ಪಟ್ನಾ (ಪಿಟಿಐ): ಮೋದಿ ಪಾತ್ರದ ಕುರಿತಂತೆ ಬಿಜೆಪಿ ಹಾಗೂ ಜೆಡಿಯು ಕೊನೆಯ ಕ್ಷಣದವರೆಗೂ ತಮ್ಮ ನಿಲುವುಗಳಿಗೆ ಅಂಟಿಕೊಂಡ ಕಾರಣ ನಿರೀಕ್ಷೆಯಂತೆ ಎನ್ಡಿಎ ಮೈತ್ರಿಕೂಟದಿಂದ ಜೆಡಿಯು ಹೊರಬರುವುದು ಖಚಿತವಾಗಿದ್ದು, ಭಾನುವಾರ ಅಧಿಕೃತ ಘೊಷಣೆ ಹೊರಬೀಳುವ ಸಾಧ್ಯತೆ ಇದೆ.

ಬಿಜೆಪಿ ಜತೆ ಮೈತ್ರಿಗೆ ಸಂಬಂಧಿಸಿಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಭಾನುವಾರ ಕರೆಯಲಾಗಿರುವ ಜೆಡಿಯು ಸಭೆಗೂ ಮುನ್ನ ರಾಜಧಾನಿ ಪಟ್ನಾದಲ್ಲಿ ಅನೇಕ ನಾಟಕೀಯ ಬೆಳವಣಿಗೆ ನಡೆದವು. ಅಂತಿಮ ಕ್ಷಣದವರೆಗೂ ತೇಪೆ ಹಚ್ಚುವ ಯತ್ನಗಳು ಯಶ ಕಾಣಲಿಲ್ಲ.

ಎನ್ಡಿಎ ತೊರೆಯುವ ಬಗ್ಗೆ ಜೆಡಿಯು ನಾಯಕ ಶಿವಾನಂದ ತಿವಾರಿ ಶನಿವಾರ ಸ್ಪಷ್ಟ ಸುಳಿವು ನೀಡಿದ್ದು, ಸದಾ ಪಕ್ಷದೊಂದಿಗೆ ಸಂಪರ್ಕದಲ್ಲಿರುವಂತೆ ಜೆಡಿಯು ಶಾಸಕರಿಗೆ ಸೂಚಿಸಲಾಗಿದೆ ಎಂದು ಶಾಸಕಾಂಗ ಪಕ್ಷದ ಮುಖ್ಯ ಸಚೇತಕ ಶ್ರವಣ್ ಕುಮಾರ್ ತಿಳಿಸಿದ್ದಾರೆ.

ತಮ್ಮನ್ನು ಭೇಟಿಯಾಗುವಂತೆ ಜೆಡಿಯು ನಾಯಕರಾದ ಶರದ್ ಯಾದವ್ ಮತ್ತು ನಿತೀಶ್ ಕುಮಾರ್ ನೀಡಿದ ಆಹ್ವಾನವನ್ನು ತಳ್ಳಿ ಹಾಕುವ ಮೂಲಕ ಬಿಜೆಪಿ ರಾಜ್ಯ ನಾಯಕರು ಸಖ್ಯ ಕಡಿದುಕೊಳ್ಳಲು ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ. ರಾಷ್ಟ್ರೀಯ ಬಿಜೆಪಿ ನಾಯಕರು ಮೌನವಾಗಿದ್ದರೂ ಪಕ್ಷದ ಸ್ಥಳೀಯ ನಾಯಕರು ಜೆಡಿಯು ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

`ಜನಾದೇಶ ಸಿಕ್ಕಿರುವುದು ಎನ್ಡಿಎಗೆ ಹಿರತೂ ಜೆಡಿಯುಗೆ ಅಲ್ಲ. ಒಂದು ವೇಳೆ ಜೆಡಿಯು, ಮೈತ್ರಿಕೂಟದಿಂದ ಹೊರ ಹೋದರೆ ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸ ಜನಾದೇಶ ಪಡೆಯಬೇಕು' ಎಂದು ಬಿಜೆಪಿ ನಾಯಕ ಚಂದ್ರಮೋಹನ್ ಒತ್ತಾಯಿಸಿದ್ದಾರೆ.

`ಮೋದಿ ಪ್ರಧಾನಿ ಅಭ್ಯರ್ಥಿಯಲ್ಲ ಎಂದು ಘೋಷಿಸುವ ನಿತೀಶ್ ಬೇಡಿಕೆ ಕುರಿತು ರಾಷ್ಟ್ರೀಯ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಮಾತನಾಡುವ ಅಧಿಕಾರ ನಮಗೆ ಇಲ್ಲ. ಹೀಗಾಗಿ ಜೆಡಿಯು ನಾಯಕರನ್ನು ಭೇಟಿಯಾಗುವುದರಲ್ಲಿ ಅರ್ಥವಿಲ್ಲ' ಎಂದು ಎನ್ಡಿಎ ರಾಜ್ಯ ಸಂಚಾಲಕ ಹಾಗೂ ಬಿಜೆಪಿ ನಾಯಕ ನಂದಕಿಶೋರ್ ಯಾದವ್ ಸ್ಪಷ್ಟಪಡಿಸಿದ್ದಾರೆ.

ರಾಜೀನಾಮೆ ಪತ್ರ ಸಿದ್ಧ: ಬಿಜೆಪಿ ಸಚಿವರು ಈಗಾಗಲೇ ರಾಜೀನಾಮೆಗೆ ಮುಂದಾಗಿದ್ದು, ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.