ಢಾಕಾ: ಈ ಇತಿಹಾಸವೇ ಹೀಗೆ? ಅದೊಂದು ಕಹಿ-ಸಿಹಿ ನೆನಪುಗಳ ಗೂಡು. ಕೆಲವರಿಗೆ ಅದು ಖುಷಿ ಕೊಟ್ಟರೆ, ಇನ್ನು ಕೆಲವರಿಗೆ ಕಣ್ಣಂಚಿನಲ್ಲಿ ನೀರು ತರಿಸುತ್ತದೆ. ಆದರೆ ದಕ್ಷಿಣ ಆಫ್ರಿಕಾ ತಂಡದವರು ಇತಿಹಾಸ ನೆನಪಿಸಿಕೊಳ್ಳಲು ಯಾವತ್ತೂ ಇಷ್ಟಪಡಲಾರರು. ಕಾರಣ ಈ ಹಿಂದಿನ ವಿಶ್ವಕಪ್ಗಳ ನಾಕ್ಔಟ್ ಹಂತದಲ್ಲಿ ಮಾಡಿಕೊಂಡಿರುವ ಎಡವಟ್ಟುಗಳು!

ಹಾಗಾಗಿಯೇ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಪ್ರೇಮಿಗಳಿಗೆ ಈಗ ನಡುಕ ಉಂಟಾಗುತ್ತಿರಬಹುದು. ಅದಕ್ಕೆ ಕಾರಣ ಈ ತಂಡ ಹೊಂದಿರುವ ‘ಚೋಕರ್ಸ್’ ಹಣೆಪಟ್ಟಿ. ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡುವ ಈ ತಂಡ ನಾಕ್ಔಟ್ ಹಂತದಲ್ಲಿ ಮುಗ್ಗರಿಸಿ ಬೀಳುವ ಚಾಳಿ ಹೊಂದಿದೆ. ಹಾಗಾಗಿ ವಿಶ್ವಕಪ್ ಫೈನಲ್ ತಲುಪಲು ಒಮ್ಮೆಯೂ ಸಾಧ್ಯವಾಗಿಲ್ಲ. ಈ ಬಾರಿಯ ವಿಶ್ವಕಪ್ ಕ್ವಾರ್ಟರ್ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲು ಶುಕ್ರವಾರ ಕಣಕ್ಕಿಳಿಯಲಿರುವ ದಕ್ಷಿಣ ಆಫ್ರಿಕಾ ತಂಡವನ್ನು ಕಾಡುತ್ತಿರುವ ಪ್ರಮುಖ ಭಯವೇ ಅದು.

ಈ ತಂಡದ ಪ್ರತಿಭೆ ಬಗ್ಗೆ ಅನುಮಾನವಿಲ್ಲ. ಆದರೆ ‘ಚೋಕರ್ಸ್’ ಎಂಬ ಭೂತ ಈ ಬಾರಿಯೂ ಕಾಡುತ್ತಿದೆ. ಶೇರ್ ಎ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ಈ ತಂಡದವರು ಗುರುವಾರ ಅಭ್ಯಾಸ ನಡೆಸುವಾಗ ಆ ಒತ್ತಡ ಎದ್ದು ಕಾಣುತಿತ್ತು. ಇಲ್ಲಿ ಎಲ್ಲರ ಬಾಯಲ್ಲೂ ಅದೇ ಮಾತು. ಮಾಧ್ಯಮದವರ ಮುಂದೆ ಬಂದು ಕುಳಿತ ನಾಯಕ ಗ್ರೇಮ್ ಸ್ಮಿತ್ಗೆ ಎದುರಾದ ಮೊದಲ ಪ್ರಶ್ನೆಯೂ ಇದೆ!

