ಮೂವರು ಸಿಖ್ ಗಣ್ಯರಿಗೆ ಪ್ರಶಸ್ತಿ
ನ್ಯೂಯಾರ್ಕ್ (ಪಿಟಿಐ): ಹಿರಿಯ ಭಾರತೀಯ ರಾಯಭಾರಿ ಮತ್ತು ಲೇಖಕರಾದ ನವ್ತೇಜ್ ಸರ್ನಾ ಸೇರಿದಂತೆ ಮೂವರು ಗಣ್ಯ ಸಿಖ್ಖರಿಗೆ ಸಿಖ್ ಪಾರಂಪರೆ ಪ್ರಶಸ್ತಿಯನ್ನು `ಸಿಖ್ ಉನ್ನತ್ತೀಕರಣಕ್ಕಾಗಿ~ ನೀಡಲಾಗಿದೆ.
ಸಿಖ್ ಕಲೆ ಮತ್ತು ಚಿತ್ರ ಪ್ರತಿಷ್ಠಾನ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸರ್ನಾ ಅವರು ಪ್ರಶಸ್ತಿಯನ್ನು ಪಡೆದರು.
ಪ್ರಸ್ತುತ ಇಸ್ರೇಲ್ನ ಭಾರತೀಯ ರಾಯಭಾರಿಯಾದ ಸರ್ನಾ ಎರಡು ಕಾದಂಬರಿಗಳನ್ನು `ದ ಎಕ್ಸೈಲ್~ (2008) ಮತ್ತು `ವಿ ವರ್ನಾಟ್ ಲವರ್ಸ್ ಲೈಕ್ ದಟ್~ (2003) ಬರೆದಿದ್ದಾರೆ. ಈ ಎರಡು ಪುಸ್ತಕಗಳನ್ನು ಹಿಂದಿಗೆ ಭಾಷಾಂತರಿಸಲಾಗಿದೆ. `ವಿ ವರಂಟ್ ಲವರ್ಸ್ ಲೈಕ್ ದಟ್~ ಕಾದಂಬರಿಯನ್ನು ಅರೇಬಿಕ್ಗೂ ಸಹ ಭಾಷಾಂತರಿಸಲಾಗಿದೆ.
ಸರ್ನಾ ಅವರನ್ನು ಹೊರತುಪಡಿಸಿ ಹೆರಿಟೇಜ್ ಪ್ರಶಸ್ತಿಯನ್ನು ಸ್ಟಾಂಡರ್ಡ್ ಚಾರ್ಟರ್ಡ್ನ ಏಷ್ಯದ ಸಿಇಒ ಜಸ್ಪಾಲ್ ಬಿಂರ್ದಾ ಅವರಿಗೆ (ಮುಖಂಡತ್ವಕ್ಕೆ) ಮತ್ತು ಚಿತ್ರ ನಿರ್ಮಾಪಕ ಗುರಿಂದರ್ ಚದ್ದಾ (`ಬೆಂಡ್ ಇಟ್ ಲೈಕ್ ಬೆಕ್ಹ್ಯಾಂ)ಕಲೆಗೆ ನೀಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.