ನಾಗಪುರ: ದಕ್ಷಿಣ ಆಫ್ರಿಕ ಈ ಬಾರಿ ಮುಗ್ಗರಿಸಲಿಲ್ಲ. ಇನ್ನೂ ಎರಡು ಎಸೆತ ಇರುವಂತೆಯೇ ಮೂರು ವಿಕೆಟ್ಗಳ ರೋಚಕ ಜಯ ಗಳಿಸಿದ ದಕ್ಷಿಣ ಆಫ್ರಿಕ, ಹತ್ತನೇ ವಿಶ್ವ ಕಪ್ ಕ್ರಿಕೆಟ್ನ ‘ಬಿ’ ಗುಂಪಿನ ಲೀಗ್ನಲ್ಲಿ ಭಾರತಕ್ಕೆ ಮೊದಲ ಸೋಲನ್ನು ಉಣಿಸಿತು.ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಶನಿವಾರ, ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರ ಬಾಯಿ ಬಂದಾಗಿ ಹೋಯಿತು. ಭಾರತ ಉತ್ತಮವೆನ್ನುವ ಮೊತ್ತವನ್ನೇ ಗಳಿಸಿದರೂ, ಮುಕ್ತಾಯದ ಓವರುಗಳಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ನರ ವೈಫಲ್ಯ ಅಂತಿಮವಾಗಿ ಭಾರತದ ಸೋಲಿಗೆ ಕಾರಣವಾಯಿತು. ಭಾರತ ಕೊನೆಯ ಹತ್ತು ಓವರುಗಳಲ್ಲಿ ನೀರಸವಾಗಿ ಆಡಿ ಪಟಪಟನೆ ವಿಕೆಟ್ಗಳನ್ನು ಕಳೆದುಕೊಂಡರೆ, ದಕ್ಷಿಣ ಆಫ್ರಿಕ ಕೊನೆಯ ಹತ್ತು ಓವರುಗಳಲ್ಲಿ ಅಮೋಘವಾಗಿ ಆಡಿ ಭಾರತದ ಗೆಲುವಿನ ಕನಸನ್ನು ನುಚ್ಚುನೂರುಗೊಳಿಸಿತು.

ಗೆಲ್ಲಲು 297 ರನ್ ಮಾಡಬೇಕಿದ್ದ ದಕ್ಷಿಣ ಆಫ್ರಿಕವನ್ನು ಗುರಿಮುಟ್ಟಿಸಿದವರು ಎಡಗೈ ಸ್ಪಿನ್ನರ್ ರಾಬಿನ್ ಪೀಟರ್ಸನ್. ಆಶಿಶ್ ನೆಹ್ರಾ ಕೊನೆಯ ಓವರ್ ಬೌಲ್ ಮಾಡಲು ಬಂದಾಗ ದಕ್ಷಿಣ ಆಫ್ರಿಕಕ್ಕೆ 13 ರನ್ನುಗಳು ಬೇಕಿದ್ದವು. ಮೊದಲ ಎಸೆತದಲ್ಲಿ ಚೆಂಡು ಪೀಟರ್ಸನ್ ಬ್ಯಾಟನ್ನು ಸವರಿಕೊಂಡು ದೋನಿ ಪಕ್ಕದಲ್ಲಿ ಬೌಂಡರಿಗೆ ಹೋಯಿತು.ಎರಡನೇ ಎಸೆತವನ್ನು ಪೀಟರ್ಸನ್ ಮಿಡ್ವಿಕೆಟ್ ಮೇಲೆ ಸಿಕ್ಸರ್ ಎತ್ತಿದರು. ಮೂರನೆಯದರಲ್ಲಿ ಎರಡು ರನ್ನುಗಳು ಬಂದವು. ನಾಲ್ಕನೆಯದು ಕವರ್ಸ್ ಬೌಂಡರಿ ಗೆರೆ ದಾಟಿತು.ಇದಕ್ಕೆ ಮೊದಲು ಎ.ಬಿ.ಡಿವಿಲಿಯರ್ಸ್, ಜೆ.ಪಿ. ಡುಮಿನಿ ಮತ್ತು ಡು ಪ್ಲೆಸಿ ಉತ್ತಮವಾಗಿ ಆಡಿ ತಂಡದ ಶಿಬಿರದಲ್ಲಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಹರಭಜನ್ ಸಿಂಗ್ ಮಹತ್ವದ ಹಂತದಲ್ಲಿ ಡಿ ವಿಲಿಯರ್ಸ್ ಮತ್ತು ಡುಮಿನಿ ಅವರ ವಿಕೆಟ್ ಕಿತ್ತು ಭಾರತಕ್ಕೂ ಗೆಲುವಿನ ಆಸೆ ಮೂಡಿಸಿದರು.

