ನವದೆಹಲಿ: ಭಾರತದ ಕ್ರೀಡಾರಂಗದಲ್ಲಿ ಉದ್ದೀಪನ ಮದ್ದು ಸೇವನೆ ಪಿಡುಗು ಸಮಸ್ಯೆ ಮುಂದುವರಿದಿದೆ. 5000 ಅಥವಾ ಅದಕ್ಕಿಂತ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾದ ದೇಶಗಳ ಪೈಕಿ ಮದ್ದುಸೇವನೆ ಸಾಬೀತಾದ ಪ್ರಕರಣಗಳ ಸಂಖ್ಯೆ ಭಾರತದಲ್ಲೇ ಹೆಚ್ಚು ಇದೆ. ವಿಶ್ವ ಉದ್ದೀಪನ ಮದ್ದುಸೇವನೆ ತಡೆ ಘಟಕದ (ವಾಡಾ) 2024ರ ಪರೀಕ್ಷಾ ಅಂಕಿಸಂಖ್ಯೆಗಳ ವರದಿಯಲ್ಲಿ ಈ ವಿಷಯ ದೃಢಪಟ್ಟಿದೆ.

ವಾಡಾ ವರದಿಯ ಪ್ರಕಾರ, ಭಾರತದಲ್ಲಿ 2024ರಲ್ಲಿ ಉದ್ದೀಪನ ಮದ್ದುಸೇವನೆಗೆ ಸಂಬಂಧಿಸಿ 7113 ಮಂದಿಯ ಪರೀಕ್ಷೆಗಳನ್ನು (6576 ಮೂತ್ರ ಮಾದರಿ ಮತ್ತು 537 ರಕ್ತ ಮಾದರಿ) ನಡೆಸಲಾದೆ. ಇದರಲ್ಲಿ 260 ಮಂದಿ ಮದ್ದುಸೇವನೆ ಮಾಡಿರುವುದು ದೃಢಪಟ್ಟಿದೆ. ಪಾಸಿಟಿವಿಟಿ ದರ ಶೇ 3.6 ಆಗಿದ್ದು, ಇದು ಪ್ರಮುಖ ರಾಷ್ಟ್ರಗಳ ಪೈಕಿ ಅತಿ ಹೆಚ್ಚು ಎನಿಸಿದೆ.

2036ರ ಒಲಿಂಪಿಕ್ಸ್ ಆತಿಥ್ಯ ವಹಿಸಲು ಉತ್ಸುಕವಾಗಿರುವ ಭಾರತದ ಬಿಡ್ನ ಮೌಲ್ಯಮಾಪನ ನಡೆಯಬೇಕಾಗಿದ್ದು, ಉದ್ದೀಪನ ಮದ್ದುಸೇವನೆ ವಿಷಯದಲ್ಲಿ ಕಳಪೆ ದಾಖಲೆ ಕಳವಳಕ್ಕೆ ಕಾರಣವಾಗಿದೆ.

ಈ ಅಂಕಿಅಂಶಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಇದು ಕಳವಳ ಮೂಡಿಸುವಂತೆ ಕಾಣಬಹುದು. ಆದರೆ ಉದ್ದೀಪನ ಮದ್ದುಸೇವನೆ ಪಿಡುಗಿಗೆ ತಡೆ ಹಾಕಲು ಭಾರತ ಪ್ರಯತ್ನಗಳನ್ನು ತೀವ್ರಗೊಳಿಸಿರುವುದನ್ನೂ ಇದು ಸೂಚಿಸುತ್ತಿದೆ. ಪರೀಕ್ಷೆಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ ಮತ್ತು ಮದ್ದುಸೇವನೆ ಮಾಡುವವರನ್ನು ಪತ್ತೆ ಮಾಡಲು ಹೆಚ್ಚಿನ ಕ್ರಮಗಳನ್ನು ಕೈಗೊಂಡಿರುವುದರ ಫಲ ಇದು’ ಎಂದು ರಾಷ್ಟ್ರೀಯ ಉದ್ದೀಪನಮದ್ದು ಸೇವನೆ ತಡೆ ಘಟಕ (ನಾಡಾ) ಹೇಳಿದೆ.

2023ರ ಪರೀಕ್ಷಾ ಅಂಕಿಅಂಶಗಳಲ್ಲಿ ಪಾಸಿಟಿವಿಟಿ ದರ ಶೇ 3.8ರಷ್ಟಿತ್ತು. 5606 ಮಂದಿಯ ಪರೀಕ್ಷೆಯಲ್ಲಿ 213 ಮಂದಿ ಮದ್ದುಸೇವನೆ ಪರೀಕ್ಷೆ ಮಾಡಿದ್ದು ದೃಢಪಟ್ಟಿತ್ತು.

ಚೀನಾ 2024ರಲ್ಲಿ 24,214 ಪರೀಕ್ಷೆಗಳನ್ನು ನಡೆಸಿದ್ದು, ಪಾಸಿಟಿವಿಟಿ ದರ ಕೇವಲ ಶೇ 0.2ರಷ್ಟಿದೆ. ಅಮೆರಿಕದ ಉದ್ದೀಪನಮದ್ದು ಸೇವನೆ ತಡೆ ಘಟಕ ಕಡಿಮೆ ಪರೀಕ್ಷೆಗಳನ್ನು (6592) ನಡೆಸಿದ್ದು, ಸಿಕ್ಕಿಬಿದ್ದವರ ಪ್ರಮಾಣ ಶೇ 1.1ರಷ್ಟಿದೆ.

ಈ ಹಿಂದೆ ಉದ್ದೀಪನ ಮದ್ದುಸೇವನೆ ಪಿಡುಗು ನಿಭಾಯಿಸುವರಲ್ಲಿ ವಿಫಲವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಪಡೆದಿದ್ದ ರಷ್ಯಾ 10,514 ಪರೀಕ್ಷೆಗಳನ್ನು ನಡೆಸಿದ್ದು, ಪಾಸಿಟಿವಿಟಿ ದರ ಶೇ 0.7ರಷ್ಟು ಇದೆ. ಅಂದರೆ ಪರೀಕ್ಷೆಗೊಳಗಾದವರಲ್ಲಿ 76 ಮಂದಿ ಮಾತ್ರ ಮದ್ದುಸೇವನೆ ಮಾಡಿದ್ದು ದೃಢಪಟ್ಟಿದೆ.

ಪಾಕಿಸ್ತಾನ ಮತ್ತು ಮಂಗೋಲಿಯಾದಲ್ಲಿ ಪಾಸಿಟಿವಿಟಿ ದರ ಭಾರತಕ್ಕಿಂತ ಹೆಚ್ಚು ಇದೆ. ಆದರೆ ಅಲ್ಲಿ ನಡೆಸಲಾದ ಉದ್ದೀಪನ ಮದ್ದುಸೇವನೆ ಪರೀಕ್ಷೆಗಳ ಸಂಖ್ಯೆ ತೀರಾ ಕಡಿಮೆಯಿದೆ.

2025ರಲ್ಲಿ ‘ನಾಡಾ’ ಇದುವರೆಗೆ 7068 ಪರೀಕ್ಷೆಗಳನ್ನು ಕೈಗೊಂಡಿದ್ದು,110 ಮಂದಿ ಮಾತ್ರ ತಪ್ಪಿತಸ್ಥರೆನಿಸಿದ್ದು, ಪಾಸಿಟಿವಿಟಿ ದರ ಶೇ 1.5ರಷ್ಟು ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.