಮಯ ಇರುವ ಸಂಸ್ಥೆಯ ಸಿಬ್ಬಂದಿಗಳಿಗೆ ಮಾಧ್ಯಮ ಪ್ರತಿನಿಧಿಗಳಿಗೆ ಕರೆಯುವಷ್ಟು ಅಥವಾ ತಿಳಿಸುವಷ್ಟು ಸಮಯವಿರಲಿಲ್ಲ~ ಎಂದು ಸಾರ್ವಜನಿಕರು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.