‘ಚೋಕರ್ಸ್ ಎಂಬ ಮಾತು ಕೇಳಿ ನಮಗೆ ಸುಸ್ತಾಗಿ ಹೋಗಿದೆ. ಕ್ರಿಕೆಟ್ನಲ್ಲಿ ಇತಿಹಾಸದ ಘಟನೆಗಳಿಗೆ ಯಾವುದೇ ಬೆಲೆ ಇಲ್ಲ. ಇಂದು ಯಾರು ಉತ್ತಮ ಪ್ರದರ್ಶನ ತೋರುತ್ತಾರೋ ಆ ತಂಡ ಗೆಲ್ಲುತ್ತದೆ’ ಎಂದು ಸ್ಮಿತ್ ತಿರುಗೇಟು ನೀಡಿದರು. ಈ ಬಾರಿಯೂ ಲೀಗ್ ಹಂತದಲ್ಲಿ ಸ್ಮಿತ್ ಪಡೆ ಅದ್ಭುತ ಪ್ರದರ್ಶನ ತೋರಿ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದೆ. ಹಾಗಾಗಿ ಈಗಲೂ ಈ ತಂಡ ಚಾಂಪಿಯನ್ ಆಗುವ ಫೇವರಿಟ್. ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಒಮ್ಮೆ ಇತಿಹಾಸದ ಪುಟಗಳನ್ನು ತಿರುವಿ ಹಾಕಿ ನೋಡಿ!

1992ರ ವಿಶ್ವಕಪ್ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ಎದುರು ದಕ್ಷಿಣ ಆಫ್ರಿಕಾ ಸೋತು ಹೋಗಿತ್ತು. ಗೆಲುವಿಗಾಗಿ 22 ಎಸೆತಗಳಲ್ಲಿ 13 ರನ್ ಗಳಿಸಬೇಕಿತ್ತು. ಆದರೆ ಮಳೆ ಅಡಚಣೆಯಾದ ಕಾರಣ ಒಂದು ಎಸೆತದಲ್ಲಿ 21 ರನ್ ಗಳಿಸಬೇಕಾದ ಗುರಿ ಪಡೆದಿತ್ತು. 1999ರ ವಿಶ್ವಕಪ್ನ ಆಸ್ಟ್ರೇಲಿಯಾ ಎದುರಿನ ಸೆಮಿಫೈನಲ್ನಲ್ಲಿ ಕೊನೆಯ ಓವರ್ನಲ್ಲಿ ಎಡವಟ್ಟು ಮಾಡಿಕೊಂಡಿದ್ದ ದಕ್ಷಿಣ ಆಫ್ರಿಕಾ ಟೈಗೆ ತೃಪ್ತಿಪಡಬೇಕಾಗಿತ್ತು.

ಆದರೆ ಸೂಪರ್ ಸಿಕ್ಸ್ ಹಂತದಲ್ಲಿ ಈ ತಂಡದ ಮೇಲೆ ಗೆಲುವು ಸಾಧಿಸಿದ್ದ ಆಧಾರದ ಮೇಲೆ ಕಾಂಗರೂ ಪಡೆ ಫೈನಲ್ ಪ್ರವೇಶಿಸಿತ್ತು. ಸೂಪರ್ ಸಿಕ್ಸ್ ಹಂತದ ಆ ಪಂದ್ಯದಲ್ಲಿ ಸ್ಟೀವ್ ವಾ ನೀಡಿದ ಕ್ಯಾಚ್ಅನ್ನು ಹರ್ಷೆಲ್ ಗಿಬ್ಸ್ ಕೈಚೆಲ್ಲಿದ್ದರು. ‘ಬಾಸ್ ನಿನ್ನ ಕೈಯಿಂದ ಜಾರಿದ್ದು ಬರಿ ಕ್ಯಾಚ್ ಅಲ್ಲ, ಅದು ವಿಶ್ವಕಪ್’ ಎಂದು ಆ ಪಂದ್ಯದಲ್ಲಿ ಶತಕ ಗಳಿಸಿದ್ದ ಸ್ಟೀವ್ ವ್ಯಂಗ್ಯವಾಗಿ ನುಡಿದಿದ್ದರು.

