ಸಿಂದಗಿ: ಕಡ್ಲಿಗಾರಹುಣ್ಣಿಮೆ ಮತ್ತು ಗುರುಪೂರ್ಣಿಮಾ ದಿನದಂದು ಸುಕ್ಷೇತ್ರ ಗಾಣಗಾಪುರ ದತ್ತಾತ್ರೇಯ ದೇವರ ದರ್ಶನ ಪಡೆಯಲು ಹೋದವರು ದೇವರ ಪಾದ ಸೇರಿದ ಹೃದಯ ವಿದ್ರಾವಕ ಘಟನೆ ನೋಡಿ ಸ್ಥಳದಲ್ಲಿದ್ದ ನೂರಾರು ಸಂಖ್ಯೆಯ ಮಹಿಳೆಯರು ಕಣ್ಣೀರಿಡುವ ದೃಶ್ಯ ಸಾಮಾನ್ಯವಾಗಿತ್ತು.

ಸೋಮವಾರ ಸಿಂದಗಿ ಬಳಿ ಚಿಕ್ಕಸಿಂದಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತರಾದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಕವಟೆಮಗ ತಾಲ್ಲೂಕಿನ ಕೊಕಳಿ, ಡಪಲಾಪೂರ ಮತ್ತು ಅದೇ ಜಿಲ್ಲೆಯ ಜತ್ತ ತಾಲ್ಲೂಕಿನ ಬಾಗೇವಾಡಿ ಗ್ರಾಮದ ಹೀಗೆ 17 ಜನರ ಛಿದ್ರ-ಛಿದ್ರ ದೇಹ ಗಳನ್ನು ಕಂಡು ಮರುಗದ ವ್ಯಕ್ತಿಗಳೇ ಇರಲಿಲ್ಲ.

ವಿಜಾಪುರದಿಂದ ಗುಲ್ಬರ್ಗಕ್ಕೆ ಅತೀ ವೇಗದಲ್ಲಿ ಹೊರಟ ಖಾಸಗಿ ಎಂ.ಆರ್ ಬಸ್ ಅಫಜಲಪೂರ ತಾಲ್ಲೂಕಿನ ದೇವಲ್ ಗಾಣಗಾಪುರದಿಂದ ಸಿಂದಗಿ ಮಾರ್ಗವಾಗಿ ವಿಜಾಪುರ- ಜತ್ತ ಕಡೆ ಸಾಗುತ್ತಿದ್ದ ಕ್ರೂಸರ್ ವಾಹನಕ್ಕೆ ಜೋರಾಗಿ ಡಿಕ್ಕಿ ಹೊಡೆದ ಪರಿಣಾಮ ಜೋರಾದ ಸಪ್ಪಳಾಯಿತು.

ಬಸ್ನ ಮುಂದಿನ ಗಾಲಿ ಕತ್ತರಿಸಿ ಹೋದವು. ಕೆಳಗಿಳಿದು ನೋಡಿದರೆ ಕ್ರೂಸರ್ನಲ್ಲಿರುವ ಬಹುತೇಕ ಜನರ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎಂದು ಬಸ್ನಲ್ಲಿದ್ದ ಪ್ರತ್ಯಕ್ಷದರ್ಶಿ ನಿಂಗೂ ಯಾಳಗಿ `ಪ್ರಜಾವಾಣಿ'ಗೆ ತಿಳಿಸಿದರು.

ದೇವರ ದರ್ಶನ ಪಡೆದು ಅಲ್ಲಿಂದ ತಂದಿದ್ದ ಚುರಮುರಿ, ಸಿಹಿ ಪದಾರ್ಥದ ಪ್ರಸಾದದ ಚೀಲಗಳು ರಸ್ತೆಯಲ್ಲಿ ಬಿದ್ದುದು ಕಂಡು ಬಂದಿತು.
ವ್ಯಕ್ತಿಯೊಬ್ಬನ ರುಂಡ-ಮುಂಡ ಬೇರೆ, ಬೇರೆ ಯಾಗಿ ಬಿದ್ದಿದ್ದವು. ಕೈ-ಕಾಲು ಕತ್ತರಿಸಿ ಬಿದಿದ್ದವು. ಹೆದ್ದಾರಿ ಯಲ್ಲಿ ರಕ್ತ ಹರಿಯುತ್ತಿತ್ತು
ಕ್ರೂಸರ್ನಲ್ಲಿ ಸಿಕ್ಕುಕೊಂಡು ಚೀರಾ ಡುತ್ತಿದ್ದ ಕೊಕಳೆ ಗ್ರಾಮದ ಚಂದ್ರಕಾಂತ ಸಿಂಧೆಯನ್ನು ಪೋಲಿಸರು ಮತ್ತು ಸಾರ್ವಜನಿಕರು ಸುರಕ್ಷಿತವಾಗಿ ಹೊರ ತೆಗೆದರು.

