ಗಾಂಧೀಜಿ ಜಾಡಿನಲ್ಲಿ ನೌಖಾಲಿಗೊಂದು ಮರುಯಾತ್ರೆ
ಲೇ: ಆಗುಂಬೆ ಎಸ್. ನಟರಾಜ್
ಪ್ರ: ಹಂಸ ಪ್ರಕಾಶನ, ನಂ. 947, 3ನೇ ಮುಖ್ಯ ರಸ್ತೆ, ವಿಜಯನಗರ, ಬೆಂಗಳೂರು– 560040

ಕೋಮುಹಿಂಸೆಯಿಂದ ನಲುಗಿದ ನೌಖಾಲಿ, ಶಾಂತಿ ನೆಲೆಸಲು ಮಹಾತ್ಮ ಗಾಂಧೀಜಿ ಅಲ್ಲಿಗೆ ನೀಡಿದ ಭೇಟಿ–ಪ್ರಯತ್ನ ಇತಿಹಾಸದಲ್ಲಿ ದಾಖಲಾದ ಮಹತ್ವದ ಘಟನೆಯಾಗಿದೆ.

ಅಲ್ಲಿ ನಡೆದ ಕೋಮುದಂಗೆಗಳು ಅವರನ್ನು ಅಪಾರ ನೋವಿಗೆ ಈಡು ಮಾಡಿರುತ್ತವೆ. ಆ ದಂಗೆಗೆ ಗುರಿಯಾದ, ಬಲಿಯಾದ ಹಿಂದೂಗಳಿಗೆ ಗಾಂಧೀಜಿ ಶಾಂತಿ, ಸತ್ಯ, ತಾಳ್ಮೆ, ಅಹಿಂಸೆಗಳನ್ನು ಬೋಧಿಸುತ್ತಾರೆ.

ಈಗಿನ ಬಾಂಗ್ಲಾದೇಶದಲ್ಲಿ ಇರುವ, ಸ್ವಾತಂತ್ರ್ಯ ಪೂರ್ವದಲ್ಲಿ ಈ ಕಾರಣಕ್ಕಾಗಿ ಪ್ರಸಿದ್ಧವಾದ ನೌಖಾಲಿಗೆ ಕನ್ನಡದ ಲೇಖಕ ಆಗುಂಬೆ ಎಸ್. ನಟರಾಜ್ ಪ್ರವಾಸಿಗರಾಗಿ ಹೋಗಿ ಬಂದುದರ ಕಥನವೇ ಈ ಪುಸ್ತಕವಾಗಿದೆ.

ನಟರಾಜ್ ಅವರ ಉದ್ದೇಶ ನೌಖಾಲಿ ಹತ್ಯಾಕಾಂಡ ಜರುಗಿದ 68 ವರ್ಷಗಳ ಬಳಿಕ ಅಲ್ಲಿನ ಸ್ಥಿತಿಗತಿಗಳನ್ನು ಪರಿಚಯಿಸುವುದಾಗಿದೆ. ಅಲ್ಲಿನ ಸ್ಥಿತಿಗತಿಯನ್ನು ಮಾತ್ರವಲ್ಲ, ಸ್ವಾತಂತ್ರ್ಯ ಪೂರ್ವದ ಇತಿಹಾಸವನ್ನೂ ನಟರಾಜ್ ತಮ್ಮ ಪ್ರವಾಸಕಥನದ ಉದ್ದಕ್ಕೂ ನಿರೂಪಿಸುತ್ತಾರೆ.

