ಶುಕ್ರವಾರ, ಮೇ 7, 2021
26 °C

ಮುಂದಿನ ವಾರ ಅಜ್ಮೇರ್‌ಗೆ ಪಾಕ್ ಅಧ್ಯಕ್ಷರ ಭೇಟಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ರಾಜಾಸ್ತಾನದ ಅಜ್ಮೇರ್‌ನಲ್ಲಿರುವ ಖ್ವಾಜಾ ಮೊಯಿನುದ್ದೀನ್ ಛಿಸ್ತಿ ಅವರ ದರ್ಗಾಕ್ಕೆ ಏ. 8ರಂದು ನೀಡುವ ಸಾಧ್ಯತೆ ಇದೆ.ಸೂಫಿ ಸಂತ ಛಿಸ್ತಿ ಅವರ ದರ್ಗಾಕ್ಕೆ ಜರ್ದಾರಿ ಅವರು ಖಾಸಗಿ ಭೇಟಿ ನೀಡುವ ಮನವಿಗೆ ಭಾರತ ಸ್ಪಂದಿಸಿದ್ದು,  ದಿನಾಂಕ ನಿಗದಿಗೊಳ್ಳಬೇಕಿದೆ ಎಂದು ಪಾಕ್ ಸರ್ಕಾರದ ಮೂಲಗಳು ಹೇಳಿವೆ.



ಆದರೆ, ಭಾರತ ಸರ್ಕಾರದ ಮೂಲಗಳು ಏ. 8ರಂದು ಅವರು ಅಜ್ಮೇರ್‌ಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಿದೆ.ಇದು  ಖಾಸಗಿ ಭೇಟಿ ಎಂದು ಪಾಕ್ ಸರ್ಕಾರ ಹೇಳಿದ್ದರೂ ಜರ್ದಾರಿ ಭಾರತದ ಕೆಲವು ಮುಖಂಡರನ್ನು ಈ  ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.