ಸೋಮವಾರ, ಮೇ 17, 2021
31 °C

ಮೂರ್ತಿ ಸ್ಥಾಪನೆ ಸರ್ಕಾರದ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೋಂಟದಾರ್ಯ ಸ್ವಾಮೀಜಿ ಅವರು  ಮಾಜಿ ಮಂತ್ರಿ ಬಿ. ಶ್ರಿರಾಮುಲು ಅವರ ಸಹಕಾರದಿಂದ ಗದುಗಿನ ಕೆರೆಯ ನೀರನ್ನು ಇಂಗಿಸಿ ಅಲ್ಲಿ ಬಸವಣ್ಣನವರ ಮೂರ್ತಿ ಸ್ಥಾಪನೆಗೆ ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ (ಪ್ರ ವಾ ವಾ ಏ.2)ದಲ್ಲಿ  ಹುರುಳಿಲ್ಲ.ಶ್ರಿರಾಮುಲು ಗದಗ ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ದಾಗ ಒಮ್ಮೆ ಶ್ರಿಗಳ ಆಶೀರ್ವಾದ ಪಡೆಯಲು ಮಠಕ್ಕೆ ಬಂದಿದ್ದರು. ಆಗ ಅವರು ಗದುಗಿನ (ಭೀಷ್ಮ)ಕೆರೆಯಲ್ಲಿ ಶಿವನ ಮೂರ್ತಿ ಸ್ಥಾಪಿಸುವುದಾಗಿ ತಿಳಿಸಿದರು.ಆಗ ಶ್ರೀಗಳು ಹೈದರಾಬಾದ್‌ನ ಹುಸೇನ್ ಸಾಗರದಲ್ಲಿ ಬುದ್ಧನ ಮೂರ್ತಿ ಸ್ಥಾಪಿಸಿದ ಮಾದರಿಯಲ್ಲಿ ಯುಗ ಪುರುಷ ಬಸವೇಶ್ವರರ ಪುತ್ಥಳಿ ಸ್ಥಾಪಿಸಲು ಸಲಹೆ ನೀಡಿದ್ದರಷ್ಟೇ.ಶ್ರೀರಾಮುಲು ಅಂದಿನ ಮುಖ್ಯಮಂತ್ರಿಗಳ ಹಾಗೂ ಪ್ರವಾಸೋದ್ಯಮ ಸಚಿವರ ನೆರವಿನಿಂದ ಸರ್ಕಾರದಿಂದ 7.63 ಕೋಟಿ ರೂಗಳನ್ನು ಈ ಯೋಜನೆಗೆ ಮಂಜೂರು ಮಾಡಿಸಿದ್ದರು. ಆ ಹಣದಲ್ಲಿ ಕಾಮಗಾರಿ ನಡೆಯುತ್ತಿದೆ. ಇದಕ್ಕೂ ಸ್ವಾಮೀಜಿಯವರಿಗೂ ಸಂಬಂಧ ಇಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.