ಮಂಗಳವಾರ, ಜೂನ್ 22, 2021
28 °C

ಮಿಮ್ಸ ಪ್ರಥಮ ಪದವಿ ಪ್ರದಾನ ಸಮಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿಮ್ಸ ಪ್ರಥಮ ಪದವಿ ಪ್ರದಾನ ಸಮಾರಂಭ

ಮಂಡ್ಯ: ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆಯನ್ನು ನೀಡುವ ಬದ್ಧತೆ ಮತ್ತು ಅವರೊಂದಿಗೆ ಆತ್ಮೀಯವಾಗಿ ಸ್ಪಂದಿಸುವ ಮನೋಭಾವದ ಜೊತೆಗೆ, ಪ್ರಸಕ್ತ ಸ್ಪರ್ಧಾತ್ಮಕ ಯುಗದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅರಿಯುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಶ್ರೀಪ್ರಕಾಶ್, ನೂತನ ವೈದ್ಯಕೀಯ ಪದವೀಧರರಿಗೆ ಸಲಹೆ ಮಾಡಿದ್ದಾರೆ.ಗುರುವಾರ ನಡೆದ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸಂಸ್ಥೆಯ ಮೊದಲ, ವೈದ್ಯರಾಗಿ ರೂಪುಗೊಂಡಿರುವ ತಂಡದ ನೂತನ ಪದವೀಧರರಿಗೆ ಪದವಿ ಪ್ರದಾನ ಮಾಡಿದ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡುತ್ತಿದ್ದರು.ವಿವಿಧ ಕೋರ್ಸ್‌ಗಳಲ್ಲಿ ವೈದ್ಯಕೀಯ ಪದವಿ ಕೋರ್ಸ್ ಪೂರೈಸಿದ  86 ವಿದ್ಯಾರ್ಥಿಗಳಿಗೆ, ವಿವಿಧ ವಿಭಾಗಗಳ ಮುಖ್ಯಸ್ಥರು, ನೂತನ ಪದವೀಧರರ ಪೋಷಕರು, ವಿದ್ಯಾರ್ಥಿ ಸಮೂಹದ ಸಂಭ್ರಮದ ನಡುವೆ ಪದವಿ ಪ್ರದಾನ ಮತ್ತು ನೀತಿ ಸಂಹಿತೆಯನ್ನು ಬೋಧಿಸಲಾಯಿತು.ಪದವೀಧರರಾದ ನೀವು ಈಗ ಜ್ಞಾನ ಆಧಾರಿತ ಸಮಾಜಕ್ಕೆ ಪಾದಾರ್ಪಣೆ ಮಾಡುತ್ತಿದ್ದೀರಿ. ಇಲ್ಲಿ ತನ್ನದೇ ಸವಾಲುಗಳಿವೆ. ನಾಲ್ಕು ಗೋಡೆಗಳ   ನಡುವೆ ನೀವು ಕಲಿತಿದ್ದು, ಈಗ ಸಮಾಜದ ಭಾಗವಾಗಿ ವೈದ್ಯರಾಗಿ ಪ್ರವೇಶಿಸಲು ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಬದ್ಧತೆ ಬೆಳೆಸಿಕೊಳ್ಳಬೇಕು ಎಂದರು.ನಿರ್ಲಕ್ಷ್ಯದಿಂದಾಗಿ ರೋಗಿಯ ಸಾವಿಗೆ ಕಾರಣರಾದ ಆರೋಪದ ಮೇಲೆ ಮೂವರು ವೈದ್ಯರು ಬಂಧಿತರಾದ ಬೆಳವಣಿಗೆಯನ್ನು ಉಲ್ಲೇಖಿಸಿದ ಅವರು, ನೀವು ವೃತ್ತಿಯನ್ನು ನಿಭಾಯಿಸುವಾಗ ನಿಮ್ಮ ಸೇವೆಯು ಕಾನೂನು ಪರಿಧಿಯಲ್ಲಿಯೇ ಇರಲಿ ಮತ್ತು ತರ್ಕಬದ್ಧವಾಗಿಯೂ ಇರಲಿ ಎಂದು ಸಲಹೆ ಮಾಡಿದರು.ಚಿಕುನ್‌ಗುನ್ಯಾ, ಡೆಂಗೇ ಸೆರಿದಂತೆ ಕಳೆದ  ವರ್ಷಗಳಲ್ಲಿ ಅನೇಕ ಹೊಸ ರೋಗಗಳು ಕಾಣಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಹೊಸದನ್ನು ತಿಳಿಯುವ ಸಂಶೋಧನೆಯೂ ಇರಬೇಕು. ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪೂರೈಸಿರುವುದರಿಂದ ಕಟ್ಟಿರುವ ಡೊನೇಷನ್ ಮರು ಗಳಿಸಬೇಕಾದ ಚಿಂತೆ ನಿಮಗಿಲ್ಲ. ಹೀಗಾಗಿ, ಸಾಧಿಸುವ ಗುರಿಯತ್ತ ದೃಷ್ಟಿ ಮತ್ತು ಗುಣಮಟ್ಟದ ಚಿಕಿತ್ಸೆಯೂ ಸಾಮಾನ್ಯ ರೋಗಿಯ ಕೈಗೂ ಎಟುಕಿಸುವಂತೆ ನಿಮ್ಮ ನಡೆ  ಇರಲಿ ಎಂದರು.ಪದಕ ಪ್ರದಾನ: ಇದೇ ಸಂದರ್ಭದಲ್ಲಿ ಆಯಾ ವಿಭಾಗದಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪದಕ, ದತ್ತಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಇದರಲ್ಲಿ, ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಸರ್ಜರಿ ವಿಭಾಗದಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಾಗಿ ದತ್ತಿ ಪ್ರಶಸ್ತಿ ಸ್ಥಾಪಿಸಿದೆ.

ಮಿಮ್ಸ ನಿರ್ದೇಶಕ ಡಾ. ಗುರುಶಂಕರ್ ಅವರುಈ ಸಂದರ್ಭದಲ್ಲಿ ಮಿಮ್ಸನ ಡಾ. ಪುಷ್ಪಾ ಸರ್ಕಾರ್, ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಮಲಿಂಗೇಗೌಡ, ನಿರ್ದೇಶಕ ಡಾ. ಗುರುಶಂಕರ್, ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಮತ್ತು ವಿವಿಧ ವಿಭಾಗಳ ಮುಖ್ಯಸ್ಥರು ವೇದಿಕೆಯಲ್ಲಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.