ಮೇರಿಗೆ ಲೆಫ್ಟಿನೆಂಟ್ ಕರ್ನಲ್ ಪದವಿ
ನವದೆಹಲಿ (ಪಿಟಿಐ): ಭಾರತದ ಶ್ರೇಷ್ಠ ಬಾಕ್ಸರ್ ಮೇರಿ ಕೋಮ್ ಅವರಿಗೆ ಗೌರವ ಲೆಫ್ಟಿನೆಂಟ್ ಕರ್ನಲ್ ಪದವಿ ನೀಡಲು ಸೇನಾಪಡೆ ಮುಂದಾಗಿದೆ. ಅವರೀಗ ಈ ಪದವಿಗೆ ಅರ್ಹರಾಗಲಿರುವ ಭಾರತದ ಮೊದಲ ಮಹಿಳೆ ಎನಿಸಿಕೊಳ್ಳಲಿದ್ದಾರೆ. ಈ ಗೌರವ ಪಡೆಯಲಿರುವ ಐದನೇ ಕ್ರೀಡಾಪಟು ಕೂಡ.
ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ದೋನಿ, ಸಚಿನ್ ತೆಂಡೂಲ್ಕರ್, ಕಪಿಲ್ ದೇವ್ ಹಾಗೂ ಶೂಟರ್ ಅಭಿನವ್ ಬಿಂದ್ರಾ ಈಗಾಗಲೇ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
`ಹೌದು, ಈ ವಿಷಯ ಪ್ರಕ್ರಿಯೆಯಲ್ಲಿದೆ. ಸೇನಾಪಡೆ ಈ ವಿಷಯವನ್ನು ಸದ್ಯದಲ್ಲಿಯೇ ಪ್ರಕಟಿಸಲಿದೆ~ ಎಂದು ಮೇರಿ ಪ್ರತಿಕ್ರಿಯಿಸಿದ್ದಾರೆ.
`ಒಲಿಂಪಿಕ್ಸ್ನಲ್ಲಿ ಮೊದಲ ಬೌಟ್ ಗೆದ್ದರೆ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಬಹುದು. ಏಕೆಂದರೆ ಇಲ್ಲಿ ಕಡಿಮೆ ಬಾಕ್ಸರ್ಗಳಿರುತ್ತಾರೆ. ಕ್ರೀಡಾಕೂಟಕ್ಕೆ ನಾನೀಗ ಪೂರ್ಣವಾಗಿ ಸಿದ್ಧವಾಗಿದ್ದೇನೆ. ಪದಕ ಗೆಲ್ಲುವ ವಿಶ್ವಾಸ ನನಗಿದೆ. ಆದರೆ ಯಾವ ಪದಕ ಎಂದು ಹೇಳಲಾರೆ~ ಎಂದು ಮಣಿಪುರದ ಮೇರಿ ನುಡಿದಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.