ಮಂಗಳವಾರ, ಮೇ 11, 2021
25 °C

ಮಿತ್ತಲ್ ರೈಲ್ವೆ ಸುರಕ್ಷತಾ ಆಯುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಕ್ಷಿಣ ವಲಯ ರೈಲ್ವೆ ಸುರಕ್ಷತಾ ಆಯುಕ್ತರಾಗಿ (ಸಿಆರ್‌ಎಸ್) ಎಸ್.ಕೆ.ಮಿತ್ತಲ್ ಇತ್ತೀಚೆಗೆ ಅಧಿಕಾರ ವಹಿಸಿಕೊಂಡರು. ದಕ್ಷಿಣ ವಲಯ ರೈಲ್ವೆ, ನೈರುತ್ಯ ರೈಲ್ವೆ ಹಾಗೂ ಬೆಂಗಳೂರು ಮೆಟ್ರೊ ರೈಲ್ವೆ ಸುರಕ್ಷತೆಯ ಜವಾಬ್ದಾರಿಯನ್ನು ಇವರು ನಿರ್ವಹಿಸಲಿದ್ದಾರೆ.ಪಂಜಾಬ್ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರ್ ಪದವಿ ಪಡೆದಿರುವ ಇವರು ಭಾರತೀಯ ರೈಲ್ವೆ ಎಂಜಿನಿಯರ್‌ಗಳ ಸೇವೆಗೆ 1980ರಲ್ಲಿ ಸೇರ್ಪಡೆಯಾದರು. ಸಂಬಲಾಪುರದಲ್ಲಿ ಹೆಚ್ಚುವರಿ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ ಇವರು ದಕ್ಷಿಣ ಕೇಂದ್ರೀಯ ರೈಲ್ವೆಯ ನಿರ್ಮಾಣ ವಿಭಾಗದಲ್ಲಿ ಮುಖ್ಯ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದರು. ಜೈಪುರದಲ್ಲಿ ಮುಖ್ಯ ಹಳಿ ಎಂಜಿನಿಯರ್ ಆಗಿಯೂ ಅವರು ಕರ್ತವ್ಯ ನಿರ್ವಹಿಸಿದ್ದಾರೆ.ದಕ್ಷಿಣ ವಲಯ ರೈಲ್ವೆ ಸುರಕ್ಷತಾ ಆಯುಕ್ತ ದಿನೇಶ್ ಕುಮಾರ್ ಸಿಂಗ್ ಅವರು ಮಿತ್ತಲ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.