ಬುಧವಾರ, ಜನವರಿ 22, 2020
21 °C

ಮಿಜೋರಾಂ: ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಜವಾಲ್ (ಪಿಟಿಐ): ಭಾನುವಾರ ಪ್ರಕಟಗೊಂಡ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದಿಂದ ಕಂಗೆಟ್ಟಿದ್ದ ಕಾಂಗ್ರೆಸ್‌, ಮಿಜೋರಾಂ ವಿಧಾನಸಭೆ ಫಲಿತಾಂಶದಲ್ಲಿ ಗೆಲುವಿನ ನಗೆ ಬೀರಿದೆ.

40 ಸದಸ್ಯ ಬಲದ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರಿದ್ದು, ಕಾಂಗ್ರೆಸ್‌ ಈಗಾಗಲೇ ಸ್ಪಷ್ಟ ಬಹುಮತ ಲಭಿಸಿದೆ.

ಈವರೆಗೂ 31 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ 2 ಸ್ಥಾನದಲ್ಲಿ ಮನ್ನಡೆ ಕಾಯ್ದುಕೊಂಡಿದೆ. ಮಿಜೋ ನ್ಯಾಷನಲ್‌ ಫ್ರಂಟ್‌ 5 ಸ್ಥಾನಗಳನ್ನು ಬಾಚಿಕೊಂಡಿದ್ದು 1 ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಎಂಪಿಸಿ ಒಂದು ಕ್ಷೇತ್ರದಲ್ಲಿ ಜಯ ಕಂಡಿದೆ.

ಮಿಜೋರಾಂ ವಿಧಾನಸಭೆಯ ‘ಮ್ಯಾಜಿಕ್’ ಸಂಖ್ಯೆ 21 ಆಗಿದ್ದು, ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ಸ್‌ ಸ್ಪಷ್ಟ  ಬಹುತೇಕ ಪಡೆದಂತಾಗಿದೆ.

ಪ್ರತಿಕ್ರಿಯಿಸಿ (+)