ಬೆಂಗಳೂರು: ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ನೆರವಾಗಲು ಮೈಕ್ರೊಸಾಫ್ಟ್ ಇಂಡಿಯಾ ಸಂಸ್ಥೆಯು ಶುಕ್ರವಾರ ‘ವಿಂಡೋಸ್ ಅಜೂರ್ ಟ್ರೇಡ್ ಇನ್ ಯೋಜನೆ’ ಪ್ರಕಟಿಸಿದೆ. ಈ ಯೋಜನೆ ಜೂನ್ 30ರ ವರೆಗೆ ಜಾರಿಯಲ್ಲಿ ಇರಲಿದೆ.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕರಣ್ ಬಾಜ್ವಾ, ‘ಈ ಯೋಜನೆಯ ಮೂಲಕ ಗ್ರಾಹಕರು ತಮ್ಮ ಸಾಂಪ್ರದಾಯಿಕ ಹಾರ್ಡ್ವೇರ್ ಅನ್ನು ಸಂಸ್ಥೆಗೆ ನೀಡಬಹುದು. ಈ ಹಾರ್ಡ್ವೇರ್ಗೆ ನಿರ್ದಿಷ್ಟ ಮೌಲ್ಯ ನೀಡಲಾಗುತ್ತದೆ. ಅದೇ ಸಮಯದಲ್ಲಿ ವಿಂಡೋಸ್ ಅಜೂರ್ ಬಳಸುವ ಮೂಲಕ ಅವರು ಕ್ಲೌಡ್ ಕಂಪ್ಯೂಟರ್ಗೆ ವರ್ಗಾವಣೆ ಆಗಬಹುದು. ಈ ವರ್ಗಾವಣೆಯಿಂದ ಸಣ್ಣ ಹಾಗೂ ಮಧ್ಯಮ ಉದ್ಯಮಗಳ ನಿರ್ವಹಣಾ ವೆಚ್ಚ ಕಡಿಮೆ ಆಗಲಿದೆ’ ಎಂದರು.

‘ದೇಶದಲ್ಲಿರುವ ಉದ್ಯಮಗಳ ಪೈಕಿ ಸಣ್ಣ ಹಾಗೂ ಮಧ್ಯಮ ಉದ್ಯಮ ಸಂಸ್ಥೆಗಳ ಸಂಖ್ಯೆ ಶೇ 40ರಷ್ಟು. ಆದರೆ, ಈ ಸಂಸ್ಥೆಗಳು ಮಾಹಿತಿ ತಂತ್ರಜ್ಞಾನದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತಿಲ್ಲ. ಈ ಸಂಸ್ಥೆಗಳು ಮಾಹಿತಿ ತಂತ್ರಜ್ಞಾನದ ಮೇಲೆ ಮಾಡುವ ಹೂಡಿಕೆಯೂ ಕಡಿಮೆ. ಈ ಹಿನ್ನೆಲೆಯಲ್ಲಿ ಸಂಸ್ಥೆ ಈ ಯೋಜನೆಯನ್ನು ಪ್ರಕಟಿಸಿದೆ’ ಎಂದರು.

‘ಸಂಸ್ಥೆಗಳು ಟೋಲ್ ಫ್ರೀ ಸಂಖ್ಯೆ 180030704660 ಮೂಲಕ ನೋಂದಾಯಿಸಿಕೊಳ್ಳಬೇಕು. ಬಳಿಕ ಮೈಕ್ರೊಸಾಫ್ಟ್ವೇರ್ನ ಅಧಿಕೃತ ಹಾರ್ಡ್ವೇರ್ ಪುನರ್ಬಳಕೆಯ ಪಾಲುದಾರರು ಕರೆ ಮಾಡಿದವರನ್ನು ಸಂಪರ್ಕಿಸುತ್ತಾರೆ ಹಾಗೂ ಹಾರ್ಡ್ ವೇರ್ನ ಮೌಲ್ಯವನ್ನು ವಿಶ್ಲೇಷಿಸುತ್ತಾರೆ. ಜೊತೆಗೆ ಸಂಸ್ಥೆಯಿಂದ ಹಳೆಯ ಹಾರ್ಡ್ವೇರ್ ಕೊಂಡೊಯ್ಯಲು ವ್ಯವಸ್ಥೆ ಮಾಡುತ್ತಾರೆ. ಗ್ರಾಹಕರು ವಿಂಡೋಸ್ ಅಜೂರ್ ಮೇಲೆ ಮಾಸಿಕ ಸಾಲ ಪಡೆದುಕೊಳ್ಳಲು ಈ ಮೌಲ್ಯವನ್ನು ಬಳಸಿಕೊಳ್ಳಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.