ಜಾತ್ರೆಗಳಲ್ಲಿ ಕಡಲೆಪುರಿ, ಮಿಠಾಯಿ, ಬಣ್ಣದ ಚೆಂಡು–ಪೀಪಿ-, ಆಟದ ಸಾಮಾನುಗಳ ಟೆಂಟ್ಗಳನ್ನು ನೆನಪಿಸುವಂತಹ ಪ್ಲಾಸಿಕ್ ಚಪ್ಪರ ಹೊದ್ದಿರುವ ಅಂಗಡಿಗಳ ಸಾಲು; ಬೆಳಕು ಕಳೆದು ಕತ್ತಲೆ ಮೊದಲಾಗುತ್ತಲೇ ಬೆಳಗುವ ಗ್ಯಾಸ್ಗಳು; ಅದರ ಬೆಳಕಲ್ಲಿ ಮಿನುಗುವ, ಒಂದರ ಮೇಲೊಂದರಂತೆ ಜೋಡಿಸಿಟ್ಟ ತರಹೇವಾರಿ ಮಾವುಗಳು... ಬಂದು ಕೊಳ್ಳುವ ಗ್ರಾಹಕರ ಜತೆಗೆ ಬೆಲೆ ಕೇಳಿ ಹೋಗುವ ಗ್ರಾಹಕರು. ಇದು ನಗರದ ಜಯಮಹಲ್ ರಸ್ತೆ ದಾಟಿ ಟಿವಿ ಟವರ್ನತ್ತ ಸಾಗಿದರೆ ಎಡಭಾಗದಲ್ಲಿ ಇರುವ ವಿಶಾಲ ಫುಟ್ಪಾತ್ ಮೇಲೆ ಕಾಣುವ ದೃಶ್ಯ.

ನಗರದ ಸ್ನೋಸಿಟಿಯಿಂದ ತೆರೆದುಕೊಳ್ಳುವ ಇಂಥ ಅಂಗಡಿಗಳ ಸಾಲು ಫನ್ ವರ್ಲ್ಡ್ ಗೇಟ್ ದಾಟಿ ಬೆಳೆದಿದೆ. ಸಂಖ್ಯೆಯಲ್ಲಿ ಸುಮಾರು 45ಕ್ಕೂ ಹೆಚ್ಚಾಗಿರುವ ಅಂಗಡಿಗಳು ಅಲ್ಲೊಂದು ಮಾವಿನ ಲೋಕವನ್ನು ಅನಾವರಣಗೊಳಿಸಿವೆ. ಹಾಗೆಂದು ಇದೇನೂ ಮಾವಿನ ಮೇಳವಲ್ಲ.

‘ಮಿನಿ ಮಾರುಕಟ್ಟೆ’ಯ ಕಲ್ಪನೆಗೆ ಇಂಬುಕೊಡುವಂತಿರುವ ಸಾಲು ಸಾಲು ಅಂಗಡಿಗಳಲ್ಲಿ ಅಚ್ಚುಕಟ್ಟಾಗಿ ಜೋಡಿಸಿರುವ ಬಾದಾಮಿ, ಆಲ್ಫೋನ್ಸಾ, ರಸಪುರಿ, ಬೈಗಾನ್ಪಲ್ಲಿ, ಸೈಂದೂರ, ಮಲ್ಲಿಕಾ, ಹಿಮಾಯತ್, ಮಲಗೋವಾ, ದಶೇರಿ, ತೋತಾಪುರಿ, ಚೋಸಾ, ಲಂಗ್ರಾ ಹೀಗೆ ತರಹೇವಾರಿ ಮಾವುಗಳು ತಮ್ಮದೇ ವಿಶೇಷತೆಗಳಿಂದ ನೋಡುಗರ ಬಾಯಿಯಲ್ಲಿ ನೀರೂರಿಸುತ್ತವೆ.

ಈ ಮಾರ್ಗದಲ್ಲಿ ವೇಗದಿಂದ ಓಡುತ್ತಿರುವ ವಾಹನಗಳ ಸವಾರರನ್ನು ‘ಆಲ್ಫೋನ್ಸಾ’ ಮಾವು ತನ್ನ ಕಂಪಿನಿಂದಲೇ ಗ್ರಾಹಕರನ್ನಾಗಿ ಬದಲಾಯಿಸುತ್ತವೆ. ಬಗೆ ಬಗೆಯ ಮಾವುಗಳು ಬಣ್ಣದಿಂದಲೇ ಗಮನ ಸೆಳೆಯುತ್ತವೆ.