ಕೊಕಳೆ ಗ್ರಾಮದ ಸುನೀತಾ ಸಿಂಧೆ ದೂರವಾಣಿ ಮೂಲಕ `ಪ್ರಜಾವಾಣಿ' ಜೊತೆಗೆ ಮಾತನಾಡಿ ಮೃತರೆಲ್ಲರೂ ಒಂದೇ ಕುಟುಂಬ ಮತ್ತು ಒಂದೇ ಗ್ರಾಮದವರೂ ಅಲ್ಲ. ಹೀಗೆ ದೇವರ ದರ್ಶನಕ್ಕೆಂದು ಹೋಗೋಣ ಎಂದು ಹಾಗೆಯೇ ತಯ್ಯಾರಾಗಿ ಹೋಗಿದ್ದಾರೆ ಎಂದು ತಿಳಿಸಿದರು.

ಅಪಘಾತ ಸ್ಥಳದಲ್ಲಿ ಸೇರಿದ ಭಾರಿ ಸಂಖ್ಯೆಯ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾ ಯಿತು. ರಸ್ತೆಯಲ್ಲಿ ಬಿದ್ದ ಹೆಣಗಳ ರಾಶಿಯನ್ನು ಆಸ್ಪತ್ರೆಗೆ ಸಾಗಿಸಲು ಸಾರ್ವಜನಿಕರು ಪೊಲೀಸರಿಗೆ ಸಹಕರಿಸಿ ಮಾನವೀಯತೆ ಮೆರೆದರು.

ಖಾಸಗಿ ಬಸ್ ವಿರುದ್ಧ ಗ್ರಾಮಸ್ಥರ ಆಕ್ರೋಶ
ಸ್ಥಳದಲ್ಲಿದ್ದ ಚಿಕ್ಕಸಿಂದಗಿ ಮತ್ತು ಕನ್ನೊಳ್ಳಿ ಗ್ರಾಮಸ್ಥರು ಗುಲ್ಬರ್ಗದಿಂದ ವಿಜಾಪುರಕ್ಕೆ ಪ್ರಯಾಣಿಕರನ್ನು ಸಾಗಿಸುವ ವಿವಿಧ ಖಾಸಗಿ ಬಸ್ಗಳು ಪದೇ, ಪದೇ ಹೀಗೆ ಭಯಾನಕ ರಸ್ತೆ ಅಪಘಾತ ಗಳನ್ನು ಮಾಡುತ್ತಲೇ ಇರುತ್ತವೆ. ಹೀಗಾಗಿ ಈ ಬಸ್ಗಳನ್ನು ಸರ್ಕಾರ ನಿರ್ಬಂಧಿಸಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಅಪಘಾತದಲ್ಲಿ ಮೃತರ, ಗಾಯಾಳುಗಳ ಗುರುತು
ವಿಜಾಪುರ: ಅಪಘಾತದಲ್ಲಿ ಮೃತರಾದ ಹಾಗೂ ಗಾಯಾಳುಗಳ ಗುರುತು ಪತ್ತೆಯಾಗಿದೆ. ಜೀಪ್ ಚಾಲಕ ಜತ್ತ ಪಟ್ಟಣದ ತೇಜಪ್ಪ ಪಾಂಡುರಂಗ ಶಿಂಧೆ (28), ಜತ್ತ ತಾಲ್ಲೂಕು ಧರಿ ಬಡಚಿ ಗ್ರಾಮದ ನಂದಾಬಾಯಿ ಶಿವಾಜಿ ಚವ್ಹಾಣ (45), ಜತ್ತ ತಾಲ್ಲೂಕು ಪೋಕಳಾದ ಅಶೋಕ ಪಂಡಿತ ಕಾಂಬಳೆ (40), ಜತ್ತ ತಾಲ್ಲೂಕು ಬಾಗೇವಾಡಿಯ ಮಚೇಂದ್ರ ಸರಗರ ಮಹಾರಾಜ್ ಮೃತಪಟ್ಟಿದ್ದಾರೆ.

ಗಾಯಾಳುಗಳು: ಚಂದ್ರಕಾಂತ ಅಪ್ಪಾ ಸಾಹೇಬ ಶಿಂಧೆ (35), ತಾತೂಬಾ ಮಾರುತಿ ಸಗರ (45), ಹೇಮಾವತಿ ಪಡೋಲಕರ್ (65), ಸರಗರ್ (ಮಹಿಳೆ) (50).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.