ಶನಿವಾರ, ಮೇ 28, 2022
31 °C

`ಮೇಲು-ಕೀಳು ಭಾವನೆ ತೊಲಗಿಸಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜರಾಜೇಶ್ವರಿನಗರ: `ಬಡವ- ಶ್ರೀಮಂತ, ಮೇಲು-ಕೀಳು ಭಾವನೆ ತೊಲಗಿಸಿ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕಾಗಿದೆ' ಎಂದು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.ಎಚ್. ಗೊಲ್ಲಹಳ್ಳಿಯಲ್ಲಿ ಕಾಳಿಕಾಂಬ ಮಠೇಶ್ವರಿ ದೇವರ ಜೀರ್ಣೋದ್ಧಾರ ಮತ್ತು ನೂತನ ದೇವಸ್ಥಾನ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.ಕಂಠೀರವ ಸ್ಟುಡಿಯೋದ ಮಾಜಿ ಅಧ್ಯಕ್ಷ ಎಂ.ರುದ್ರೇಶ್, `ಶಿಥಿಲಗೊಂಡಿದ್ದ ಪುರಾತನ ದೇವಸ್ಥಾನವನ್ನು ್ಙ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದು ನಿತ್ಯಪೂಜೆ- ಪುರಸ್ಕಾರಗಳು ನಡೆಯಲಿವೆ' ಎಂದರು.ಈ ಸಂದರ್ಭದಲ್ಲಿ ಶಾಸಕ ಎಸ್.ಟಿ. ಸೋಮಶೇಖರ್, ಉದ್ಯಮಿ ಎಂ. ರಾಜಶೇಖರ್, ಟ್ರಸ್ಟಿ ಸಿ.ಎನ್. ಪರಮಶಿವಯ್ಯ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.