ಗುರುವಾರ , ಮೇ 19, 2022
21 °C

ಮೂಡಿಗೆರೆ: ಮತದಾನ ಉತ್ಸಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಿಗೆರೆ:  ವಿಧಾನ ಪರಿಷತ್ ನೈಋತ್ಯ ಪದವೀಧರರ ಕ್ಷೇತ್ರ ಹಾಗು ಶಿಕ್ಷಕರ ಕ್ಷೇತ್ರಕ್ಕೆ ಭಾನುವಾರ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಶಾಂತಿಯುತ ಮತದಾನ ನಡೆಯಿತು.ಬೆಳಗ್ಗೆ ಎಂಟು ಗಂಟೆಗೆ ಪ್ರಾರಂಭವಾದ ಮತದಾನ 11 ಗಂಟೆಯವರೆಗೆ ಚುರುಕುಗೊಂಡಿದ್ದರೂ  ಮಧ್ಯಾಹ್ನದ ನಂತರ ಮತದಾರರಿಲ್ಲದೇ ಮತಗಟ್ಟೆ ಬಿಕೊ ಎನ್ನುತಿತ್ತು. ನೈರುತ್ಯ ಪದವೀಧರರ ಕ್ಷೇತ್ರಕ್ಕೆ  ಮೂಡಿಗೆರೆ ತಾಲ್ಲೂಕಿನಲ್ಲಿ 869 ಮತಗಳಿದ್ದು, ಭಾನುವಾರ ನಡೆದ ಚುನಾವಣೆಯಲ್ಲಿ 274 ಪುರುಷರು ಹಾಗೂ 119 ಮಹಿಳೆಯರು ಮತ ಚಲಾಯಿಸಿದರು. ಒಟ್ಟು 393 ಮತ ಚಲಾವಣೆಯಾಗು ವುದರೊಂದಿಗೆ ಶೇ 45.22 ರಷ್ಟು ಮತ ಚಲಾವಣೆಯಾಯಿತು. ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು  155 ಮತದಾರರಿದ್ದು, ಪುರುಷರು 56 ಹಾಗು ಮಹಿಳೆಯರು 27 ಮತ ಚಲಾಯಿಸಿ, ಒಟ್ಟು 83 ಮತ ಚಲಾವಣೆಗೊಂಡಿದ್ದು, ಶೇ. 53.54 ರಷ್ಟಾಯಿತು.ತಹಶಿಲ್ದಾರ್ ಸಿ.ಚಿನ್ನರಾಜು ಅವರ ನೇತೃತ್ವದಲ್ಲಿ ನಡೆದ ಮತದಾನದಲ್ಲಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಪಿ. ಮನು ಮತ ಚಲಾಯಿಸಿದವರಲ್ಲಿ ಪ್ರಮುಖರಾಗಿದ್ದರು.ಬೆಳಗ್ಗೆ ಮತದಾನ ಪ್ರಾರಂಭವಾದ ನಂತರ ಬಿಜೆಪಿ ಹಾಗೂ ಕಾಂಗ್ರೆಸಿನ ಕಾರ್ಯಕರ್ತರು ಮತ ಚಲಾಯಿಸಿ ತಾಲ್ಲೂಕು ಕಚೇರಿ ಆವರಣದಲ್ಲಿ ತಮ್ಮ -ತಮ್ಮ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.