ಸೋಮವಾರ, ಏಪ್ರಿಲ್ 19, 2021
25 °C

ಮೂರು ಪುಸ್ತಕ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: “ಮಾನವನ ಜೀವನದ ಪರಸ್ಪರ ಸಂಬಂಧಗಳ ಕುರಿತು ಮನೋವೈಜ್ಞಾನಿಕವಾಗಿ ಚಿಂತನೆ ನಡೆಯಬೇಕಿದೆ. ಸಂಬಂಧಗಳು ಯಾವ ರೀತಿಯಲ್ಲಿ ಇರಬೇಕು ಎಂಬುದರ ಕುರಿತು ಲೇಖಕ ಎಚ್.ಜಿ.ಮಳಗಿ ಅವರು ತಮ್ಮ ಪುಸ್ತಕಗಳಲ್ಲಿ ಸವಿವರ ವಾಗಿ ಉಲ್ಲೇಖಿಸಿದ್ದಾರೆ” ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.ನಗರ ಆಲೂರು ವೆಂಕಟರಾವ್ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಎಚ್.ಜಿ.ಮಳಗಿ ಅವರ `ಗೋಡ್ಸೆ ನೀನೆಲ್ಲಿದ್ದೀಯಾ?,~ `ಅಳಿವಿ ನಂಚಿನಲ್ಲಿರುವ ಸಂಬಂಧಗಳು~ ಹಾಗೂ `ಅಕ್ಷಯ ಪಾತ್ರೆ~ ಎಂಬ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತ ನಾಡಿದರು.`ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಯಾವ ರೀತಿ ನಡೆದುಕೊಳ್ಳುತ್ತಾರೆ. ಸಂದಿಗ್ಧ ಪರಿಸ್ಥಿತಿ ಎದುರಾದಾಗ ಅವರು ಯಾವ ರೀತಿ ಆತ್ಮಹತ್ಯೆಗೆ ಶರಣಾಗುತ್ತಾರೆ. ಪ್ರೀತಿ, ಪ್ರೇಮದಂತಹ ಬಲೆಗೆ ಸಿಲುಕಿ ತಾವು ಯಾವ ರೀತಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ ಎಂಬುದರ ಕುರಿತು ಮನಮುಟ್ಟುವಂತೆ ಬರೆದಿದ್ದಾರೆ.ಮಳಗಿ ತಮ್ಮ ವೃತ್ತಿ ಜೀವನ ವನ್ನು ಉಪಜೀವನವನ್ನಾಗಿ ಮಾಡಿಕೊಂಡು ಸಾಹಿತ್ಯವನ್ನು ಜೀವನವನ್ನಾಗಿ ಸ್ವೀಕರಿಸಿದ್ದಾರೆ. ಇಂಥವರ ಲೇಖನ ಹಾಗೂ ಇವರ ವ್ಯಕ್ತಿತ್ವವನ್ನು ಸಮಾಜ ಗುರುತಿಸಿ ಮೇಲೆತ್ತರಕ್ಕೆ ಬೆಳೆಯುವಂತೆ ಮಾಡಬೇಕು~ ಎಂದರು.ಖ್ಯಾತ ಮನೋರೋಗ ತಜ್ಞ ಡಾ.