‘ಇಪ್ಪತ್ತು ವರ್ಷಗಳಿಂದಲೂ ಇಲ್ಲಿ ಮಾವಿನ ವ್ಯಾಪಾರ ಮಾಡುತ್ತಿದ್ದೇವೆ. ಆಗೆಲ್ಲ ಅರಮನೆ ಮೈದಾನದಲ್ಲಿ ಅಂಗಡಿ ಹಾಕುತಿದ್ದೆವು. ಕೆಲವು ವರ್ಷಗಳಿಂದ ಫುಟ್ಪಾತ್ ಮೇಲೆ ಅಂಗಡಿಗಳನ್ನು ಹಾಕುತ್ತಿದ್ದೇವೆ. ರಸ್ತೆ ಮೇಲಿನ ವಾಹನ ಸವಾರರೇ ನಮ್ಮ ಗ್ರಾಹಕರು’ ಎಂದು ‘ಮಿನಿ ಮಾರುಕಟ್ಟೆ’ ಇತಿಹಾಸ ಬಿಚ್ಚಿಡುತ್ತಾರೆ ವ್ಯಾಪಾರಿ ಮುಕರಮ್.

ಮಾರುಕಟ್ಟೆಯಲ್ಲಿ ಮಾವು ಜೋರಾಗಿಯೇ ಲಗ್ಗೆ ಇಟ್ಟಿದ್ದರೂ ಬೇಡಿಕೆ ಮಾತ್ರ ಕಳೆದ ವಾರದ ತನಕ ಅಂದುಕೊಂಡಷ್ಟು ಕುದುರಿರಲಿಲ್ಲ. ಅದಕ್ಕೆ ದರ ಹಾಗೂ ಬಿಸಿಲೇ ಕಾರಣ. ಮಾವು ದೇಹದ ಉಷ್ಣವನ್ನು ಸ್ವಲ್ಪ ಹೆಚ್ಚು ಮಾಡುವಂಥ ಹಣ್ಣು. ಧಗೆಯಲ್ಲಿ ಅದನ್ನು ತಿನ್ನಲು ಹಿಂದೇಟು ಹಾಕುವವರೂ ಇದ್ದಾರೆ. ಆದರೆ ಕಳೆದ ವಾರ ಸುರಿದ ಭರಣಿ ಮಳೆ ವ್ಯಾಪಾರವನ್ನು ಸ್ವಲ್ಪ ಚುರುಕುಗೊಳಿಸಿದೆ’ ಎನ್ನುವುದು ಬಹುತೇಕ ವ್ಯಾಪಾರಿಗಳ ಅಭಿಮತ.

‘ಇದೇ ಫುಟ್ಪಾತ್ ಮೇಲೆ ಪ್ರತಿ ವರ್ಷದಂತೆ ಈ ಸಲವೂ ಅಂಗಡಿ ಹಾಕಿದ್ದೇವೆ. ಮಾವಿನ ಸೀಜನ್ ಮುಗಿಯುವ ತನಕ ಇಲ್ಲಿಯೇ ವಾಸ. ಹಸಿ ಮಾವು ತಂದು ಭತ್ತದ ಹುಲ್ಲು ಹಾಕಿ ಹಣ್ಣಾಗಿಸಿ ಮಾರುತ್ತೇವೆ. ಪೌಡರ್ ಹಾಕಿ ಹಣ್ಣು ಮಾಡುವುದಿಲ್ಲ’ ಎನ್ನುತ್ತಾರೆ ಕಳೆದೊಂದು ದಶಕದಿಂದಲೂ ಇಲ್ಲಿ ಮಾವು ಮಾರುವ, ಮೂಲತಃ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ವ್ಯಾಪಾರಿಯಾದ ಉನ್ನಾಮಲೈ.

ನಗರದ ವಿವಿಧೆಡೆ ಮಾವಿನ ದರ ಬೇರೆ ಬೇರೆಯಾಗಿರುವಂತೆ ಈ ‘ಮಿನಿ ಮಾರುಕಟ್ಟೆ’ಯಲ್ಲಿ ಅಂಗಡಿಯಿಂದ ಅಂಗಡಿಗೆ ದರದಲ್ಲಿ ವ್ಯತ್ಯಾಸವಿದೆ. ಒಬ್ಬೊಬ್ಬ ವ್ಯಾಪಾರಿಯೂ ಗುಣಮಟ್ಟದ ಆಧಾರದ ಮೇಲೆ ಒಂದೊಂದು ಬೆಲೆ ಹೇಳುತ್ತಾರೆ. ಬಾದಾಮಿ ಹಣ್ಣಿನ ದರ ಕೆ.ಜಿ.ಗೆ ₨70ರಿಂದ ಶುರುವಾದರೆ, ರಸಪುರಿ ಬಗೆಯ ಹಣ್ಣುಗಳು ಪ್ರತಿ ಕೆ.ಜಿ.ಗೆ ₨ 45ರಿಂದಲೂ ಸಿಗುತ್ತವೆ.