2003ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಮಳೆ ಅಡಚಣೆಯಾಗಿತ್ತು. ಟೈ ಆದ ಆ ಪಂದ್ಯದಲ್ಲಿ ತಪ್ಪು ಲೆಕ್ಕಾಚಾರದ ಕಾರಣ ದಕ್ಷಿಣ ಆಫ್ರಿಕಾ ವಿಶ್ವಕಪ್ನಿಂದ ಹೊರ ಬಿದ್ದಿತ್ತು. 1996 ಹಾಗೂ 2007ರಲ್ಲಿ ವಿಶ್ವಕಪ್ ಗೆಲ್ಲುವ ಫೇವರಿಟ್ ಎನಿಸಿದ್ದ ಈ ತಂಡ ನಾಕ್ಔಟ್ ಹಂತದಲ್ಲಿ ಎಡವಟ್ಟು ಮಾಡಿಕೊಂಡಿತ್ತು. ಆದರೆ ಈ ಬಾರಿ ‘ಚೋಕರ್ಸ್’ ಹಣೆಪಟ್ಟಿಯಿಂದ ಹೊರಬರುವ ವಿಶ್ವಾಸದಲ್ಲಿದ್ದಾರೆ.

ಲೀಗ್ ಹಂತದ ರೋಚಕ ಪಂದ್ಯದಲ್ಲಿ ಭಾರತವನ್ನು ಮಣಿಸಿದ್ದು ಅವರಿಗೆ ಸ್ಫೂರ್ತಿ ಆಗಬಹುದು. ಬ್ಯಾಟ್ಸ್ಮನ್ಗಳಾದ ಆಮ್ಲಾ (299) ಹಾಗೂ ಡಿವಿಲಿಯರ್ಸ್ (318) ಅಮೋಘ ಫಾರ್ಮ್ನಲ್ಲಿದ್ದಾರೆ. ವೇಗಿಗಳು ಹಾಗೂ ಸ್ಪಿನ್ ಬೌಲರ್ಗಳು ಪೈಪೋಟಿಗೆ ಬಿದ್ದವರಂತೆ ಪ್ರದರ್ಶನ ತೋರುತ್ತಿದ್ದಾರೆ. ಅದಕ್ಕೆ ಸಾಕ್ಷಿ ರಾಬಿನ್ ಪೀಟರ್ಸನ್ (14), ಇಮ್ರಾನ್ ತಾಹಿರ್ (12) ಹಾಗೂ ವೇಗಿ ಸ್ಟೇನ್ (10) ಪಡೆದಿರುವ ವಿಕೆಟ್ಗಳು. ಇತ್ತ ಎದುರಾಳಿಗೆ ಶಾಕ್ ನೀಡಲು ನ್ಯೂಜಿಲೆಂಡ್ ಅವಕಾಶಕ್ಕಾಗಿ ಕಾದು ಕುಳಿತಿದೆ.

ಈತಂಡದವರು ಒಂಥರಾ ಅಲೆಗಳ ರೀತಿ. ಪ್ರತಿ ಬಾರಿ ಕೆಳಗೆ ಬಿದ್ದಾಗ ಅಲೆಗಳು ಮತ್ತೆ ಮೇಲೆದ್ದು ಬರುತ್ತವೆ. ಹಾಗೇ, ಕಿವೀಸ್ ಪಡೆ ಪುಟಿದೇಳುವ ವಿಶ್ವಾಸದಲ್ಲಿದೆ. ಲೀಗ್ ಹಂತದಲ್ಲಿ ಪಾಕ್ ತಂಡವನ್ನು ಸೋಲಿಸಿದ್ದು ವೆಟೋರಿ ಪಡೆಗೆ ಬಹುದೊಡ್ಡ ಸ್ಫೂರ್ತಿ. ಏಕೆಂದರೆ ಈ ಟೂರ್ನಿಯಲ್ಲಿ ಪಾಕ್ ಸೋತ ಏಕೈಕ ಪಂದ್ಯವದು.