ದಕ್ಷಿಣ ಆಫ್ರಿಕ ಪಕ್ಕಾ ವೃತ್ತಿಪರ ಮನೋಭಾವದಲ್ಲಿ ಆಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ, ಸಚಿನ್ ತೆಂಡೂಲ್ಕರ್ ಅವರ ಅಮೋಘ ಶತಕದ ನೆರವಿನಿಂದ 296 ರನ್ ಗಳಿಸಿತು. ವೀರೇಂದ್ರ ಸೆಹ್ವಾಗ್, ಸಚಿನ್ ಮತ್ತು ಗೌತಮ್ ಆಡಿದ ರೀತಿ ನೋಡಿದಾಗ ಭಾರತ 350 ರನ್ ಮಾಡುವ ನಿರೀಕ್ಷೆ ಇತ್ತು. ಆದರೆ ಕೊನೆಯ ಎಂಟು ವಿಕೆಟ್ಗಳು ತರಗೆಲೆಗಳಂತೆ ಉದುರಿದವು. ಭಾರತಕ್ಕೆ ಕೊನೆಗೆ ಈ ಅಂಶವೇ ಮುಖ್ಯವಾಯಿತು. ಭಾರತ ಹತ್ತಿಪ್ಪತ್ತು ರನ್ನುಗಳಿಂದ ಹಿಂದೆ ಬಿತ್ತು.

ದಕ್ಷಿಣ ಆಫ್ರಿಕದ ಬ್ಯಾಟ್ಸಮನ್ನರು ಯಾವುದೇ ರೀತಿಯ ಗಡಿಬಿಡಿ ತೋರಲಿಲ್ಲ. ನಾಯಕ ಗ್ರೇಮ್ ಸ್ಮಿತ್ ಬೇಗ ಔಟಾದರೂ ಹಾಶಿಮ್ ಆಮ್ಲಾ ಮತ್ತು ಅನುಭವಿ ಜ್ಯಾಕ್ ಕಾಲಿಸ್ ಎರಡನೇ ವಿಕೆಟ್ಗೆ 18.5 ಓವರುಗಳಲ್ಲಿ 86 ರನ್ ಸೇರಿಸಿ, ತಂಡ ಕುಸಿಯದಂತೆ ನೋಡಿಕೊಂಡರು. ವಿಕೆಟ್ ಉಳಿದರೆ ರನ್ ಹೊಡೆಯಬಹುದು ಎಂಬುದಕ್ಕೆ ಅವರ ಆಟ ನಿದರ್ಶನವಾಗಿತ್ತು. ಎ.ಬಿ. ಡಿವಿಲಿಯರ್ಸ್ ಬಿರುಸಿನ ಆಟಕ್ಕಿಳಿದರು. ಡಿ ವಿಲಿಯರ್ಸ್ ಮತ್ತು ಜೆ.ಪಿ. ಡುಮಿನಿ ಕೇವಲ 29 ಎಸೆತಗಳಲ್ಲಿ ನಾಲ್ಕನೇ ವಿಕೆಟ್ಗೆ 50 ರನ್ ಸೇರಿಸಿದ್ದೇ ದಕ್ಷಿಣ ಆಫ್ರಿಕ ಗೆಲುವಿನ ಗುರಿಯ ಸಮೀಪ ಬರುವಂತೆ ಮಾಡಿತು. ಬ್ಯಾಟಿಂಗ್ ಪವರ್ಪ್ಲೇನಲ್ಲಿ ದಕ್ಷಿಣ ಆಫ್ರಿಕ ಒಂದು ವಿಕೆಟ್ ಕಳೆದುಕೊಂಡು 52 ರನ್ ಹೊಡೆಯಿತು. ಫ್ರಾಂಕಾಯ್ಸಾ ಡು ಪ್ಲೆಸಿ ಮತ್ತು ಜೊಹಾನ್ ಬೋಥಾ ಏಳನೆ ವಿಕೆಟ್ಗೆ 22 ಎಸೆತಗಳಲ್ಲಿ 33 ರನ್ ಸೇರಿಸಿದಾಗ ಗೆಲುವು ಇನ್ನಷ್ಟು ಸಮೀಪವಾಯಿತು. ಕೊನೆಯ ಓವರ್ನಲ್ಲಿ ಪೀಟರ್ಸನ್ ಭಾರತದ ಗೆಲುವಿನ ಓಟಕ್ಕೆ ಕಡಿವಾಣ ಹಾಕಿದರು.