ಶನಿವಾರ, ಜೂನ್ 19, 2021
23 °C

ಮಿಷೆಲಿನ್ ಎನರ್ಜಿ ಎಕ್ಸ್‌ಎಂ2 ಟೈರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗತ್ತಿನ ಪ್ರಮುಖ ಆಟೊಮೋಟಿವ್ ಟೈರ್ ತಯಾರಿಕಾ ಸಂಸ್ಥೆ ಮಿಷೆಲಿನ್ ಇಂಧನ ಉಳಿತಾಯ, ಸುರಕ್ಷತೆ ಹಾಗೂ ದೀರ್ಘಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾದ ಎನರ್ಜಿ ಎಕ್ಸ್‌ಎಂ2 ಟೈರ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಕಾರುಗಳ ಶಕ್ತಿ, ದೀರ್ಘಬಾಳಿಕೆ, ಇಂಧನ ಉಳಿತಾಯ ಹಾಗೂ ಚಾಲಕರಿಗೆ ಸುರಕ್ಷತೆ ಒದಗಿಸುವಂತೆ ಈ ಟೈರ್‌ಗಳನ್ನು ರೂಪಿಸಲಾಗಿದೆ. ಸಣ್ಣ ಹಾಗೂ ಮಧ್ಯಮ ಗಾತ್ರದ ಪ್ರಯಾಣಿಕ ಕಾರುಗಳಿಗೆಂದೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ಮಿಚೆಲಿನ್ ಎನರ್ಜಿ ಎಕ್ಸ್‌ಎಂ2 ಟೈರ್ ಐರನ್‌ಫ್ಲೆಕ್ಸ್ ತಂತ್ರಜ್ಞಾನ ಹೊಂದಿದೆ.ಮೈಕ್ರೋ ರೆಸಿಲಿಯೆಂಟ್ ಟ್ರೆಡ್ ವಸ್ತುವಿನ ಹೊಸ ಸಂರಚನೆ, ರಸ್ತೆಯೊಂದಿಗೆ ಉತ್ತಮ ಹಿಡಿತ ಒದಗಿಸುತ್ತದೆ. ಇದರಿಂದ ಬಹಳ ಕಡಿಮೆ ಅಂತರದಲ್ಲಿ ಬ್ರೇಕ್ ಹಾಕಬಹುದು. ದೀರ್ಘಕಾಲ ಬಾಳಿಕೆ ಬರುವ ಟ್ರೆಡ್‌ನಿಂದ ಟೈರ್‌ನ ಮೈಲೇಜ್ ಹೆಚ್ಚುತ್ತದೆ. ರೂ. 2,475 ರಿಂದ 6,075 ಬೆಲೆಯಲ್ಲಿ 12 ರಿಂದ 15 ಇಂಚಿನ ಗಾತ್ರಗಳಲ್ಲಿ ಹೊಸ ಮಿಚೆಲಿನ್ ಎನರ್ಜಿ ಎಕ್ಸ್‌ಎಂ2 ಟೈರ್ ಲಭ್ಯ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.