ಮೆಕ್‌ಗ್ರಾ ದಾಖಲೆ ಮುರಿದ ರಿಕಿ

7

ಮೆಕ್‌ಗ್ರಾ ದಾಖಲೆ ಮುರಿದ ರಿಕಿ

Published:
Updated:

ಅಹಮದಾಬಾದ್ (ಪಿಟಿಐ): ವಿಶ್ವಕಪ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯ ಆಡಿದ ದಾಖಲೆ ಶ್ರೇಯವನ್ನು ಆಸ್ಟ್ರೇಲಿಯಾ ತಂಡದ ನಾಯಕ ರಿಕಿ ಪಾಂಟಿಂಗ್ ಅವರು ಸೋಮವಾರ ತಮ್ಮದಾಗಿಸಿಕೊಂಡರು.ತಮ್ಮದೇ ದೇಶದ ಗ್ಲೆನ್ ಮೆಕ್‌ಗ್ರಾ ಅವರ 39 ವಿಶ್ವಕಪ್ ಪಂದ್ಯಗಳ ದಾಖಲೆಯನ್ನು ‘ಪಂಟರ್’ ಅಳಿಸಿ ಹಾಕಿದರು. 1996ರಿಂದ 2007ರವರೆಗೆ ವಿಶ್ವಕಪ್‌ನಲ್ಲಿ ಆಡಿದ್ದ ಮೆಕ್‌ಗ್ರಾ ಅವರು ಆನಂತರ ನಿವೃತ್ತಿ ಹೊಂದಿದರು.ಈ ಬಾರಿಯ ವಿಶ್ವಕಪ್‌ನಲ್ಲಿ ‘ಎ’ ಗುಂಪಿನಲ್ಲಿರುವ ಆಸ್ಟ್ರೇಲಿಯಾ ಸೋಮವಾರ ತನ್ನ ಮೊದಲ ಪಂದ್ಯವನ್ನು ಜಿಂಬಾಬ್ವೆ ವಿರುದ್ಧ ಆಡಿತು. ಈ ಪಂದ್ಯಕ್ಕೆ ಮುನ್ನ ವಿಶ್ವಕಪ್‌ನಲ್ಲಿ 39 ಪಂದ್ಯ ಆಡಿದ್ದ ಪಾಂಟಿಂಗ್ ಅವರು ಮೆಕ್‌ಗ್ರಾ ಅವರಿಗೆ ಸಮನಾಗಿ ನಿಂತಿದ್ದರು. ಈಗ ಅವರನ್ನು ಮೀರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry