ಚೀನಾದ ಬೀಜಿಂಗ್ನ ಒಲಿಂಪಿಕ್ಸ್ನಲ್ಲಿ ನಾಲ್ಕು ವರ್ಷಗಳ ಹಿಂದೆ ಈಜುಗೊಳದ ತಳದಿಂದ ಚಿನ್ನದ ಪದಕಗಳನ್ನು ಮೊಗೆಮೊಗೆದು ಕೊರಳಿಗೆ ಹಾಕಿಕೊಂಡ ಮೈಕೆಲ್ ಫೆಲ್ಪ್ಸ್ ಈಗ ಮೈಸೂರಿನತ್ತ ಚಿತ್ತ ಹರಿಸಿದ್ದಾರೆ!

ಹೌದು; ಈ ಬಿರು ಬಿಸಿಲಿನ ಕಾಲದಲ್ಲಿ ಈಜುಪ್ರಿಯರ ಮನಸ್ಸಿಗೆ ತಂಪನೆರೆಯುವ ಸುದ್ದಿ ಇದು. ಅಮೆರಿಕದ ಮೈಕೆಲ್ ಫೆಲ್ಪ್ಸ್ ಅವರ ಪ್ರತಿಷ್ಠಾನವು ಮೈಸೂರಿನ ಅಸೋಸಿಯೇಷನ್ ಆಫ್ ಇಂಟಿಗ್ರೇಟೆಡ್ ಮೈಸೂರು ಸ್ವಿಮ್ಮರ್ಸ್ ಸಂಸ್ಥೆಯು (ಏಮ್ಸ) ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ಇದರ ಮೂಲಕ ಇಲ್ಲಿಯ ಪ್ರತಿಭಾನ್ವಿತ ಈಜುಪಟುಗಳಿಗೆ ತರಬೇತಿ ಮತ್ತು ಆರ್ಥಿಕ ಬೆಂಬಲ ನೀಡುವ ಉದ್ದೇಶ ಫೆಲ್ಪ್ಸ್ ಪ್ರತಿಷ್ಠಾನಹೊಂದಿದೆ. ಅಂತರರಾಷ್ಟ್ರೀಯ ಈಜುಪಟುವೂ ಆಗಿರುವ ಏಮ್ಸ ಸಂಚಾಲಕ ಎಸ್. ಸುಂದರೇಶ್ ಈ ಯೋಜನೆಯನ್ನು ಮೈಸೂರಿಗೆ ತಂದಿದ್ದು, ಭಾರತದಲ್ಲಿಯೇ ಇದು ಮೊಟ್ಟಮೊದಲ ಕೇಂದ್ರವಾಗಲಿದೆ.

ವಿಶ್ವದ ಏಳು ರಾಷ್ಟ್ರಗಳಲ್ಲಿ ಮಾತ್ರ ಫೆಲ್ಪ್ಸ್ ಪ್ರತಿಷ್ಠಾನ ಈ ರೀತಿಯ ಒಪ್ಪಂದ ಮಾಡಿಕೊಂಡಿದ್ದು, ಅವುಗಳಲ್ಲಿ ಭಾರತವೂ ಒಂದು ಎನ್ನುವುದು ವಿಶೇಷ. ಈ ಯೋಜನೆ ಅಡಿಯಲ್ಲಿ ಪ್ರತಿಭಾನ್ವಿತರನ್ನು ಆಯ್ಕೆ ಮಾಡುವ ಮೊದಲ ಹಂತವಾಗಿ ಮಾರ್ಚ್ 30ರಿಂದ ಬೇಸಿಕ್ ತರಬೇತಿ ಶಿಬಿರವನ್ನು ಲಲಿತ್ ಮಹಲ್ ರಸ್ತೆಯ ಕಂಠೀರವ ನರಸಿಂಹರಾಜ ಸ್ಪೋರ್ಟ್ಸ್ ಕ್ಲಬ್ ಈಜುಗೊಳದಲ್ಲಿ ಆರಂಭಿಸಲಾಗಿದೆ.

