ಸೋಮವಾರ, ಜೂನ್ 21, 2021
28 °C

ಮೈಕ್ರೊಸಾಫ್ಟ್ ವಿರುದ್ಧದ ಕ್ರಿಮಿನಲ್ ಪ್ರಕರಣ ವಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಆಕ್ಷೇಪಾರ್ಹ ಚಿತ್ರ, ವಿಚಾರಗಳನ್ನು ಬಿತ್ತರಿಸುತ್ತಿದೆ ಎಂಬ ಆರೋಪದ ಮೇಲೆ ಮೈಕ್ರೊಸಾಫ್ಟ್ ಇಂಡಿಯಾದ ವಿರುದ್ಧ  ಕ್ರಿಮಿನಲ್ ಪ್ರಕ್ರಿಯೆಗೆ ಆದೇಶಿಸಿದ್ದ ಕೆಳ ನ್ಯಾಯಾಲಯದ ಆದೇಶವನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.ತಮ್ಮ ಕಕ್ಷಿದಾರರು ಸಾಫ್ಟ್‌ವೇರ್ ಅಭಿವೃದ್ಧಿ ಹಾಗೂ ಮಾರಾಟದಲ್ಲಿ ಮಾತ್ರ ತೊಡಗಿಕೊಂಡಿದ್ದಾರೆ. ವ್ಯಕ್ತಿಗಳಿಂದ, ವ್ಯಕ್ತಿಗೆ ಸಂಪರ್ಕ ಕಲ್ಪಿಸುವ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುತ್ತಿಲ್ಲ ಎಂಬ ಮೈಕ್ರೊಸಾಫ್ಟ್ ವಕೀಲರ ವಾದ ಆಲಿಸಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಕೇಟ್ ಈ ತೀರ್ಪು ನೀಡಿದರು.ಮೈಕ್ರೊಸಾಫ್ಟ್, ಫೇಸ್‌ಬುಕ್, ಗೂಗಲ್, ಯಾಹೂ, ಯುಟ್ಯೂಬ್ ಸೇರಿದಂತೆ 21 ವೆಬ್‌ಸೈಟ್‌ಗಳು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ವಿಚಾರ ಪ್ರಕಟಿಸಿವೆ ಎಂದು ವಿನಯ್ ರಾಯ್ ಎಂಬುವವರು ದೆಹಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ  ಮ್ಯಾಜಿಸ್ಟ್ರೇಟ್ ಕೋರ್ಟ್, ಮೈಕ್ರೊಸಾಫ್ಟ್ ಸೇರಿ ಇತರ 21 ಕಂಪೆನಿಗಳ ವಿರುದ್ಧ  ಕ್ರಿಮಿನಲ್  ಪ್ರಕ್ರಿಯೆಗೆ ಆದೇಶ ನೀಡಿತ್ತು.ಮುಂದೆ ಯಾವಾಗಲಾದರೂ ಮೈಕ್ರೋಸಾಫ್ಟ್ ವಿರುದ್ಧ ವಿಶ್ವಾಸಾರ್ಹ ಸಾಕ್ಷ್ಯಗಳು ಲಭಿಸಿದಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವ ಅವಕಾಶವನ್ನು ಹೈಕೋರ್ಟ್ ವಿನಯ್ ರಾಯ್ ಅವರಿಗೆ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.