ಬುಧವಾರ, ಜೂನ್ 16, 2021
23 °C

ಮಿನುಗು ಮಿಂಚು: ಪ್ರತಿಭೆಯ ಖನಿ ಬಾಲಚಂದರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಬಾಲಚಂದರ್ ಯಾರು?

1930ರಲ್ಲಿ ಹುಟ್ಟಿದ ಕೆ.ಬಾಲಚಂದರ್ ಹೆಸರಾಂತ ಸಿನಿಮಾ ನಿರ್ದೇಶಕ, ಚಿತ್ರಕಥಾ ಬರಹಗಾರ ಹಾಗೂ ನಿರ್ಮಾಪಕ. ವ್ಯಕ್ತಿ ನೆಲೆಯ ಅಂತರ್ಮುಖಿ ಸಮಸ್ಯೆಗಳನ್ನು ಬಿಂಬಿಸುವ ಚಿತ್ರಗಳಿಗೆ ಹೆಸರಾದ ಅವರು ತಮಿಳುನಾಡಿನವರು. ಸಾಮಾಜಿಕ ಹಾಗೂ ರಾಜಕೀಯ ಸಮಸ್ಯೆಗಳನ್ನು ಬಿಂಬಿಸುವ ಚಿತ್ರಗಳನ್ನೂ ಅವರು ಮಾಡಿದ್ದಾರೆ.ಯಾವ ಭಾಷೆಗಳಲ್ಲಿ ಚಿತ್ರಗಳನ್ನು ಮಾಡಿದ್ದಾರೆ?


ಅವರ ಬಹುತೇಕ ಚಿತ್ರಗಳು ತಮಿಳು ಭಾಷೆಯವು. ತೆಲುಗು, ಕನ್ನಡ ಹಾಗೂ ಹಿಂದಿಯಲ್ಲೂ ಕೆಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ತೆಲುಗಿನ ತಮ್ಮದೇ `ಮರೊ ಚರಿತ್ರ~ ಆಧರಿಸಿದ `ಏಕ್ ದೂಜೆ ಕೇ ಲಿಯೇ~ ಹಿಂದಿಯಲ್ಲಿ ಜನಪ್ರಿಯವಾಯಿತು.ಅವರ ಪ್ರಶಸ್ತಿ ಪಡೆದ ಚಿತ್ರಗಳು ಯಾವುವು?

ಇರು ಕೊಡುಗಳ್ (1969), ಅಪೂರ್ವ ರಾಗಂಗಳ್ (1975), ತಣೀರ್ (1981), ಹಾಗೂ ಅಚಮಿಲ್ಲೈ ಅಚಮಿಲ್ಲೈ (1984) ತಮಿಳಿನ ಶ್ರೇಷ್ಠ ಚಿತ್ರ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದಿವೆ. 1987ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಬಾಲಚಂದರ್ ಅವರಿಗೆ 2010ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿತು.ಟೀವಿಯಲ್ಲೂ ಅವರು ಕೆಲಸ ಮಾಡಿದ್ದಾರಾ?

ಹೌದು. `ಕೈ ಅಳವು ಮನಸು~, `ರಾಯಿಲ್ ಸ್ನೇಹಂ~ ಹಾಗೂ `ಸಹನಾ~ ಅವರು ನಿರ್ದೇಶಿಸಿದ ತಮಿಳಿನ ಜನಪ್ರಿಯ ಧಾರಾವಾಹಿಗಳು.ಅವರು ಅವಕಾಶ ಕೊಟ್ಟ ನಂತರ ಅತಿ ಜನಪ್ರಿಯರಾದವರು ಯಾರು?

ಸೂಪರ್‌ಸ್ಟಾರ್ ರಜನೀಕಾಂತ್. `ಅಪೂರ್ವ ರಾಗಂಗಳ್~ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ್ದ ರಜನೀಕಾಂತ್ ಆಮೇಲೆ ಉತ್ತುಂಗಕ್ಕೇರಿದರು. ಕಮಲ ಹಾಸನ್, ರಮೇಶ್ ಅರವಿಂದ್, ಪ್ರಕಾಶ್ ರೈ ಮೊದಲಾದ ನಟರ ಬೆಳವಣಿಗೆಗೆ ಕಾರಣರಾದವರೂ ಇದೇ ಬಾಲಚಂದರ್. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.