ಒಪ್ಪಂದ ಏನು?: ಮೈಕೆಲ್ ಫೆಲ್ಪ್ಸ್ ಪ್ರತಿಷ್ಠಾನವು ಮಕ್ಕಳಲ್ಲಿ ಈಜು ಮತ್ತು ಆರೋಗ್ಯವರ್ಧನೆಯ ಅರಿವನ್ನು ಹೆಚ್ಚಿಸುವ ಉದ್ದೇಶದಿಂದ ಆರಂಭವಾದ ಸ್ವಯಂ ಸೇವಾ ಸಂಸ್ಥೆ. ಅಮೆರಿಕ ಕಿಡ್ಸ್ ಹೆಲ್ತ್.ಓಆರ್ಜಿ ಮತ್ತಿತರ ಕ್ಲಬ್ಗಳ ಬಾಲಕ, ಬಾಲಕಿಯರು ಮತ್ತು ಮೈಕೆಲ್ ಫೆಲ್ಪ್ಸ್ ಈಜು ಶಾಲೆಯ ಸಹಯೋಗದಲ್ಲಿ ನಡೆಯುತ್ತಿದೆ. ಈಜು ಆಸಕ್ತರ ಸುರಕ್ಷತೆಗೆ ಆದ್ಯತೆ ಕೊಡುವುದರ ಜೊತೆಗೆ ಅವರ ಜೀವನಶೈಲಿಯನ್ನು ಆರೋಗ್ಯಪೂರ್ಣವಾಗಿಸುವ ಉದ್ದೇಶ ಈ ಸಂಸ್ಥೆಯದ್ದು.

ಈಜುವಿನಲ್ಲಿಯೇ ದೊಡ್ಡ ಸಾಧನೆ ಮಾಡುವ ಗುರಿಯಿರುವ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ಈಜುಪಟುಗಳಿಗೆ ಧನಸಹಾಯ ನೀಡಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳಿಗೆ ಭಾಗವಹಿಸಲು ಕಳಿಸುವ ಕಾರ್ಯವನ್ನು ಮಾಡುತ್ತಿದೆ.

ಈ ಯೋಜನೆಯನ್ನು ಜಗತ್ತಿನ ಎಲ್ಲ ದೇಶಗಳಿಗೂ ವಿಸ್ತರಿಸುವತ್ತ ಸಂಸ್ಥೆ ಚಿತ್ತ ಹರಿಸಿದ್ದು, ಇದೀಗ ಮೈಸೂರು ಮೂಲಕ ಭಾರತಕ್ಕೆ ಕಾಲಿಟ್ಟಿದೆ. ಈ ಯೋಜನೆಯನ್ವಯ ಲೆವೆಲ್ ಫೀಲ್ಡ್ ಫಂಡ್ ಹೆಸರಿನಲ್ಲಿ ಒಂದು ಲಕ್ಷ ಡಾಲರ್ವರೆಗೆ ಅನುದಾನ ನೀಡಲು ಸಂಸ್ಥೆ ಸಿದ್ಧವಿದೆ.

ಮೈಸೂರು ವಿಶ್ವವಿದ್ಯಾಲಯದ ಈಜುಪಟುವಾಗಿದ್ದ ಸುಂದರೇಶ್, ಬಿಎಸ್ಸಿ, ಎಂಬಿಎ ಮತ್ತು ಎನ್ಐಎಸ್ ಪದವೀಧರರಾಗಿದ್ದಾರೆ. ಯುವಜನಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ಸಾಫ್ಟ್ವೇರ್ ಸಂಸ್ಥೆಗಳ ನೌಕರಿಗೆ ಗುಡ್ಬೈ ಹೇಳಿ, ಈಜು ತರಬೇತಿಗೆ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಸುಂದರೇಶ್ ಮೈಕೆಲ್ ಫೆಲ್ಪ್ಸ್ ಪ್ರತಿಷ್ಠಾನದ ಪೈಲೆಟ್ ಪ್ರೋಗಾಂ ಕೋಚ್ ಕೂಡ ಆಗಿದ್ದರು.

