ಭಾನುವಾರ, ಆಗಸ್ಟ್ 9, 2020
21 °C
ಚಂದ ಪದ್ಯ

ಮೈಸೂರ್‌ಪಾಕು

-ಸಿ.ಎಂ. ಗೋವಿಂದರೆಡ್ಡಿ Updated:

ಅಕ್ಷರ ಗಾತ್ರ : | |

ಮೈಸೂರ್‌ಪಾಕು

ಅಯ್ಯಂಗಾರರ ಬೇಕರಿಯಲ್ಲಿ

ಘಮಘಮ ಮೈಸೂರ್‌ಪಾಕು

ನೋಡಿದ ಕೂಡಲೆ ಬಾಯಲಿ ನೀರು

ಪಾಕವ ತಿನ್ನಲೇಬೇಕು

ಕೇಸರಿ ಹಳದಿ ಮಿಶ್ರಿತ ಬಣ್ಣದ

ಪಾಕವು ನೋಡಲು ಚೆಂದ

ಪುಟಾಣಿ ಇಟ್ಟಿಗೆ ಜೋಡಿಸಿದಂತೆ

ಕಾಣುತ್ತದೆ ಬಲು ಅಂದ

ಮೈಸೂರ್‌ಪಾಕು ಇದ್ದಂಗೇನೆ

ಬೆಂಗ್ಳೂರ್‌ಪಾಕು ಯಾಕಿಲ್ಲ?

ಮೈಸೂರಲ್ಲದೆ ಎಲ್ಲೆಡೆಯಲ್ಲೂ

ಮೈಸೂರ್‌ಪಾಕು ಇದೆಯಲ್ಲ!

ಮದ್ದೂರಿನ ವಡೆ ಧಾರವಾಡ್ ಫೇಡ

ಹಾಗೆಯೇ ಮೈಸೂರ್‌ಪಾಕಾ?

ಮೈಸೂರ್‌ಪಾಕಿಗೆ ಹೆಸರ‌್ಹೇಗ್ಬಂತು?

ಉತ್ತರ ತಿಳ್ಕೋಬೇಕಾ?

ಮೈಸೂರ್‌ಪಾಕಿಗೂ ಮೈಸೂರ್ ನಾಡಿಗೂ

ಯಾವ ಸಂಬಂಧ ಇಲ್ಲ

ನಾಡಿನ ಎಲ್ಲ ಊರುಗಳಲ್ಲೂ

ಇರೋದು ಅಂತೂ ಸುಳ್ಳಲ್ಲ!

ಮೆಸ್ಸೂರ್ ಎಂಬುದು ಹಿಂದಿ ಭಾಷೆಯಲಿ

ತಿನ್ನುವ ಕಡಲೆಹಿಟ್ಟು

ಕಡಲೆಹಿಟ್ಟಿಗೆ ಸಕ್ಕರೆ ಪಾಕವ

ಬೆರೆಸಿದ್ದೇ ಅದು ಒಟ್ಟು!

ಮೆಸ್ಸೂರ್‌ಪಾಕವು ಆಡುಮಾತಿನಲಿ

ಮೈಸೂರ್‌ಪಾಕ್ ಆಗೋಯ್ತು

ನಮ್ಮೂರಲ್ಲೂ ನಿಮ್ಮೂರಲ್ಲೂ

ಹೀಗೆಯೇ ಹೆಸರಾಗ್ಬಿಡ್ತು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.