ಬೈಗಾನ್ಪಲ್ಲಿ ₨40ರಿಂದ ಶುರುವಾದರೇ ದಶೇರಿ ದರ ₨55ರಿಂದ 100ರವರೆಗೂ ಇದೆ. ಮಲ್ಗೋವಾ ಬೆಲೆ ₨ 60–100ರತನಕ ಇದೆ. ಆಲ್ಫಾನ್ಸೋ ಹಣ್ಣುಗಳ ವ್ಯಾಪಾರ ₨ 70ರಿಂದ 110ರವರೆಗೂ ನಡೆಯುತ್ತಿದೆ.

‘ಈ ಬಾರಿ ಇಳುವರಿ ಕಡಿಮೆ ಇದೆ. ಬೆಲೆ ಜಾಸ್ತಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರತಿ ಕೆ.ಜಿ. ಹಣ್ಣುಗಳಲ್ಲಿ 10–15 ರೂಪಾಯಿ ಹೆಚ್ಚಳವಾಗಿದೆ’ ಎಂಬುದು ವ್ಯಾಪಾರಿ ಮೊಹಮ್ಮದ್ ಖಲೀಲ್ ಅಭಿಮತ.

‘ನಾವು ತಮಿಳುನಾಡಿನವರು. ಅಕ್ಕಪಕ್ಕದ ಬಹುತೇಕ ಅಂಗಡಿಗಳು ನಮ್ಮ ಕಡೆಯ ಜನರದ್ದೇ. ಕಳೆದ ಹಲವು ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇವೆ’ ಎನ್ನುವ ತಮಿಳುನಾಡಿನ ತಿರುವನ್ನಾಮಲೈನವರಾದ ಬಲರಾಮ್, ‘ಬಾದಾಮಿ ಸ್ವೀಟ್ ಜಾಸ್ತಿ. ಅದಕ್ಕೆ ರಿಸ್ಪಾನ್ಸ್ ಚೆನ್ನಾಗಿದೆ’ ಎಂದೂ ಹೇಳುತ್ತಾರೆ.

ಮಾವು ಮಾರುಕಟ್ಟೆಗೆ ಕಾಲಿಡುತ್ತಲೇ ಆಕಾರ ತಳೆಯುವ ‘ಟೆಂಟ್’ ರೂಪದ ಅಂಗಡಿಗಳು ಸೀಜನ್ ಮುಗಿಯುತ್ತಿದ್ದಂತೆ ಕಣ್ಮರೆಯಾಗುತ್ತವೆ. ಮೊದಲೆಲ್ಲ 20 ಅಂಗಡಿಗಳಷ್ಟೇ ಇರುತ್ತಿದ್ದವು. ವರ್ಷದಿಂದ ವರ್ಷಕ್ಕೆ ಅಂಗಡಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ವ್ಯಾಪಾರ ಮಾತ್ರ ಇಳಿಮುಖವಾಗುತ್ತಿದೆ. ಇಷ್ಟು ಅಂಗಡಿಗಳಲ್ಲಿ ಸುಮಾರು 18 ಅಂಗಡಿಗಳು ಬೆಂಗಳೂರಿನ ವ್ಯಾಪಾರಿಗಳದ್ದು ಇರಬಹುದು. ಮಿಕ್ಕ ಎಲ್ಲವೂ ತಮಿಳುನಾಡು ಮತ್ತಿತ್ತರ ರಾಜ್ಯಗಳ ಜನರದ್ದು. ತಮಿಳುನಾಡಿನ ವ್ಯಾಪಾರಿಗಳ ಸಂಖ್ಯೆ ಹೆಚ್ಚು. ಪ್ರತಿ ವರ್ಷವೂ ಹೆಚ್ಚುತ್ತಿರುವ ಅಂಗಡಿಗಳ ಸಂಖ್ಯೆ ಲಾಭಾಂಶಕ್ಕೆ ಲಗಾಮು ಹಾಕುತ್ತಿವೆ ಎಂಬ ಕೊರಗು ಸ್ಥಳೀಯ ವ್ಯಾಪಾರಿಗಳ ಮೊಗದಲ್ಲಿ ಕಾಣಿಸುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.