ಆನಂದ ಪಾಂಡುರಂಗಿ, ಮಳಗಿ ಅವರ ಗೋಡ್ಸೆ ನೀನೆಲ್ಲಿದ್ದೀಯಾ? ಪುಸ್ತಕದ ಕುರಿತು ಮಾತನಾಡಿ, `ಮಳಗಿ ರಚಿಸಿದ ಪ್ರತಿಯೊಂದು ಪುಸ್ತಕದಲ್ಲಿ ಮನಸ್ಸು ಹಾಗೂ ಮನಸ್ಮೃತಿಯನ್ನು ಬಿಂಬಿಸುವ ಕಾರ್ಯ ಮಾಡಿದ್ದಾರೆ. ಮಾನಸಿಕವಾದ ಎಲ್ಲ ದೃಷ್ಟಿಕೋನ ಗಳನ್ನು ಇಟ್ಟುಕೊಂಡು ಪುಸ್ತಕಗಳನ್ನು ರಚಿಸಿದ್ದಾರೆ. ಇವರು ರಚಿಸಿದ ಪುಸ್ತಕ ಗಳಲ್ಲಿ ಯಾವುದೇ   ಉಲ್ಲೇಖಿಸಿಲ್ಲ. ಸಮಾಜದ ದೃಷ್ಟಿಕೋನ ವನ್ನು ಇಟ್ಟು ಕೊಂಡು ರಚಿಸಿದ್ದಾರೆ.ಸಮಾಜದ ವ್ಯವಸ್ಥೆ ಹಾಳಾಗಿರುವ ಇಂದಿನ ದಿನಗಳಲ್ಲಿ ಸಾಮಾಜಿಕ ವ್ಯವಸ್ಥೆ ಯಾವ ದಿಕ್ಕಿನತ್ತ ಸಾಗಿದೆ ಹಾಗೂ ಸಂಶಯಾಸ್ಪದ ಸಮಸ್ಯೆಗಳಿದ್ದಾಗ ಅವುಗಳನ್ನು ಯಾವ ರೀತಿ ಪರಿಹರಿಸಿ ಕೊಳ್ಳಬೇಕು ಎಂಬುದರ ಕುರಿತು ಒಬ್ಬ ಮನೋರೋಗ ತಜ್ಞನ ಜಾಗದಲ್ಲಿ ನಿಂತು ಈ ಪುಸ್ತಕಗಳನ್ನು ರಚಿಸಿದ್ದಾರೆ~ ಎಂದರು.ಈಶ್ವರಚಂದ್ರ ಬೆಟಗೇರಿ ಅವರು `ಅಕ್ಷಯ ಪಾತ್ರೆ~ ಹಾಗೂ ಶಿರೀಷ ಜೋಶಿ `ಅಳಿವಿನಂಚಿನಲ್ಲಿರುವ ಸಂಬಂಧ ಗಳು~ ಪುಸ್ತಕದ ಕುರಿತು ಮಾತ ನಾಡಿದರು.ಲೇಖಕ ಎಚ್.ಜಿ.ಮಳಗಿ ಅನಿಸಿ ಕೆಗಳನ್ನು ಹಂಚಿಕೊಂಡರು. ಜಿ.ಎಂ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು.ಸಿರಿಧಾನ್ಯಗಳ ಆಹಾರ ತಯಾರಿಕಾ ಕಾರ್ಯಕ್ರಮ

ಧಾರವಾಡ: ನಗರದ ರ‌್ಯಾಪಿಡ್ ಸಂಸ್ಥೆಯ ವತಿಯಿಂದ ಮಹಿಳೆ ಯರಿಗಾಗಿ ಸಿರಿಧಾನ್ಯಗಳ ಆಹಾರ ತರಬೇತಿ ಕಾರ್ಯಕ್ರಮ ಆಯೋಜಿಸಿದೆ. ತರಬೇತಿಯು ಜುಲೈ 6 ಮತ್ತು 7ರಂದು ಬೆಳಿಗ್ಗೆ 10.30ರಿಂದ ಸಂಜೆ 5ರ ವರೆಗೆ ರ‌್ಯಾಪಿಡ್ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ.ತರಬೇತಿ ಪಡೆಯಲು ಇಚ್ಚಿಸುವವರು ಜು 4ರ ಒಳಗಾಗಿ ನಗರದ ಮಾಳಡ್ಡಿಯ ಕರ್ಣಾಟಕ ಬ್ಯಾಂಕ್ ಎದುರಿಗಿನ ಗೋವಿಂದ ನಿವಾಸದ ಮೊದಲನೇ ಮಹಡಿ ಯಲ್ಲಿರುವ ರ‌್ಯಾಪಿಡ್ ಸಂಸ್ಥೆಯಲ್ಲಿ ಹೆಸರು ನೋಂದಾಯಿಸಬಹುದು.  ಮಾಹಿತಿಗಾಗಿ ದೂರವಾಣಿ ಸಂಖ್ಯೆ 08362444066 ಅಥವಾ 9742196835ಕ್ಕೆ ಸಂಪರ್ಕಿ ಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.