ಸೋಮವಾರ, ಏಪ್ರಿಲ್ 19, 2021
23 °C

ಮಿಮ್ಸ್ ವಿರುದ್ಧ ಅರ್ಜಿ: ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಂಡ್ಯ ವೈದ್ಯಕೀಯ ಕಾಲೇಜಿಗೆ ಡಾ.ಪುಷ್ಪಾ ಸರಕಾರ್ ಅವರನ್ನು ಪ್ರಭಾರ ನಿರ್ದೇಶಕನ್ನಾಗಿ ನೇಮಕ ಮಾಡಿರುವ ಕ್ರಮವನ್ನು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾ ಸಕ್ತಿ ಅರ್ಜಿ ಮೂಲಕ ಪ್ರಶ್ನಿಸ ಲಾಗಿದೆ.ಇವರ ಜೊತೆಗೆ ಡಾ.ಹರೀಶ್ ಅವರನ್ನು ಚರ್ಮರೋಗ ವಿಭಾಗದ ಸಹಾಯಕ ಉಪನ್ಯಾಸಕರನ್ನಾಗಿ ಮಾಡಿರುವ ಕ್ರಮವನ್ನೂ ಟಿ.ಯಶ ವಂತ ಹಾಗೂ ಇತರರು ಪ್ರಶ್ನಿಸಿದ್ದಾರೆ.ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರ, ಆರೋಗ್ಯ ಮತ್ತು ಕುಟುಂಬ   ಕಲ್ಯಾಣ ಇಲಾಖೆ, ಕಾಲೇಜು ಹಾಗೂ ಇವರಿಬ್ಬರಿಗೂ ನೋಟಿಸ್ ಜಾರಿಗೆ ಮುಖ್ಯ ನ್ಯಾಯ ಮೂರ್ತಿ ಜೆ.ಎಸ್. ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಶುಕ್ರವಾರ ಆದೇಶಿಸಿದೆ.ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಇಲಾಖೆಗಳಿಂದ ವಜಾ ಗೊಂಡ ಸಿಬ್ಬಂದಿಯನ್ನು ವೈದ್ಯಕೀಯ ಕಾಲೇಜಿಗೆ ನೇಮಕ ಮಾಡಿಕೊಳ್ಳ ಬಾರದು ಎನ್ನುವುದು ನಿಯಮ. ಆದರೆ ಮೈಸೂರು ವೈದ್ಯಕೀಯ ಕಾಲೇಜಿನಿಂದ ವಜಾಗೊಂಡಿರುವ ಪುಷ್ಪಾ ಅವರನ್ನು ನೇಮಕ ಮಾಡ ಲಾಗಿದೆ. ಇದು ಕಾನೂನು ಬಾಹಿರ. ಇವರಿಗಿಂತ ಸೇವೆಯಲ್ಲಿ ಹಿರಿಯರಾದ ಅನೇಕ ಸಿಬ್ಬಂದಿ ಇರುವಾಗ ಅದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎನ್ನು ವುದು ಅರ್ಜಿದಾರರ ವಾದ. ಅದೇ ರೀತಿ ಹರೀಶ್ ಅವರು ಕೂಡ ಸೂಕ್ತ ಅರ್ಹತೆ ಹೊಂದಿಲ್ಲ ಎನ್ನುವುದು ಅವರ ಆರೋಪ.ಈ ಹಿನ್ನೆಲೆಯಲ್ಲಿ ಪುಷ್ಪಾ ಅವರನ್ನು ಉಪನ್ಯಾಸಕರನ್ನಾಗಿ ಮಾಡಿ 2006ರ ಜೂನ್ 6ರಂದು ಹೊರಡಿಸಲಾದ ಆದೇಶ ಹಾಗೂ ಪ್ರಭಾರ ನಿರ್ದೇಶಕ ರನ್ನಾಗಿ ಮಾಡಿ 2009ರ ಡಿ.17 ರಂದು ಹೊರಡಿಸಲಾದ ಆದೇಶಗಳ ರದ್ದತಿಗೆ ಅರ್ಜಿದಾರರು ಕೋರಿದ್ದಾರೆ. ಅರ್ಹ ಕಾಯಂ ನಿರ್ದೇಶಕರ ನೇಮಕ ಮಾಡಲು ಸರ್ಕಾರಕ್ಕೆ ನಿರ್ದೇಶಿಸು ವಂತೆ ಅವರು ಮನವಿ ಮಾಡಿಕೊಂಡಿ ್ದದಾರೆ. ವೈದ್ಯಕೀಯ ಕಾಲೇಜಿನಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕೊರತೆ ಇದೆ. ಈ ಸಿಬ್ಬಂದಿಗೆ ಕನಿಷ್ಠ ಅರ್ಹತೆಯನ್ನು ಇದುವರೆಗೆ ಗುರುತಿಸಿಲ್ಲ. ಇಷ್ಟೇ ಅಲ್ಲದೇ ಆಸ್ಪತ್ರೆ ಹಾಗೂ ಕಾಲೇಜಿನಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದು, ಈ ಬಗ್ಗೆ ಸೂಕ್ತ ಕ್ರಮಕ್ಕೆ ಆದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.

ವಿಚಾರಣೆ ಮುಂದೂಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.