ಮುದ್ದೇಬಿಹಾಳ: ಪಟ್ಟಣದಲ್ಲಿ ಹಾಗೂ ತಾಲ್ಲೂಕಿನ ವಿವಿಧೆಡೆ ಸಿಡಿಲು ಬಿರುಗಾಳಿಯಿಂದ ಕೂಡಿದ ಮಳೆ ಸುರಿದಿದ್ದು ಹಲವೆಡೆ ಮರಗಳು ಉರುಳಿ ಬಿದ್ದಿವೆ ಅಲ್ಲದೇ ನಾಗರಬೆಟ್ಟದ ಬಳಿಯ ಬೂದಿಹಾಳ ಗ್ರಾಮದಲ್ಲಿ ಎಮ್ಮೆ ಯೊಂದು ಸಿಡಿಲಿಗೆ ಬಲಿಯಾದ ಘಟನೆ ವರದಿಯಾಗಿದೆ.

ಪಟ್ಟಣದಲ್ಲಿ ಂಜೆ ಅರ್ಧಗಂಟೆಗೂ ಅಧಿಕ ಕಾಲ ಬಿರುಗಾಳಿ ಸಹಿತ ಮಳೆ ಸುರಿದಿದ್ದು ಸೆಖೆಯಿಂದ ದಣಿದಿದ್ದ ಧರೆಗೆ ತಂಪು ಎರೆದಂತಾಗಿದ್ದು ಒಂದೆಡೆ ಯಾದರೆ, ಬಿರುಗಾಳಿಗೆ ಪುರಸಭೆಯ ಮುಂದಿನ ಕೃಷಿ ಇಲಾಖೆಯ ಕಛೇರಿ ಆವರಣದಲ್ಲಿದ್ದ ಬ್ರಹತ್ ಬೇವಿನ ಮರವೊಂದು ಬುಡಸಮೇತ ವಿದ್ಯುತ್ ಕಂಭವೊಂದರ ಮೇಲೆ ಉರುಳಿದ್ದ ಪರಿಣಾಮವಾಗಿ ಪಟ್ಟಣದಲ್ಲಿ ಕೆಲಕಾಲ ವಿದ್ಯುತ್ ಪೂರೈಕೆ ನಿಂತು ಹೋಗಿತ್ತು. ಅಲ್ಲದೇ ಮರ ರಸ್ತೆಗೆ ಉರುಳಿಬಿದ್ದ ಪರಿಣಾಮವಾಗಿ ಕೆಲಕಾಲ ರಸ್ತೆ ಸಂಚಾರಕ್ಕೆ ವ್ಯತ್ಯಯವುಂಟಾಗಿತ್ತು. ಆದರೆ ಯಾವುದೇ ಪ್ರಾಣಾಪಾಯವಾದ ಬಗ್ಗೆ ವರದಿಗಳಾಗಿಲ್ಲ.

ಮರ ಹಳೆಯದಾಗಿದ್ದು ಅದನ್ನು ತುಂಡರಿಸಿ ಹಾಕುವಂತೆ ಪುರಸಭೆಗೆ ಹಾಗೂ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ ಮರ ಉರುಳಿದ ಪರಿಣಾಮವಾಗಿ ಮನೆಯ ತಗಡುಗಳೆಲ್ಲ ಹಾಳಾಗಿವೆ ಅಲ್ಲದೇ ಮನೆಯ ವಸ್ತುಗಳು ನಾಶವಾಗಿವೆ ಎಂದು ಮನೆಯ ಮಾಲೀಕ ಹಸನಸಾಬ ನದಾಫ ತಿಳಿಸಿದರು. ಇದಲ್ಲದೇ ಪಟ್ಟಣದ ವಿವಿಧೆಡೆ ಮನೆಯ ಮೇಲಿನ ತಗಡುಗಳು, ಹಾರಿ ಹೋಗಿರುವುದಾಗಿ ತಿಳಿದು ಬಂದಿದೆ.

ಮೊಸಳೆಗೆ ವಿದ್ಯಾರ್ಥಿ ಬಲಿ

ಮುದ್ದೇಬಿಹಾಳ: ತಾಲ್ಲೂಕಿನ ಹುನಕುಂಟಿ ಬಳಿಯ ಕೃಷ್ಣಾ ನದಿ ದಂಡೆಯಲ್ಲಿ ದನ ಮೇಯಿಸಲು ಹೋಗಿದ್ದ ವಿದ್ಯಾರ್ಥಿಯನ್ನು ಮೊಸಳೆಯೊಂದು ಬಾಲದಿಂದ ಬಡಿದು ಎಳೆದುಕೊಂಡು ಹೋಗಿರುವ ಘಟನೆ ವರದಿಯಾಗಿದೆ.
ಸಂಗಪ್ಪ ಅವ್ವಪ್ಪ ಬಿರಾದಾರ (ಕುಂಟೋಜಿ) (16) ಎಂಬ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೇ ಮೊಸಳೆಗೆ ಬಲಿ ಯಾಗಿದ್ದು ತಾಲ್ಲೂಕಿನ ಕೋಳೂರ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದನು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.