ಬೀಳಗಿ:`ಏನ ಮಾರಾಯಾ; ಎಲ್ಲಾ ಕಡೆ ಮಳಿ ಹುಯ್ಯಂತ ಸುರಿಯಾಕ ಹತ್ತಿ ಜನ ಜೀವನಾ ಅಸ್ತವ್ಯಸ್ತ ಮಾಡೇತಿ, ನಾವೇನ ಪಾಪಾ ಮಾಡೀವ್ಯಂತ ಹೇಳಿ ಮಳಿರಾಯ ನಮ್ಮನ್ನ ಮರ್ತ ಬಿಟ್ಟಾನು, ಒಂದ ಹನೀನು ನೆಲಕ್ಕ ಬೀಳವಲ್ದು, ಮಾಡಗೋಳು ತೆರಿ ಹ್ವಾದಾಂಗ ನಮ್ಮನ್ನ ದಾಟ್ಕೊಂಡ ಹೋಗಾಕತ್ಯಾವು, ನಮ್ಮನ್ಯಾಕ ಹಿಂಗ ಕಾಡಾಕ ಹತ್ಯಾನೋ ಎಪ್ಪಾ ಮಳಿ ರಾಯ' ಎಂದು ಬುಧವಾರ ಸಾಯಂಕಾಲದವರೆಗೆ ಮುಖ ಸಣ್ಣದು ಮಾಡಿಕೊಂಡು ಪೇಚಾಟಕ್ಕಿಟ್ಟುಕೊಂಡಿದ್ದ ತಾಲ್ಲೂಕಿನ ರೈತರ ಮುಖದಲ್ಲಿ ಗುರುವಾರ ಬೆಳಿಗ್ಗೆ ಮಂದಹಾಸ ಮೂಡಿದೆ. ಅವರು ಚೈತನ್ಯದ ಚಿಲುಮೆಗಳಾಗಿದ್ದಾರೆ.

`ಅಂತೂದೇವ್ರ ನಮ್ಮ ಮ್ಯಾಲ, ನಮ್ಮ ದನ ಕರುವಿನ ಮ್ಯಾಲ ಕಣ್ಣ ತಗದಾ' ಎಂದು ಸಂತಸ ಹಂಚಿಕೊಳ್ಳುತ್ತಿದ್ದಾರೆ.
ಎಲ್ಲ ಕಡೆಗೂ ಮಳೆಯಾದ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದುತ್ತಿದ್ದ, ಟಿವಿಗಳಲ್ಲಿ ನೋಡುತ್ತಿದ್ದ ತಾಲ್ಲೂಕಿನ ರೈತರಿಗೆ ನಮ್ಮಲ್ಲಿ ಏಕೆ ಮಳೆ ಬರುತ್ತಿಲ್ಲವೆಂಬ ಪ್ರರ್ಶನೆ ಮೂಡಿತ್ತು. ಕೃಷ್ಣಾ,ಘಟಪ್ರಭಾ ನದಿಗಳ ನಡುವಿನ ದೋ ಆಬ್ ತಾಲ್ಲೂಕು ಎಂದೇ ಹೆಸರು ಮಾಡಿರುವ ಬೀಳಗಿ ತಾಲ್ಲೂಕಿಗೆ ಒಂದೇ ಒಂದು ಹನಿ ಮಳೆ ಬೀಳಲಿಲ್ಲ. `ಭರಣಿ ಮಳಿಯಂದ್ರ ಬಂಗಾರದ ಕರಣಿ ಇಟ್ಟ್ಹಾಂಗ, ಕುರಚಿಗ್ಯಾನ (ಕೃತಿಕಾ)ಮಳಿಯಾದ್ರ ಕೈಯ್ಯ್ಳಗಿನ ಕುರಪಿ ತಪ್ಪೂದಿಲ್ಲ, ರೋಹಿಣಿ ಮಳಿಗೆ ಬಿತ್ತಿದ್ರ ಓಣಿ ತುಂಬಾ ಜೋಳ' ಎನ್ನುವ ನುಡಿಗಟ್ಟುಗಳೆಲ್ಲ ಮಳೆ ಬಾರದೇ ಮಾತಿಗೆ ಮಾತ್ರ ಸೀಮಿತವಾಗಿದ್ದವು.