ಭಾರತದ ಬ್ಯಾಟಿಂಗ್ ಕುಸಿತಕ್ಕೆ ಕಾರಣವಾಗಿದ್ದ ವೇಗದ ಬೌಲರ್ ಡೇಲ್ ಸ್ಟೇಯ್ನೆ ‘ಪಂದ್ಯದ ಆಟಗಾರ’ ಗೌರವಕ್ಕೆ ಪಾತ್ರರಾದರು.

ಭಾರತ ಐದು ಪಂದ್ಯಗಳಲ್ಲಿ ಅನುಭವಿಸಿದ ಮೊದಲ ಸೋಲು ಇದು. ದಕ್ಷಿಣ ಆಫ್ರಿಕ ನಾಲ್ಕು ಪಂದ್ಯಗಳಲ್ಲಿ ಒಂದನ್ನು ಸೋತು, ಮೂರರಲ್ಲಿ ಗೆದ್ದಿದ್ದು ಅದರ ಕ್ವಾರ್ಟರ್ಫೈನಲ್ ಹಾದಿ ಸುಗಮವಾಯಿತು. ಈಗಾಗಲೇ ಕ್ವಾರ್ಟರ್ಫೈನಲ್ ತಲುಪಿರುವ ಭಾರತ ಲೀಗ್ನಲ್ಲಿ ತನ್ನ ಕೊನೆಯ ಪಂದ್ಯವನ್ನು ಮಾರ್ಚ್ 20 ರಂದು ವೆಸ್ಟ್ಇಂಡೀಸ್ ವಿರುದ್ಧ ಚೆನ್ನೈನಲ್ಲಿ ಆಡಲಿದೆ.
ಮಧ್ಯಾಹ್ನ ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಮತ್ತು ಗೌತಮ್ ಗಂಭೀರ್ ಹಾಕಿಕೊಟ್ಟಿದ್ದ ಅತ್ಯುತ್ತಮ ಅಡಿಪಾಯದ ಮೇಲೆ ದೊಡ್ಡ ಮೊತ್ತವನ್ನು ಕಟ್ಟಲು ಭಾರತ ಸಂಪೂರ್ಣ ವಿಫಲವಾಯಿತು. ಸಚಿನ್ ನಿರ್ಗಮನದ ನಂತರ ಎಂಟು ವಿಕೆಟ್ಗಳು 54 ಎಸೆತಗಳಲ್ಲಿ ಕೇವಲ 29 ರನ್ನುಗಳಿಗೆ ಉರುಳಿದವು. ಯಾರೊಬ್ಬರೂ ನಿಂತು ಆಡುವ ಮನಸ್ಸು ಮಾಡಲಿಲ್ಲ.ಮೊದಲ ಹತ್ತು ಓವರುಗಳಲ್ಲಿ 87 ರನ್ ಹೊಡೆದಿದ್ದ ಭಾರತಕ್ಕೆ ಕೊನೆಯ ಹತ್ತು ಓವರುಗಳಲ್ಲಿ ಕೇವಲ 28 ರನ್ನುಗಳು ಬಂದವು. ಮೊದಲು ದಂಡಿಸಿಕೊಂಡಿದ್ದ ಬೌಲರುಗಳೆಲ್ಲ ವಿಜೃಂಭಿಸಿದರು.

