ರ್ಯಾಂಪ್ ವಾಕ್ ಮಾಡುತ್ತಲೇ ಸಿನಿಮಾ, ಜಾಹೀರಾತು, ಆಲ್ಬಂಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಮುಗ್ಧಾ ಅಷ್ಟೇನೂ ಚೆಲುವೆಯಲ್ಲ. ಆದರೆ, ಮುಗ್ಧಾ ನೀಳ ಕಾಲು ಹಾಗೂ ಕೆಣಕುವ ಕಂಗಳ ಒಡತಿ. ಆಕೆಗೆ ಫ್ಯಾಷನ್ ಜಗತ್ತಿನಲ್ಲಿ ಸೆಕ್ಸಿ ಮಾಡೆಲ್ ಪಟ್ಟವನ್ನು ದಕ್ಕಿಸಿಕೊಟ್ಟಿದ್ದು ಇವೇ.

ಸೌಂದರ್ಯ ಪ್ರಸಾಧನ ಮಾರಾಟ ಮಳಿಗೆ ಲೈಫ್ ಸ್ಟೈಲ್ ಆರಂಭಿಸಿರುವ `ಗೆಟ್ ದಿ ಲುಕ್~ ಅಭಿಯಾನದ ಎರಡನೇ ಆವೃತ್ತಿಗೆ ಚಾಲನೆ ನೀಡುವ ಸಲುವಾಗಿ ಕೆಣಕುವ ಕಂಗಳ ಕೃಷ್ಣ ಸುಂದರಿ ಮುಗ್ಧಾ ಗೋಡ್ಸೆ ಈಚೆಗೆ ನಗರಕ್ಕೆ ಬಂದಿದ್ದರು. ಮಂತ್ರಿ ಮಾಲ್ ಆವರಣದಲ್ಲಿ ಎಲ್ಲರೆದುರಿಗೆ ಸೆಲೆಬ್ರಿಟಿ ಮೇಕಪ್ ಎಕ್ಸ್ಪರ್ಟ್ ರಾಬರ್ಟ್ ಅವರ ಕೈಗೆ ಮುಖವೊಡ್ಡಿ ತಮ್ಮ ನವಿರು ಚೆಲುವನ್ನು ಮತ್ತಷ್ಟು ಹೆಚ್ಚಿಸಿಕೊಂಡರು. ಹೆಣ್ಣು ಮಕ್ಕಳು ಸೌಂದರ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಜತೆಗೆ ಸ್ಪರ್ಧೆ ಬಗ್ಗೆ ಮಾಹಿತಿಯನ್ನೂ ನೀಡಿದರು.

ಮಹಿಳೆಯರಿಗೆ ಅಗತ್ಯವಿರುವ ಎಲ್ಲ ಬಗೆಯ ಸೌಂದರ್ಯ ಪ್ರಸಾಧನಗಳನ್ನು ಒಂದೇ ಸೂರಿನಡಿಯಲ್ಲಿ ಒದಗಿಸುತ್ತಿದೆ ಲೈಫ್ಸ್ಟೈಲ್ ಮಳಿಗೆ. `ಗೆಟ್ ದಿ ಲುಕ್~ ಸ್ಪರ್ಧೆಯ ಮುಖ್ಯ ಉದ್ದೇಶ ಮಹಿಳೆಯರೂ ಯಾವಾಗಲೂ ಚೆಂದವಾಗಿ ಕಾಣಿಸಬೇಕು ಎಂಬುದೇ ಆಗಿದೆ. ಈ ಸ್ಪರ್ಧೆಯಲ್ಲಿ ಮೇಕಪ್ ಎಕ್ಸ್ಪರ್ಟ್ಗಳು ಕೇವಲ ಮಹಿಳೆಯರ ಅಂದವನ್ನು ಭಿನ್ನರೀತಿಯಲ್ಲಿ ಕಾಣಿಸುವಂತೆ ಮಾಡುವುದಷ್ಟೆ ಅಲ್ಲ.