ಗಾಂಧೀಜಿಯವರ ತತ್ವಗಳು, ಅವರ ಯಾತ್ರೆಗಳು, ಸತ್ಯಾಗ್ರಹ, ಅವರ ರಾಜಕೀಯ, ಧಾರ್ಮಿಕ ನಿಲುವುಗಳೂ ಇದರಲ್ಲಿ ಸೇರಿವೆ. ಈಗಿನ ಅವರ ಕಥನ ಒಂದು ನೆಪವಷ್ಟೆ. ಉದ್ದಕ್ಕೂ ಗಾಂಧೀಜಿಯ ನೌಖಾಲಿ ಯಾತ್ರೆಯ ಉಲ್ಲೇಖ, ಮತ್ತಿತರ ಐತಿಹಾಸಿಕ ಸಂಗತಿಗಳು ಇದರ ಜೊತೆಯಾಗಿಯೇ ಬರುತ್ತವೆ. ಇಷ್ಟು ವರ್ಷಗಳಾದರೂ ಧಾರ್ಮಿಕ ಹಿಂಸೆ ಕಡಿಮೆ ಆಗದಿರುವ, ಉಗ್ರವಾದವೇ ಮೊದಲಾಗಿರುವ ಈಗಿನ ಬಾಂಗ್ಲಾದೇಶ ಈ ಕಥನದಲ್ಲಿ ತೆರೆದುಕೊಳ್ಳುತ್ತ ಹೋಗುತ್ತದೆ.

ಎಲ್ಲ ಕಾಲಕ್ಕೂ, ಎಲ್ಲ ಹಿಂಸೆಗಳಿಗೂ ಮದ್ದಾಗಬಹುದಾದ ಗಾಂಧೀಜಿಯ ತತ್ವಗಳು ಅಲ್ಲಿ ಈಗ ಕಾಣಸಿಗುವುದಿಲ್ಲ. ಇದು ನಟರಾಜ್ ಅವರ ಕಥನ ಎನ್ನುವುದಕ್ಕಿಂತ ಗಾಂಧೀಜಿ ಅವರ ನೌಖಾಲಿ ಯಾತ್ರೆಯ ಮರುನಿರೂಪಣೆ ಎನ್ನುವುದು ಹೆಚ್ಚು ಸರಿಯಾದೀತು.

ಮೊಳಕೆಯೊಡೆಯದ ಬೀಜ (ಕವನಗಳು)
ಲೇ: ವಸು ಮಳಲಿ
ಪ್ರ: ಲಡಾಯಿ ಪ್ರಕಾಶನ, ನಂ. 21, ಪ್ರಸಾದ್ ಹಾಸ್ಟೇಲ್,
ಗದಗ– 582101

ಅಕಾಲಿಕವಾಗಿ ನಿಧನರಾದ ಲೇಖಕಿ ವಸು ಮಳಲಿ ಅವರ ಕವಿತೆಗಳ ಸಂಗ್ರಹವೊಂದು ಈಗ ಪ್ರಕಟವಾಗಿದೆ. ಸುಮಾರು ಇಪ್ಪತ್ತೈದು ವರ್ಷಗಳಿಂದ ಅವರು ಡೈರಿಯಲ್ಲಿ ಬರೆದಿಟ್ಟಿದ್ದ ಕವಿತೆಗಳನ್ನು ವಸು ಅವರು ಕುಟುಂಬದವರು ಒಂದೆಡೆ ಸಿಗುವಂತೆ ಮಾಡಿದ್ದಾರೆ. ಅವುಗಳಲ್ಲಿ ಕೆಲವು ಕವಿತೆಗಳು ಅಪೂರ್ಣವಾದವು, ತಲೆಬರಹ ಹೊಂದಿರದಂತಹವು.

ಈ ಸಂಕಲನಕ್ಕೆ ಅವರ ಕುಟುಂಬದವರು ಕೊಟ್ಟಿರುವ ಹೆಸರು ಸಹ ವಸು ಅವರ ಬದುಕು, ಕನಸು, ಆಸೆ, ಆಕಾಂಕ್ಷೆಗಳನ್ನೇ ಸೂಚಿಸುವಂತಿದೆ.