ಭಾರತಕ್ಕೆ ಸವಾಲೆಸೆಯುವ ಮೊತ್ತ ಸಾಧ್ಯವಾಗಿದ್ದು ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಮತ್ತು ಗೌತಮ್ ಗಂಭೀರ್ ಅವರಿಂದ ಮಾತ್ರ. ದೋನಿ ಶುಕ್ರವಾರ ಹೇಳಿದ್ದಂತೆ, ವೀರೂ ಮತ್ತು ಸಚಿನ್ ತಂಡಕ್ಕೆ ಉತ್ತಮ ಆರಂಭವನ್ನೇ ತಂದುಕೊಟ್ಟರು. ಮಾರ್ಕೆಲ್ ಅವರ ಮೊದಲ ಓವರ್ನಲ್ಲಿ ವೀರೂ ಬ್ಯಾಟಿನಿಂದ ಸಿಡಿದ ಚೆಂಡು ವಿಕೆಟ್ ಕೀಪರ್ ಮಾರ್ನ್ ವಾನ್ ವೈಕ್ ಮತ್ತು ಮೊದಲ ಸ್ಲಿಪ್ನಲ್ಲಿದ್ದ ಸ್ಮಿತ್ ನಡುವೆ ಹಾರಿಹೋಯಿತು. ಇಬ್ಬರೂ ಕ್ಯಾಚಿಗೆ ಪ್ರಯತ್ನವನ್ನೇ ಮಾಡಲಿಲ್ಲ. ಮಾರ್ಕೆಲ್ ಹತಾಶರಾದರು. ಅದೇ ಓವರ್ನಲ್ಲಿ ವೀರೂ ಮೂರು ಬೌಂಡರಿ ಹೊಡೆದರು.

ವೀರೂ ಮತ್ತು ಸಚಿನ್ ಭರ್ಜರಿಯಾಗಿ ಬ್ಯಾಟ್ ಮಾಡಿದರು. 12ನೇ ಓವರ್ನಲ್ಲೇ ಮೊತ್ತ ನೂರು ದಾಟಿತು. ಆಗ ಭಾರತ 350 ರ ಮೊತ್ತ ಸೇರಿಸಬಹುದೆಂಬ ಭಾವನೆ ಮೂಡಿತ್ತು.ವೀರೂ 70 ರನ್ ಮಾಡಿದ್ದಾಗ ಬೋಥಾ ಬೌಲಿಂಗ್ನಲ್ಲಿ ವೈಕ್ ಕ್ಯಾಚ್ ಬಿಟ್ಟರು. ಆದರೆ ಅದು ದುಬಾರಿಯಾಗಲಿಲ್ಲ. ಲೆಗ್ಸ್ಪಿನ್ನರ್ ಪ್ಲೆಸಿ ಬೌಲಿಂಗ್ನಲ್ಲಿ ಚೆಂಡನ್ನು ಕಟ್ ಮಾಡಲು ಹೋದ ವೀರೂ ಅದನ್ನು ಸ್ಪಂಪ್ಗೆ ನಿರ್ದೇಶಿಸಿದರಷ್ಟೇ. ಅಷ್ಟೊತ್ತಿಗೆ ಮೊದಲ ವಿಕೆಟ್ಗೆ 17.4 ಓವರುಗಳಲ್ಲಿ 142 ರನ್ನುಗಳು ಬಂದಿದ್ದವು. ಕಡ್ಡಾಯದ ಪವರ್ಪ್ಲೇನಲ್ಲಿ (ಒಂದರಿಂದ ಹತ್ತು ಓವರ್) ಬಂದ 87 ರನ್ನುಗಳು ಈ ವಿಶ್ವ ಕಪ್ನ ದಾಖಲೆ.

