ಮಂಗಳವಾರ, ಮೇ 18, 2021
22 °C
ವಿಕಿಲೀಕ್ಸ್ ಪ್ರಕರಣ- ಸೇನಾ ನ್ಯಾಯಾಲಯದಲ್ಲಿ ವಿಚಾರಣೆ

`ಮಾಹಿತಿ ಸೋರಿಕೆಯಲ್ಲಿ ಎಡ್ವರ್ಡ್ ಭಾಗಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫೋರ್ಟ್ ಮೀಡ್ (ಅಮೆರಿಕ) (ಎಪಿ/ಎಎಫ್‌ಪಿ/ಪಿಟಿಐ): ಬೇಹುಗಾರಿಕಾ ಸಂಸ್ಥೆಗಳು ಸಂಗ್ರಹಿಸಿರುವ ರಹಸ್ಯ ಮಾಹಿತಿಗಳ ಸೋರಿಕೆ ಹಿಂದೆ ಎಡ್ವರ್ಡ್ ಸ್ನೋಡೆನ್ ಪಾತ್ರ ಇದೆ ಎಂದು ಯೋಧ ಬ್ರಾಡ್‌ಲಿ ಮ್ಯಾನಿಂಗ್ ಸೇನಾ ನ್ಯಾಯಾಲಯಕ್ಕೆ ಇತ್ತೀಚೆಗೆ ತಿಳಿಸಿದ್ದಾರೆ.ಸೇನೆಯ ಅತ್ಯಂತ ರಹಸ್ಯ ಮಾಹಿತಿಗಳನ್ನು ವಿಕಿಲೀಕ್ಸ್ ವೆಬ್‌ಸೈಟ್‌ಗೆ ಸೋರಿಕೆ ಮಾಡಿದ ಆಪಾದನೆಗೆ ಗುರಿಯಾಗಿರುವ ಮ್ಯಾನಿಂಗ್ ಅವರನ್ನು ಎರಡನೇ ಬಾರಿಗೆ ಸೇನಾ ನ್ಯಾಯಾಲಯಕ್ಕೆ ಹಾಜರು ಮಾಡಲಾಗಿತ್ತು.ಬೇಹುಗಾರಿಕಾ ಸಂಸ್ಥೆಗಳಿಗೆ ತಂತ್ರಜ್ಞಾನ ನೆರವು ನೀಡುತ್ತಿದ್ದ ಉದ್ದಿಮೆಯೊಂದರ ಸಿಬ್ಬಂದಿಯಾದ ಎಡ್ವರ್ಡ್ ಸ್ನೋಡೆನ್ ಕೂಡ ರಹಸ್ಯ ಮಾಹಿತಿಗಳ ಸೋರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಮ್ಯಾನಿಂಗ್ ಹೇಳಿಕೆ ನೀಡಿದ್ದಾರೆ. ಕೆಳಹಂತದ ಉದ್ಯೋಗಿಗಳು ಮತ್ತು ಯುವಕರಾದ ಮ್ಯಾನಿಂಗ್ ಮತ್ತು ಸ್ನೋಡೆನ್ ಅವರಿಗೆ ಮಹತ್ವದ ರಹಸ್ಯ ಮಾಹಿತಿಗಳು ದೊರಕಿದ್ದಾದರೂ ಹೇಗೆ ಎಂಬ ಬಗ್ಗೆ ಕಾನೂನು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.ಮತ್ತಷ್ಟು ಮಾಹಿತಿ ಬಹಿರಂಗ'(ಹಾಂಕಾಂಗ್ ವರದಿ): ಅಮೆರಿಕದ ಬೇಹುಗಾರಿಕಾ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಸೈಬರ್ ದಾಳಿ ನಡೆಸಿ ಕಲೆ ಹಾಕಿರುವ ರಹಸ್ಯ ಮಾಹಿತಿಗಳಲ್ಲಿ ಇನ್ನೂ ಮಹತ್ವದ ಮಾಹಿತಿಗಳು ಇವೆ. ಅವುಗಳನ್ನು ಸದ್ಯದಲ್ಲೇ ಬಹಿರಂಗ ಮಾಡಲಾಗುವುದು ಎಂದು `ದಿ ಗಾರ್ಡಿಯನ್' ಪತ್ರಿಕೆಯ ಪತ್ರಕರ್ತರೊಬ್ಬರು ತಿಳಿಸಿದ್ದಾರೆ.`ಮುಂದಿನ ಕೆಲವು ವಾರಗಳು ಇಲ್ಲವೆ ತಿಂಗಳಲ್ಲಿ ಇನ್ನಷ್ಟು ಮಹತ್ವದ ರಹಸ್ಯ ಮಾಹಿತಿಗಳನ್ನು ಬಹಿರಂಗ ಮಾಡಲಿದ್ದೇವೆ' ಎಂದು ಪತ್ರಕರ್ತ ಗ್ಲೆನ್ ಗ್ರೀನ್‌ವಾಲ್ಡ್ ಹೇಳಿದ್ದಾರೆ.ಎಡ್ವರ್ಡ್ ಸ್ನೋಡೆನ್ ನೀಡಿದ ದಾಖಲೆ ಮತ್ತು ಮಾಹಿತಿಗಳನ್ನು ಆಧರಿಸಿ ಗ್ರೀನ್‌ವಾಲ್ಡ್ ಅವರು ಕಳೆದ ವಾರ ವರದಿ ಮಾಡಿದ್ದರು.ಆಶ್ರಯ ನೀಡಲು ಮುಂದಾದ ರಷ್ಯಾ

ಮಾಸ್ಕೊ ವರದಿ: ಒಬಾಮ ಆಡಳಿತ ತಲ್ಲಣಗೊಳ್ಳುವಂತೆ ಮಾಡಿರುವ ಎಡ್ವರ್ಡ್ ಸ್ನೋಡೆನ್ ಅವರಿಗೆ ರಷ್ಯಾ ಆಶ್ರಯ ನೀಡಲು ಮುಂದಾಗಿದೆ.`ಎಡ್ವರ್ಡ್ ಏನಾದರೂ ಆಶ್ರಯ ನೀಡುವಂತೆ ಕೋರಿದರೆ ಅದನ್ನು ಪರಿಶೀಲಿಸಲಾಗುವುದು' ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆಂದು ಅವರ ವಕ್ತಾರರು ಮಂಗಳವಾರ ತಿಳಿಸಿದ್ದಾರೆ.ಎಡ್ವರ್ಡ್ ಎಲ್ಲಿದ್ದಾರೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಆದರೆ, ಅವರು ಹಾಂಕಾಂಗ್‌ನಲ್ಲಿ ತಲೆಮರೆಸಿಕೊಂಡಿದ್ದಾರೆಂದು ನಂಬಲಾಗಿದೆ. ಈ ಹಿನ್ನೆಲೆಯಲ್ಲಿ ಎಡ್ವರ್ಡ್ ಅವರನ್ನು ಗಡಿಪಾರು ಮಾಡುವಂತೆ ಹಾಂಕಾಂಗ್ ಆಡಳಿತವನ್ನು ಅಮೆರಿಕ ಒತ್ತಾಯಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.