ಮಹಿಳೆಯರು ಮೇಕಪ್ ಮಾಡುವವರೊಂದಿಗೆ ಸಂವಾದ ನಡೆಸುವ ಹಾಗೂ ತಮ್ಮ ತ್ವಚೆಗೆ ಯಾವ ಪ್ರಸಾಧನಗಳು ಹೆಚ್ಚು ಹೊಂದಿಕೆ ಆಗುತ್ತವೆ ಎಂಬುದನ್ನು ತಿಳಿಸಿಕೊಡಲಿದ್ದಾರೆ. ಇವರ ಸಲಹೆ ಪಡೆದುಕೊಂಡು ಮಹಿಳೆಯರು ಮತ್ತಷ್ಟು ಸುಂದರವಾಗಿ ಕಾಣಿಸಬಹುದು. ಜತೆಗೆ ಬೇಸಿಗೆ ಹಾಗೂ ಚಳಿಗಾಲದಲ್ಲಿ ಹೇಗೆ ಚರ್ಮ ರಕ್ಷಣೆ ಮಾಡಿಕೊಳ್ಳಬೇಕು ಎಂಬುದಕ್ಕೆ ತಜ್ಞರು ಸಾಕಷ್ಟು ಟಿಪ್ಸ್ಗಳನ್ನು ನೀಡಲಿದ್ದಾರೆ.

ಗೆಟ್ ದಿ ಲುಕ್ ಸ್ಪರ್ಧೆ ಆರು ತಿಂಗಳು ನಡೆಯಲಿದೆ. ಪ್ರತಿ ತಿಂಗಳು ಇಬ್ಬರು ಅದೃಷ್ಟಶಾಲಿ ಮಹಿಳೆಯರನ್ನು ಆಯ್ಕೆ ಮಾಡಲಾಗುವುದು. ಈ ಸ್ಪರ್ಧೆ ಬೆಂಗಳೂರು ಸೇರಿದಂತೆ ದೆಹಲಿ, ಮುಂಬೈ ಹಾಗೂ ಪುಣೆ ಹಾಗೂ ಇತರೆ ಕಾಸ್ಮೋಪಾಲಿಟನ್ ನಗರಗಳಲ್ಲಿ ನಡೆಯಲಿದೆ.

ಅದೃಷ್ಟಶಾಲಿ ಮಹಿಳೆಯರನ್ನು ಆಯ್ಕೆ ಮಾಡುವಾಗ ಕೆಲವೊಂದು ಮಾನದಂಡ ಅನುಸರಿಸಲಾಗುತ್ತದೆ. ಆಯ್ಕೆಯಾದವರ ಮಹಿಳೆಯರು ಫೋಟೋ ಶೂಟ್ನಲ್ಲಿ ಭಾಗವಹಿಸಬೇಕು. ಖ್ಯಾತ ಫೋಟೋಗ್ರಾಫರ್ಗಳು ಆಯ್ಕೆಯಾದವರ ಮೊದಲಿನ ರೂಪು ಹಾಗೂ ನಂತರದ ಸೌಂದರ್ಯ ಎರಡನ್ನೂ ಸೆರೆಹಿಡಿಯಲಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಾದವರು ಫ್ಯಾಷನ್ ಮ್ಯಾಗಝಿನ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವಿವರಿಸಿದರು ಮುಗ್ಧಾ ಗೋಡ್ಸೆ.

ಪಾಲ್ಗೊಳ್ಳುವುದು ಹೀಗೆ
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಮಹಿಳೆಯರು ಲೈಫ್ಸ್ಟೈಲ್ ಫೇಸ್ಬುಕ್ http://www.facebook.com/lifestylestor ಇಲ್ಲಿಗೆ ಲಾಗ್ಆನ್ ಆಗಬೇಕು. ನಂತರ ತಮ್ಮ ಭಾವಚಿತ್ರವನ್ನು ಅಪ್ಲೋಡ್ ಮಾಡಬೇಕು. ಇದರಲ್ಲಿ ಆಯ್ಕೆಯಾದ ಮಹಿಳೆಯರು ಮೇಕಪ್ ಎಕ್ಸ್ಪರ್ಟ್ಗಳಿಂದ ಮೇಕಪ್ ಮಾಡಿಕೊಳ್ಳುವ ಅವಕಾಶ ಪಡೆದುಕೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.