ವೀರೂ ನಿರ್ಗಮನದ ನಂತರ ಸಚಿನ್ ಸ್ವಲ್ಪ ನಿಧಾನವಾಗಿ ಆಡುತ್ತ ತಮ್ಮ ಶತಕದ ಕಡೆ ಗಮನಕೊಟ್ಟರು. ಅದನ್ನು ಸಾಧಿಸಿಯೂ ಬಿಟ್ಟರು. ಈ ವಿಶ್ವ ಕಪ್ನಲ್ಲಿ ತಮ್ಮ ಎರಡನೇ ಶತಕ ಗಳಿಸಿದ ಅವರು ಗೌತಮ್ ಗಂಭೀರ್ ಜೊತೆ ಎರಡನೇ ವಿಕೆಟ್ಗೆ 22 ಓವರುಗಳಲ್ಲಿ 125 ರನ್ ಸೇರಿಸಿದರು. ನಂತರ ಬಂದವರೆಲ್ಲ ಮೊತ್ತ ಸಾಕು ಎಂಬಂತೆ ವಿಕೆಟ್ ಚೆಲ್ಲಿದರು.39ನೇ ಓವರ್ನಿಂದ ಬ್ಯಾಟಿಂಗ್ ಪವರ್ಪ್ಲೇ ತೆಗೆದುಕೊಳ್ಳಲಾಗಿತ್ತು. ಆದರೆ ಅದರಲ್ಲಿ ಸಚಿನ್ ಸೇರಿ ನಾಲ್ವರು ಔಟಾಗಿ ಕೇವಲ 30 ರನ್ನುಗಳು ಬಂದವು. ಬ್ಯಾಟಿಂಗ್ನಲ್ಲಿ ಬಡ್ತಿ ಪಡೆದಿದ್ದ ಯೂಸುಫ್ ಪಠಾಣ್ ಒಂದೂ ರನ್ ಮಾಡಲಿಲ್ಲ. ನಂತರ ದೋನಿಗೆ ಮೊತ್ತವನ್ನು 300 ದಾಟಿಸಲು ಆಗಲಿಲ್ಲ.

ವೇಗದ ಬೌಲರ್ ಡೇಲ್ ಸ್ಟೇಯ್ನಿ ತಮ್ಮ ಮೊದಲ ನಾಲ್ಕು ಓವರುಗಳಲ್ಲಿ 34 ರನ್ ಕೊಟ್ಟಿದ್ದರು. ಮುಂದಿನ 5.4 ಓವರುಗಳಲ್ಲಿ ಅವರು ಕೇವಲ 16 ರನ್ ಕೊಟ್ಟು ಐದು ವಿಕೆಟ್ ಉರುಳಿಸಿದರು. ಮಹೇಂದ್ರ ಸಿಂಗ್ ದೋನಿ ಈ ಪಿಚ್ ಮೇಲೆ ಸ್ಪಿನ್ನರುಗಳಿಗಿಂತ ಮಧ್ಯಮ ವೇಗದ ಬೌಲರ್ ಸಹಾಯಕ ಎಂಬ ಭಾವನೆಯಿಂದ ಪಿಯೂಶ್ ಚಾವ್ಲಾ ಮತ್ತು ಆರ್. ಅಶ್ವಿನ್ ಅವರಿಬ್ಬರನ್ನೂ ಬಿಟ್ಟು, ಮೂವರು ಮಧ್ಯಮ ವೇಗದ ಬೌಲರುಗಳನ್ನು ಆರಿಸಿಕೊಂಡರು.

ಸ್ಕೋರು ವಿವರ
ಭಾರತ: 48.4 ಓವರುಗಳಲ್ಲಿ 296
ವೀರೇಂದ್ರ ಸೆಹ್ವಾಗ್ ಬಿ ಪಿ. ಡು ಪ್ಲೆಸಿ 73
(66 ಎಸೆತ, 12 ಬೌಂಡರಿ)
ಸಚಿನ್ ತೆಂಡೂಲ್ಕರ್ ಸಿ ಡುಮಿನಿ ಬಿ ಮಾರ್ಕೆಲ್ 111
(101 ಎಸೆತ, 8 ಬೌಂಡರಿ, 3 ಸಿಕ್ಸರ್)
ಗೌತಮ್ ಗಂಭೀರ್ ಸಿ ಕಾಲಿಸ್ ಬಿ ಸ್ಟೇಯ್ನೆ 69
(75 ಎಸೆತ, 7 ಬೌಂಡರಿ)
