ಸೋಮವಾರ, ಮೇ 17, 2021
28 °C

ಮಿನಿ ವಿಧಾನಸೌಧದಲ್ಲಿ ಸೌಲಭ್ಯ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ಪಟ್ಟಣದ ಮಿನಿ ವಿಧಾನಸೌಧ ಒಳಾಂಗಣ ಪ್ರಾಂಗಣದಲ್ಲಿ ಆಸನಗಳ ಇಲ್ಲದೇ ವಿವಿಧ ಗ್ರಾಮಗಳಿಂದ ಬರುವ ಸಾರ್ವಜನಿಕರು ತೀವ್ರ ತೊಂದರೆಗೊಳಗಾಗುತ್ತಿದ್ದಾರೆ.ವಿಧವಾ, ವೃದ್ಧಾಪ್ಯ ವೇತನ, ಅಂಗವಿಕಲ ಮಾಸಾಶನ, ಪಡಿತರ ಚೀಟಿ ಮತ್ತಿತರ ಕೆಲಸಗಳ ಸಂಬಂಧ ಇಲ್ಲಿಗೆ ಬರುವ ಸಾರ್ವಜನಿಕರು ಕೆಲಸ ವಿಳಂಬವಾದಲ್ಲಿ ನಿಂತೇ ಕಾಲ ಕಳೆಯಬೇಕಿದೆ.ಅವರಿಗಾಗಿ  ಕುಳಿತುಕೊಳ್ಳುವುದಕ್ಕೆ ಕನಿಷ್ಠ ಆಸನಗಳ ಸೌಲಭ್ಯವೂ ಇಲ್ಲ. ಸೌಕರ್ಯ ಕಲ್ಪಿಸದ ತಾಲ್ಲೂಕು ಆಡಳಿತದ ಕ್ರಮದ ಬಗ್ಗೆ ಜನ ಬೇಸರ ವ್ಯಕ್ತಪಡಿಸಿದ್ದಾರೆ.ಈ ಸಮಸ್ಯೆ ಇಂದು ನಿನ್ನೆಯದೇನಲ್ಲ. ಪಟ್ಟಣದಲ್ಲಿ ಮಿನಿ ವಿಧಾನಸೌಧ ಕಚೇರಿ ಉದ್ಘಾಟನೆ ಆದಾಗಿನಿಂದಲೂ ಇದೆ. ಯುವಕರು, ಮಧ್ಯ ವಯಸ್ಸಿನ ಪುರುಷರು ಹೋಟೆಲ್‌ಗಳಿಗೆ ಹೋಗಬಹುದು. ಆದರೆ, ವೃದ್ಧರು,  ಮಹಿಳೆಯರು ಎಲ್ಲಿಗೂ ಹೋಗಲಾದರೆ ನಿಂತೇ ಕಾಲ ಕಳೆಯುವಂತಾಗಿದೆ.ಅಲ್ಲದೆ ಕುಡಿಯುವ ನೀರು, ಪಹಣಿಗಾಗಿ ತಾಸುಗಟ್ಟಲೇ ನಿಲ್ಲುವವರಿಗಾಗಿ ನೆರಳಿನ ವ್ಯವಸ್ಥೆಯನ್ನು ಮಾಡಬೇಕು ಎನ್ನುವುದು ಜನರ ಬೇಡಿಕೆ. ಈ ಕುರಿತು ತಹಶೀಲ್ದಾರ್ ಬಾಲರಾಜ ದೇವರಖಾದ್ರ ಅವರನ್ನು  ಸಂಪರ್ಕಿಸಿದಾಗ, `ಮೂಲಸೌಕರ್ಯಗಳ ಕೊರತೆ ಇರುವುದು ಈಗಾಗಲೇ ಗಮನಕ್ಕೆ ಬಂದಿದೆ. ಅಗತ್ಯ ಸೌಲಭ್ಯ ಕಲ್ಪಿಸಲು ರೂ. 6 ಲಕ್ಷ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ' ಎಂದು ಹೇಳಿದರು.`ಆಸನ, ಕುಡಿಯುವ ನೀರು ಸೌಲಭ್ಯ ಒದಗಿಸಬೇಕು ಎಂಬ ಬೇಡಿಕೆಯು ಸೂಕ್ತವಾದುದು. ಒಳಾಂಗಣ ಪ್ರಾಂಗಣದಲ್ಲಿ ಆಸನ ಆಳವಡಿಸಿದರೆ, ವ್ಯರ್ಥ ಕಾಲಹರಣ ಮಾಡುವವರು ಕುಳಿತುಕೊಂಡು ಇತರರಿಗೆ ತೊಂದರೆ ನೀಡಬಹುದು ಎಂಬ ಅಭಿಪ್ರಾಯವೂ ಇದೆ . ಆದರೂ ವೃದ್ಧರು, ಮಹಿಳೆಯರಿಗಾಗಿ ಆಸನ ಸೌಕರ್ಯ ಕಲ್ಪಿಸಲು, ಪಹಣಿ ವಿತರಣಾ ಕೇಂದ್ರ ಹೊರಗೆ ತಾತ್ಕಾಲಿಕ ನೆರಳಿನ ವ್ಯವಸ್ಥೆ, ಕುಡಿವ ನೀರಿನ ಸೌಕರ್ಯ ಕಲ್ಪಿಸಲು ಒತ್ತು ನೀಡಲಾಗುವುದು' ಎಂದು ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.