ಕೆಲ ದಿನಗಳ ಹಿಂದೆಯಷ್ಟೇ ತಮ್ಮ 27ನೇ ಜನ್ಮದಿನ ಆಚರಿಸಿಕೊಂಡಿರುವ ಟೇಲರ್ ಅವರ ಅದ್ಭುತ ಫಾರ್ಮ್ ಮೇಲೆ ಈ ತಂಡಕ್ಕೆ ಭರವಸೆ.ಜೊತೆಗೆ ಈ ತಂಡದ ಬೌಲಿಂಗ್ ಕೋಚ್ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಅಲೆನ್ ಡೊನಾಲ್ಡ್. ಅವರಿಗೆ ಸ್ಮಿತ್ ಪಡೆಯ ದೌರ್ಬಲ್ಯ ಏನು ಎಂಬುದು ಗೊತ್ತಿದೆ! ಆದರೆ ಈ ತಂಡವನ್ನು ಗಾಯದ ಸಮಸ್ಯೆ ಸುತ್ತುವರಿದಿದೆ.

ವೆಟೋರಿ ಮಂಡಿ ನೋವಿನಿಂದ ಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಬ್ರೆಂಡನ್ ಮೆಕ್ಲಮ್ ಕೂಡ ಮೊಣಕಾಲು ನೋವಿಗೆ ಒಳಗಾಗಿದ್ದಾರೆ. ಕೈಲ್ ಮಿಲ್ಸ್ ತೊಡೆ ನೋವಿನಿಂದ ಸುಧಾರಿಸಿಕೊಳ್ಳುತ್ತಿದ್ದಾರೆ. ನ್ಯೂಜಿಲೆಂಡ್ ಕೂಡ ಇದುವರೆಗೆ ಒಮ್ಮೆಯೂ ವಿಶ್ವಕಪ್ ಫೈನಲ್ ತಲುಪಿಲ್ಲ.

ನ್ಯೂಜಿಲೆಂಡ್

ಡೇನಿಯಲ್ ವೆಟೋರಿ (ನಾಯಕ), ಜೇಮ್ಸ್ ಫ್ರಾಂಕ್ಲಿನ್, ಮಾರ್ಟಿನ್ ಗುಪ್ಟಿಲ್, ರಾಸ್ ಟೇಲರ್, ಜೇಮಿ ಹೌ, ಬ್ರೆಂಡನ್ ಮೆಕ್ಲಮ್ (ವಿಕೆಟ್ ಕೀಪರ್), ನೇಥನ್ ಮೆಕ್ಲಮ್, ಕೈಲ್ ಮಿಲ್ಸ್, ಜೇಕಬ್ ಓರಮ್, ಜೆಸ್ಸಿ ರೈಡರ್, ಟಿಮ್ ಸೌಥಿ, ಸ್ಕಾಟ್ ಸ್ಟೈರಿಸ್, ಕೇನ್ ವಿಲಿಯಮ್ಸನ್, ಡೆರಿಲ್ ಟಫಿ ಹಾಗೂ ಲ್ಯೂಕ್ ವುಡ್ಕಾಕ್.

ದಕ್ಷಿಣ ಆಫ್ರಿಕಾ
ಗ್ರೇಮ್ ಸ್ಮಿತ್ (ನಾಯಕ), ಹಾಶಿಮ್ ಆಮ್ಲಾ, ಜಾಕ್ ಕಾಲಿಸ್, ಎಬಿ ಡಿವಿಲಿಯರ್ಸ್, ಜೀನ್ ಪಾಲ್ ಡುಮಿನಿ, ಫಾಫ್ ಡು ಪ್ಲೆಸಿಸ್, ಇಮ್ರಾನ್ ತಾಹಿರ್, ಮಾರ್ನ್ ಮಾರ್ಕೆಲ್, ವೇಯ್ನೆ ಪಾರ್ನೆಲ್, ರಾಬಿನ್ ಪೀಟರ್ಸನ್, ಡೇಲ್ ಸ್ಟೇನ್, ಜೋಹಾನ್ ಬೋಥಾ, ಲೊನ್ವಾಬೊ ಸೊಸೊಬೆ, ಕಾಲಿನ್ ಇನ್ಗ್ರಾಮ್ ಹಾಗೂ ಮಾರ್ನ್ ವಾನ್ ವಿಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.