ಯೂಸುಫ್ ಪಠಾಣ್ ಸಿ ಸ್ಮಿತ್ ಬಿ ಸ್ಟೇಯ್ನಿ 00
(2 ಎಸೆತ)
ಯುವರಾಜ್ ಸಿಂಗ್ ಸಿ ಬೋಥಾ ಬಿ ಕಾಲಿಸ್ 12
(9 ಎಸೆತ, ಒಂದು ಸಿಕ್ಸರ್)
ಮಹೇಂದ್ರಸಿಂಗ್ ದೋನಿ ಔಟಾಗದೆ 12
(21 ಎಸೆತ)
ವಿರಾಟ್ ಕೊಹ್ಲಿ ಸಿ ಮತ್ತು ಬಿ ಪೀಟರ್ಸನ್ 01
(3 ಎಸೆತ)
ಹರಭಜನ್ ಸಿಂಗ್ ಬಿ ಸ್ಟೇಯ್ನಿ 03
(9 ಎಸೆತ)
ಜಹೀರ್ ಖಾನ್ ಸಿ ಮಾರ್ಕೆಲ್ ಬಿ ಪೀಟರ್ಸನ್ 00
(3 ಎಸೆತ)
ಆಶಿಶ್ ನೆಹ್ರಾ ಸಿ ಸ್ಮಿತ್ ಬಿ ಸ್ಟೇಯ್ನಿ 00
(3 ಎಸೆತ)
ಮುನಾಫ್ ಪಟೇಲ್ ಬಿ ಸ್ಟೇಯ್ನಿ 00
(ಒಂದು ಎಸೆತ)
ಇತರೆ ರನ್: (ಲೆಗ್ಬೈ-2, ನೋಬಾಲ್-1, ವೈಡ್-12) 15.
ವಿಕೆಟ್ ಪತನ: 1-142 (ಸೆಹ್ವಾಗ್; 17.4 ಓವರ್); 2-267 (ತೆಂಡೂಲ್ಕರ್; 39.4); 3-268 (ಗಂಭೀರ್; 40.1); 4-268 (ಪಠಾಣ್; 40.3); 5-283 (ಯುವರಾಜ್; 43); 6-286 (ಕೊಹ್ಲಿ; 44); 7-293 (ಹರಭಜನ್; 46.5); 8-294 (ಜಹೀರ್; 47.4); 9-296 (ನೆಹ್ರಾ; 48.3); 10-296 (ಮುನಾಫ್; 48.4)
ಬೌಲಿಂಗ್: ಡೇಲ್ ಸ್ಟೇಯ್ನಾ 9.4-0-50-5 (ವೈಡ್-6); ಮೋರ್ನ್ ಮಾರ್ಕೆಲ್ 7-0-59-1 (ನೋಬಾಲ್-1); ಜಾಕ್ ಕಾಲಿಸ್ 8-0-43-1 (ವೈಡ್-1); ರಾಬಿನ್ ಪೀಟರ್ಸನ್ 9-0-52-2 (ವೈಡ್-2); ಜೆ.ಪಿ. ಡುಮಿನಿ 3-0-29-0; ಜೊಹಾನ್ ಬೋಥಾ 9-0-39-0 (ವೈಡ್-2); ಫ್ರಾಂಕ್ಸಾಯ್ ಡು ಪ್ಲೆಸಿ 3-0-22-1 (ವೈಡ್-1).
ಪವರ್ಪ್ಲೇ: 1-10 ಓವರ್: ವಿಕೆಟ್ ನಷ್ಟವಿಲ್ಲದೇ 87 ರನ್
ಬೌಲಿಂಗ್ ಪವರ್ಪ್ಲೇ: 11 ರಿಂದ 15: ವಿಕೆಟ್ ನಷ್ಟವಿಲ್ಲದೇ 41 ರನ್
ಬ್ಯಾಟಿಂಗ್ ಪವರ್ಪ್ಲೇ: 39 ರಿಂದ 43 ಓವರ್: 30 ರನ್ 4 ವಿಕೆಟ್.