ಜೂನ್ ತಿಂಗಳಿನಲ್ಲಿ ತಾಲ್ಲೂಕಿನಲ್ಲಿ ಬೀಳಬೇಕಾದ ಮಳೆಯ ಪ್ರಮಾಣ 57.8 ಮಿ.ಮೀ.ನಷ್ಟು. ಬುಧವಾರ ಸಂಜೆ ಜಿಟಿ ಜಿಟಿ ಆರಂಭವಾದ ರೋಹಿಣಿ ಮಳೆ ರಾತ್ರಿ ಒಂದೇ ಸವನೆ ಸುರಿದಿದೆ. ಬೀಳಗಿ ವಲಯದಲ್ಲಿ 70ಮಿ.ಮೀ, ಅನಗವಾಡಿ ವಲಯದಲ್ಲಿ 30.1ಮಿ.ಮೀ., ಗಲಗಲಿ ವಲಯದಲ್ಲಿ 18.8ಮಿ.ಮೀ.ನಷ್ಟು ಸುರಿದಿದೆ. ಒಡ್ಡುಗಳು ತುಂಬಿ ನಿಂತಿವೆ, ಗುಡ್ಡದೋರೆಯಲ್ಲಿ ನೀರಿನ ಝರಿಗಳು ಬಸಿಯತೊಡಗಿವೆ.

ಸ್ಥಗಿತಗೊಂಡಿದ್ದ ಮುಂಗಾರಿ ಹಂಗಾಮಿನ ಕೃಷಿ ಚಟುವಟಿಕೆಗಳು (ಮಡಿಕೆ ಹೊಡೆಯುವ, ಹರಗುವ) ಹೆಬ್ಬದ್ದು (ಹೊಲಗಳೆಲ್ಲ ಅತಿ ಕೆಸರಾಗಿರುತ್ತವೆ) ಆಗಿದ್ದರಿಂದ ಶುಕ್ರವಾರದಿಂದ ಆರಂಭವಾಗಲಿವೆ. ತಾಲ್ಲೂಕಿನಾದ್ಯಂತ ವಾರಾ ಮಾಡಿ ಗ್ರಾಮ ದೇವತೆಗಳಿಗೆ ಉಡಿ ತುಂಬಿ ಶಾಂತಿ ಮಾಡಿದ್ದಾರೆ. ಇನ್ನೇನಿದ್ದರೂ ಕೂರಿಗೆ ಪೂಜೆ ಮಾಡಿ ಭೂಮಿ ತಾಯಿಗೆ ಉಡಿ ತುಂಬುವದಷ್ಟೇ ಬಾಕಿ.

ನಿನ್ನೆಯವರೆಗೆ ಮೈಗಳ್ಳರಾಗಿ ಕಟ್ಟೆಯ ಮೇಲೆ ಹರಟೆ ಹೊಡೆಯುತ್ತ ಕುಳಿತಿರುತ್ತಿದ್ದ ಕೃಷಿಕರು ಇಂದು ಯಾರಾದರೂ ಮಾತಿಗೆಳೆದರೆ `ಸವಡ ಇಲ್ರೀ, ಕೂರಿಗಿ ಹಾಸಬೇಕು, ಮುಂಜಾ ಬಾಯಿ ಹೆಣಸಬೇಕು, ಬೀಜಾ ತಯಾರ ಮಾಡಬೇಕು, ಮುಯ್ಕಾರನ್ನ (ಪರಸ್ಪರ ಸಹಕಾರದಿಂದ ಕೃಷಿ ಚಟುವಟಿಕೆ ಮಾಡಿಕೊಳ್ಳುವವರು) ಹುಡಕ್ಯಾಡಬೇಕು' ಎನ್ನುತ್ತ ಧಾವಂತ ತೋರುವುದು ಕಂಡು ಬರುತ್ತಿದೆ.

ಮುಂಗಾರಿ ಹಂಗಾಮಿಗೆ ಬೇಕಾದ ಬೀಜ, ಗೊಬ್ಬರ, ಕ್ರಿಮಿ ನಾಶಕಗಳು ದಾಸ್ತಾನಿವೆ ತಾಲ್ಲೂಕಿನ ಕೃಷಿ ಸಹಾಯಕ ನಿರ್ದೇಶಕ ಡಾ. ಪಿ.ಪಿ.ಲಮಾಣಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.