ಬೆಂಗಳೂರು: ಮೂಡುಬಿದಿರೆಯಲ್ಲಿ ನವೆಂಬರ್ 21ರಿಂದ 25ರವರೆಗೆ 32ನೇ ರಾಷ್ಟ್ರೀಯ ಸಬ್ಜೂನಿಯರ್ ಮತ್ತು ಜೂನಿಯರ್ ಬಾಲಕ, ಬಾಲಕಿಯರ ಬಾಲ್ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ನಡೆಯಲಿದೆ.

ಭಾರತ ಬಾಲ್ಬ್ಯಾಡ್ಮಿಂಟನ್ ಫೆಡರೇಷನ್ ಸಹಯೋಗದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯವರು ಈ ಟೂರ್ನಿಯನ್ನು ಸಂಘಟಿಸುತ್ತಿದ್ದು, 27 ರಾಜ್ಯಗಳ ಬಾಲಕರ ತಂಡಗಳು ಮತ್ತು 24 ರಾಜ್ಯಗಳ ಬಾಲಕಿಯರ ತಂಡಗಳು ಇಲ್ಲಿ ಪೈಪೋಟಿ ನಡೆಸಲಿವೆ. ಸುಮಾರು 500ಕ್ಕೂ ಹೆಚ್ಚು ಕ್ರೀಡಾಪಟುಗಳು ಮತ್ತು 300 ತಾಂತ್ರಿಕ ವರ್ಗದವರು ಭಾಗವಹಿಸುವ ಈ ಕೂಟಕ್ಕೆ ಇದೀಗ ವಿದ್ಯಾಗಿರಿ ಮೈದಾನದಲ್ಲಿ ರಂಗಸಜ್ಜಿಕೆಯಾಗಿದೆ. ಆರು ಅಂಕಣಗಳನ್ನು ಆಧುನಿಕ ತಂತ್ರಜ್ಞಾನ ಬಳಸಿ ಸಿದ್ಧಗೊಳಿಸಲಾಗಿದೆ ಎಂದು ಸಂಘಟನಾ ಸಮಿತಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕದ ಬಾಲಕರ ಮತ್ತು ಬಾಲಕಿಯರ ತಂಡಕ್ಕೆ ಕಳೆದ ಒಂದು ವಾರದಿಂದ ವಿದ್ಯಾಗಿರಿಯಲ್ಲಿಯೇ ತರಬೇತಿ ಶಿಬಿರವನ್ನೂ ಹಮ್ಮಿಕೊಳ್ಳಲಾಗಿದೆ.

ಇದೇ ಸಂದರ್ಭದಲ್ಲಿ ಅಖಿಲ ಭಾರತ ಮಟ್ಟದ ಆಹ್ವಾನಿತ ಮಹಿಳಾ ಬಾಲ್ಬ್ಯಾಡ್ಮಿಂಟನ್ ಕೂಡಾ ನಡೆಯಲಿದ್ದು, ಇದರಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಛತ್ತೀಸ್ಗಡದ ಪ್ರಬಲ ಆಟಗಾರ್ತಿಯರು ಇರುವ ಆಯ್ದ ಎಂಟು ತಂಡಗಳು ಪೈಪೋಟಿ ನಡೆಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.