ದಕ್ಷಿಣ ಆಫ್ರಿಕ:49.4 ಓವರುಗಳಲ್ಲಿ 7 ವಿಕೆಟ್ಗೆ 300
ಹಾಶಿಮ್ ಆಮ್ಲಾ ಸಿ ದೋನಿ ಬಿ ಹರಭಜನ್ ಸಿಂಗ್ 61
(72 ಎಸೆತ, 5 ಬೌಂಡರಿ)
ಗ್ರೇಮ್ ಸ್ಮಿತ್ ಸಿ ತೆಂಡೂಲ್ಕರ್ ಬಿ ಜಹೀರ್ ಖಾನ್ 16
(29 ಎಸೆತ, 2 ಬೌಂಡರಿ)
ಜ್ಯಾಕ್ ಕಾಲಿಸ್ ರನ್ಔಟ್ 69
(88 ಎಸೆತ, 4 ಬೌಂಡರಿ)
ಎ.ಬಿ. ಡಿವಿಲಿಯರ್ಸ್ ಸಿ ವಿರಾಟ್ ಕೊಹ್ಲಿ ಬಿ ಹರಭಜನ್ 52
(39 ಎಸೆತ, 6 ಬೌಂಡರಿ, ಒಂದು ಸಿಕ್ಸರ್)
ಜಿ.ಪಿ. ಡುಮಿನಿ ಸ್ಟಂಪ್ಡ್ ದೋನಿ ಬಿ ಹರಭಜನ್ 23
(21 ಎಸೆತ, 2 ಬೌಂಡರಿ, 2 ಸಿಕ್ಸರ್)
ಫ್ರಾಂಕಾಯ್ಸಾ ಡು ಪ್ಲೆಸಿ ಔಟಾಗದೆ 25
(23 ಎಸೆತ, ಒಂದು ಸಿಕ್ಸರ್)
ಎಂ.ವಾನ್ ವೈಕ್ ಎಲ್ಬಿಡಬ್ಲ್ಯು ಬಿ ಮುನಾಫ್ 5
(5 ಎಸೆತ, ಒಂದು ಬೌಂಡರಿ)
ಜೊಹಾನ್ ಬೋಥಾ ಸಿ ಸಬ್ (ರೈನಾ) ಬಿ ಮುನಾಫ್ 23
(15 ಎಸೆತ, 2 ಬೌಂಡರಿ, ಒಂದು ಸಿಕ್ಸರ್)
ರಾಬಿನ್ ಪೀಟರ್ಸನ್ ಔಟಾಗದೆ 18
((7 ಎಸೆತ, 2 ಬೌಂಡರಿ, ಒಂದು ಸಿಕ್ಸರ್)
ಇತರೆ ರನ್ (ಲೆಗ್ಬೈ-7, ವೈಡ್-1) 8.
ವಿಕೆಟ್ ಪತನ: 1-41 (ಸ್ಮಿತ್; 8.3 ಓವರ್); 2-127 (ಆಮ್ಲಾ; 27.2); 3-173 (ಕಾಲಿಸ್; 35.4); 4-223 (ಡಿವಿಲಿಯರ್ಸ್; 40.3); 5-238 (ಡುಮಿನಿ; 42.4); 6-247 (ವೈಕ್; 44)
ಬೌಲಿಂಗ್: ಜಹೀರ್ ಖಾನ್ 10-0-43-1 ; ಆಶಿಶ್ ನೆಹ್ರಾ 8.4-0-65-0; ಮುನಾಫ್ ಪಟೇಲ್ 10-0-65-2; ಯೂಸುಫ್ ಪಟೇಲ್ 4-0-20-0; ಯುವರಾಜ್ ಸಿಂಗ್ 8-0-47-0; ಹರಭಜನ್ ಸಿಂಗ್ 9-0-53-3 (ವೈಡ್-1).
ಪವರ್ಪ್ಲೇ: 1 ರಿಂದ 10 ಓವರ್: 43 ರನ್, ಒಂದು ವಿಕೆಟ್ಬೌಲಿಂಗ್ ಪವರ್ಪ್ಲೇ: 11 ರಿಂದ 15: ವಿಕೆಟ್ ನಷ್ಟವಿಲ್ಲದೇ 23 ರನ್
ಬ್ಯಾಟಿಂಗ್ ಪವರ್ಪ್ಲೇ: 37 ರಿಂದ 41: 52 ರನ್, ಒಂದು ವಿಕೆಟ್
ಪಂದ್ಯದ ಆಟಗಾರ: ಡೇಲ್ ಸ್ಟೇಯ್ನಾ (50 ರನ್ನುಗಳಿಗೆ 5 ವಿಕೆಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.