ಮುಧೋಳ: ವರ್ಷವಿಡೀ ಭೋದನೆ ಮಾಡದೆ ವ್ಯರ್ಥ ಕಾಲಹರಣ ಮಾಡುವ ಉಪನ್ಯಾಸಕರ ವಿರುದ್ಧ ಕ್ರಮ ಜರುಗಿಸಬೇಕು, ಕಾಲೇಜಿನಲ್ಲಿ ಪ್ರಯೋಗಾಲಯ ಸೇರಿದಂತೆ ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ ಎ.ಬಿ.ವಿ.ಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬುಧವಾರ ಕಾಲೇಜು ಆವರಣದಲ್ಲಿ ಕುಳಿತು ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳನ್ನು ಘೋಷಣೆಗಳ ಮುಖಾಂತರ ತಿಳಿಯಪಡಿಸುತ್ತಿದ್ದರು. ವರ್ಷ ಕಳೆದರೂ ತಮಗೆ ಕೊಟ್ಟಿರುವ ವಿಷಯವನ್ನು ಮುಗಿಸದೆ ವ್ಯರ್ಥ ಕಾಲಹರಣ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ನಡೆಸುವುದು, ಕಾಲೇಜಿನ ಸಿಪಾಯಿಗಳನ್ನು ತಮ್ಮ ಸ್ವಂತದ ಕೆಲಸಗಳಿಗೆ ಬಳಸಿಕೊಳ್ಳುವುದು ಎಂದು ಹೇಳಿದರು.

ಈ ಬಾರಿ ನಿಮ್ಮ ವಿಷಯ ಪೂರ್ಣಗೊಂಡಿಲ್ಲವೆಂದು ತಿಳಿಸಿದಾಗ `ಯಾಕೆ ಕಾಳಜಿ ಮಾಡುತ್ತೀರಿ ಪಾಸ್ ಮಾಡಿಸಿ ಕೊಡುತ್ತೇನೆ ಎಂದು ವಿದ್ಯಾರ್ಥಿಗಳಿಂದ ಪರೀಕ್ಷಾ ನಂಬರ್ ಪಡೆದುಕೊಳ್ಳುವ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಎನ್.ಎಲ್ ತೇರದಾಳರನ್ನು ತಕ್ಷಣವೇ ಅಮಾನತ್ತುಗೊಳಸಿ ಆದೇಶ ಹೊರಡಿಸಬೇಕು ಮತ್ತು ವಿದ್ಯಾರ್ಥಿಗಳು ಪಡೆದ ಆಂತರಿಕ ಅಂಕಗಳನ್ನು ನೋಟಿಸ್ ಬೋರ್ಡ್ನಲ್ಲಿ ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ವಿದ್ಯಾರ್ಥಿಗಳಿಗೆ ಅನುಗುಣವಾಗಿ ಶಾಲಾ ಕೊಠಡಿಗಳನ್ನು ನಿರ್ಮಿಸಿ ಕೊಡಬೇಕು, ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು, ಪ್ರಯೋಗಾಲಯ ರೀಡಿಂಗ್ ರೂಮ್ ನಿರ್ಮಿಸಿಕೊಡಬೇಕು, ವಾಣಿಜ್ಯ ವಿಭಾಗಕ್ಕಿರುವ ಉಪನ್ಯಾಸಕರ ಕೊರತೆಯನ್ನು ನೀಗಿಸಬೇಕು, ಆಟದ ಮೈದಾನ ನಿರ್ಮಿಸಿಕೊಡಬೇಕು ಎಂದು ತಮ್ಮ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.