ಇದೇ ಸಂಪರ್ಕದ ಮೇಲೆ ಯೋಜನೆಯನ್ನು ಮೈಸೂರಿಗೆ ತರುವಲ್ಲಿ ಸಫಲರಾಗಿದ್ದಾರೆ. ಅವರ ನೇತೃತ್ವದಲ್ಲಿ ಇನ್ನೊಬ್ಬ ಈಜುಪಟು, ಇನ್ಫೋಸಿಸ್ ಉದ್ಯೋಗಿ ಸಂತೋಷ್ ಸಿಂಗ್ ಮತ್ತು ಮಹಿಳಾ ಈಜುಪಟು ಅಪೂರ್ವಾ ಶೇಖರ್ ಇಲ್ಲಿಯ ತರಬೇತಿಯ ಜವಾಬ್ದಾರಿ ವಹಿಸಲಿದ್ದಾರೆ.

2011ರಲ್ಲಿ ಅಥೆನ್ಸ್ನಲ್ಲಿ ನಡೆದ ವಿಶ್ವ ಬೇಸಿಗೆ ಕ್ರೀಡಾಕೂಟದಲ್ಲಿ ಮೂರು ಚಿನ್ನ, ಒಂದು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕ ಗಳಿಸಿದ್ದ ಭಾರತ ತಂಡಕ್ಕೆ ಸುಂದರೇಶ್ ಮುಖ್ಯ ಕೋಚ್ ಆಗಿದ್ದರು.

ವಿಶೇಷ ಅಸ್ಥೆ: ಮೈಕೆಲ್ ಫೆಲ್ಪ್ಸ್ ಪ್ರತಿಷ್ಠಾನದ ಈ ಯೋಜನೆಯಲ್ಲಿ ಒಂದು ನಿಬಂಧನೆ ಇದೆ. ಈ ಅನುದಾನ ಪಡೆಯುವ ಕೇಂದ್ರವು ಕಡ್ಡಾಯವಾಗಿ ಬುದ್ಧಿಮಾಂದ್ಯ ವಿಶೇಷ ಮಕ್ಕಳಿಗೆ ಈಜು ತರಬೇತಿ ನೀಡಬೇಕು. ಮೈಸೂರಿನಲ್ಲಿ ಅದಕ್ಕಾಗಿ 20 ವಿಶೇಷ ಮಕ್ಕಳಿಗೆ ತರಬೇತಿ ನೀಡಲು ಯೋಜಿಸಲಾಗಿದೆ.

ಹೈಪರ್ ಆ್ಯಕ್ಟಿವ್ ಎಂಬ ಮಾನಸಿಕ ಕಾಯಿಲೆಯಿಂದ ಬಾಲ್ಯದಲ್ಲಿ ಬಳಲಿದ್ದ ಮೈಕೆಲ್ ಫೆಲ್ಪ್ಸ್ನನ್ನು ಅವರ ಶಿಕ್ಷಕಿ ಶಾಲೆಯಿಂದ ಹೊರಹಾಕಿದ್ದರು. ಅವರ ತಾಯಿ ಅವರ ವಿಪರೀತ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಈಜು ತರಬೇತಿಗೆ ಹಾಕಿದ್ದರು. ಅದೇ ಮೈಕೆಲ್ ಮುಂದೆ `ಚಿನ್ನದ ಮೀನು~ ಆಗಿ ಪರಿವರ್ತನೆಯಾದರು. ಒಂದೇ ಒಲಿಂಪಿಕ್ಸ್ನಲ್ಲಿ ಎಂಟು ಚಿನ್ನದ ಪದಕ ಗೆದ್ದು ದಾಖಲೆ ನಿರ್ಮಿಸಿದ್ದಾರೆ.

ಮಾನಸಿಕ ತೊಂದರೆಗಳಿಂದ ಬಳಲುವ ಮಕ್ಕಳಿಗೆ ಈಜು ಒಂದು ಚಿಕಿತ್ಸೆಯೂ ಹೌದು. ಆದ್ದರಿಂದ ಅಂತಹ ಮಕ್ಕಳ ಪ್ರತಿಭೆಯನ್ನೂ ಬೆಳೆಸಲು ಫೆಲ್ಪ್ಸ್ ಫೌಂಡೇಷನ್ ಈ ಅವಕಾಶ ನೀಡುತ್ತಿದೆ. ಈ ಯೋಜನೆಯ ಫಲದಿಂದ ಮೈಸೂರಿನ ಈಜುಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಬೇಕು ಎಂಬುದು ಸುಂದರೇಶ್ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.