ಬುಧವಾರ, ಜನವರಿ 29, 2020
28 °C

ಮೇವು ಹಗರಣ: ಲಾಲು ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಂಚಿ(ಪಿಟಿಐ): ಮೇವು ಹಗರಣ­ದಲ್ಲಿ ಜೈಲುಶಿಕ್ಷೆಗೆ ಒಳ­ಗಾಗಿದ್ದ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌, ಬಿರ್ಸಾ ಮುಂಡಾ ಕೇಂದ್ರ ಕಾರಾಗೃ­ಹದಿಂದ  ಸೋಮವಾರ ಬಿಡುಗಡೆ­ಯಾದರು.ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ನಿಯಮಗಳನ್ನು ಪೂರ್ಣ­ಗೊ­ಳಿಸಿದ ನಂತರ ಬಿಡುಗಡೆ ಮಾಡ­ಲಾ­ಯಿತು. ಲಾಲು ಎರಡೂವರೆ ತಿಂಗಳಿನಿಂದ ಜೈಲಿನಲ್ಲಿದ್ದರು.‘ಜಾತ್ಯತೀತ ಶಕ್ತಿಗಳನ್ನು ಬಲಪಡಿಸುವ ಉದ್ದೇಶದಿಂದ ದೇಶದಾದ್ಯಂತ ಪ್ರವಾಸ ಕೈಗೊಳ್ಳಲಿದ್ದೇನೆ. ನರೇಂದ್ರ ಮೋದಿ, ಬಿಜೆಪಿ ಅಥವಾ ಆರ್‌ಎಸ್ಎಸ್‌ ತಮ್ಮ ಕನಸು ನನಸಾಗಿಸಿಕೊಳ್ಳಲು ಬಿಡುವುದಿಲ್ಲ’ ಎಂದು ಜೈಲಿನಿಂದ ಬಿಡುಗಡೆ ನಂತರ ಲಾಲು ಸುದ್ದಿಗಾರರಿಗೆ  ಹೇಳಿದರು. ಆರ್‌ಜೆಡಿ ಮುಖ್ಯಸ್ಥನ ಬಿಡುಗಡೆ ನಂತರ ಪಕ್ಷದ ನೂರಾರು ಕಾರ್ಯ­ಕರ್ತರು ಅಭಿ­ನಂದಿಸಿದರು.  ಬಿಹಾರದ ಮತ್ತೊಬ್ಬ ಮಾಜಿ ಮುಖ್ಯ ಮಂತ್ರಿ ಜಗ­ನ್ನಾಥ ಮಿಶ್ರಾ ಸೇರಿದಂತೆ 43 ಜನರಿಗೆ ಮೇವು ಹಗರಣದಲ್ಲಿ ಸೆ.30 ರಂದು ಶಿಕ್ಷೆ ನೀಡಲಾಗಿತ್ತು.ಜೈಲಿನಲ್ಲಿ ಮಾಲಿಯಾಗಿದ್ದ ಲಾಲು

ರಾಂಚಿ (ಪಿಟಿಐ):
ಲಾಲು ಪ್ರಸಾದ್‌ ಅವರನ್ನು ಜೈಲಿನಲ್ಲಿ ತೋಟದ ಮಾಲಿಯಾಗಿ ನಿಯೋಜಿಸ­ಲಾಗಿತ್ತು.

ಲಾಲು ಅವರಿಗೆ  ನೀಡುತ್ತಿದ್ದ ಸಂಬಳ ದಿನವೊಂದಕ್ಕೆ ಬರೋಬ್ಬರಿ 14 ರೂಪಾಯಿ ಎಂದು ಜೈಲು ಅಧೀಕ್ಷಕ ದಿಲೀಪ್‌ ಪ್ರಧಾನ್‌  ತಿಳಿಸಿದ್ದಾರೆ. ಮೊದಲ ಬಾರಿಗೆ ಶಿಕ್ಷಕರಾಗಿ ನಿಯೋಜಿಸಲಾಗಿತ್ತು. ಮಾಲಿ ಕೆಲಸ ನೀಡುವಂತೆ ಕೋರಿಕೊಂಡ ನಂತರ ತೋಟದಲ್ಲಿ ಮಾಲಿ ಕೆಲಸ ನೀಡಲಾಯಿತು ಎಂದು ಜೈಲು ಸಿಬ್ಬಂದಿ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)