ಮಂಗಳವಾರ, ಜನವರಿ 21, 2020
27 °C

ಮೂಲ ವಿಜ್ಞಾನದ ಅವಗಣನೆ ಬೇಡ: ಡಾ.ಮೋಹನದಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗೊಳ್ಳಿ (ಬೈಂದೂರು): ಪಿಯುಸಿ­ಯಲ್ಲಿ ವಿಜ್ಞಾನ ಅಧ್ಯಯನ ಮಾಡುವ­ವರು ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣದ ಗುರಿ ಹೊಂದಿರುವ ವಿದ್ಯಮಾನ ದೇಶದ ಭವಿಷ್ಯದ ದೃಷ್ಟಿಯಿಂದ ಸರಿ ಎನಿಸದು. ಅದರಿಂದ ವಿಜ್ಞಾನ ಕ್ಷೇತ್ರ ಬರಡಾಗುವ ಅಪಾಯವಿದೆ.ನೈಜ ಪ್ರತಿಭೆ ಹೊಂದಿರುವವರು ಮೂಲ ವಿಜ್ಞಾನ ಕಲಿಕೆಯನ್ನು ತೊರೆಯ­ಬಾರ­ದು. ಶಿಕ್ಷಣ ಸಂಸ್ಥೆಗಳಲ್ಲಿ ಅದಕ್ಕೆ ಪೂರಕ ವಾತಾವರಣ ಸೃಷ್ಟಿಸಬೇಕು. ಆ ನಿಟ್ಟಿನಲ್ಲಿ ವಿಜ್ಞಾನ ಮಾದರಿಗಳ ತಯಾರಿಗೆ ನೀಡುವ ಪ್ರೋತ್ಸಾಹ ಉತ್ತಮ ಹೆಜ್ಜೆ ಎಂದು ಸ್ಥಳೀಯ ವೈದ್ಯ ಡಾ. ಮೋಹನ­ದಾಸ ಪೈ ಹೇಳಿದರು.ಇಲ್ಲಿನ ಎಸ್‌ವಿ ಪದವಿಪೂರ್ವ ಕಾಲೇ­ಜಿ­ನಲ್ಲಿ ಇತ್ತೀಚೆಗೆ ನಡೆದ ಎರಡು ದಿನ­ಗಳ ವಿಜ್ಞಾನ ಮಾದರಿಗಳ ಪ್ರದ­ರ್ಶನ­ವನ್ನು ಉದ್ಘಾಟಿಸಿ ಮಾತನಾಡಿ­ದರು.ಪ್ರಾಂಶುಪಾಲರಾದ ಸರಸ್ವತಿ ಎಸ್. ರಾವ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಒಟ್ಟು 200 ವಿದ್ಯಾರ್ಥಿಗಳು ರಚಿಸಿದ್ದ ಹಾಗೂ ಸಂಗ್ರಹಿಸಿದ್ದ ಮಾದರಿಗಳಿದ್ದ ಈ ಪ್ರದರ್ಶನವನ್ನು ಇತ್ತೀಚೆಗೆ ನಿಧನರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ಸ್ಮೃತಿಗೆ  ಅರ್ಪಿಸಲಾಯಿತು.ಉಪನ್ಯಾಸಕ ಆರ್. ಎನ್. ರೇವಣ್‌­ಕರ್‌ ಸ್ವಾಗತಿಸಿದರು. ಮುಖ್ಯಶಿಕ್ಷಕ ವಾಮನದಾಸ ಭಟ್‌ ವಂದಿಸಿದರು. ಎಚ್. ಸುಜಯೀಂದ್ರ ಹಂದೆ ನಿರೂಪಿಸಿ­ದರು. ಆಡಳಿತ ಸಮಿತಿ ಕಾರ್ಯದರ್ಶಿ ಎನ್‌. ಸದಾಶಿವ ನಾಯಕ್‌ ಇದ್ದರು.

ಪ್ರತಿಕ್ರಿಯಿಸಿ (+)