‘ರಾತ್ರಿಗಳೇ/ ನೀವು ಮಲಗಿ/ ಮಿಸುಕಾಡದೆ/ ಕತ್ತಲೊಳಗೆ ಹಾಗೆ ಹಾಗೆ/ ಮೌನವಾಗಿ’ ಎಂದು ತಮ್ಮ ಕಿರು ಕವಿತೆಯೊಂದರಲ್ಲಿ ವಸು ಹೇಳುತ್ತಾರೆ. ರಾತ್ರಿಗಳಿಗೂ ನಿದ್ದೆ ಮಾಡುವಂತೆ, ಮೌನವಾಗಿರುವಂತೆ ಕೇಳಿಕೊಳ್ಳುವ ಕವಿ ಬಯಸುವ ಏಕಾಂತ ಇಲ್ಲಿದೆ. ಇಲ್ಲಿ ಕವಿತೆಗಳು ಅಂಥ ಕವಿಯ ಏಕಾಂತದ, ಮೌನದ ಫಲಗಳಾಗಿವೆ.

ಕವಿ ಒಳಗೊಳ್ಳಲು, ಹಿಡಿಯಲು ಪ್ರಯತ್ನಿಸಿರುವ ಜಗತ್ತು, ಬದುಕು ದೊಡ್ಡದಾಗಿಯೇ ಇದೆ. ಅವು ಇಲ್ಲಿನ ಕವಿತೆಗಳಲ್ಲಿ ಇರುವುದನ್ನು ಓದುಗರು ಮನಗಾಣಬಹುದು. ದೈನಿಕಕ್ಕೆ ಸಂಬಂಧಿಸಿದ, ನಾವೆಲ್ಲ ನೋಡಿ ಮರೆತಿರಬಹುದಾದ ಸೂಕ್ಷ್ಮವಾದ ಸಂಗತಿ, ಭಾವನೆಗಳನ್ನು ಅವರು ಕವಿತೆಯಾಗಿಸುತ್ತಾರೆ.

ಅಲ್ಲಿ ಅವರದೇ ಮೆಲು ದನಿಯೊಂದು ಕೇಳಿಸುತ್ತದೆ. ಇಲ್ಲಿನ 60ಕ್ಕೂ ಹೆಚ್ಚು ಕವಿತೆಗಳು ವಸು ಮುಂದೆ ಬರೆಯಬಹುದಾಗಿದ್ದ ಉತ್ತಮ ಕಾವ್ಯದ ದಿಕ್ಸೂಚಿಗಳಾಗಿವೆ.

ನೊಬೆಲ್ ಸಾಹಿತಿಗಳು
ಲೇ: ಎಚ್.ಎಸ್. ಉಮೇಶ್
ಪ್ರ: ವಿಸ್ಮಯ ಪ್ರಕಾಶನ, ‘ಮೌನ’, ನಂ. 366, ನವಿಲು ರಸ್ತೆ, ಕುವೆಂಪು ನಗರ, ಮೈಸೂರು– 570023

ನೊಬೆಲ್ ಪ್ರಶಸ್ತಿಗೆ ಇರುವ ಮಹತ್ವ ಎಲ್ಲರಿಗೂ ಗೊತ್ತಿದೆ. ಇಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಸಾಹಿತಿ–ಸಾಹಿತ್ಯದ ವಿವರಗಳನ್ನು ಸಂಕ್ಷಿಪ್ತವಾಗಿ ಕನ್ನಡ ಓದುಗರಿಗೆ ಕೊಡಲು ಎಚ್.ಎಸ್. ಉಮೇಶ್ ಇಲ್ಲಿ ಪ್ರಯತ್ನಿಸಿದ್ದಾರೆ.

1901ರಲ್ಲಿ ಸಾಹಿತ್ಯಕ್ಕಾಗಿನ ಮೊದಲ ನೊಬೆಲ್ ಪ್ರಶಸ್ತಿ ಪಡೆದ ಫ್ರೆಂಚ್ ಕವಿ ಸಲ್ಲಿ ಪ್ರುಧೋಮ್ನಿಂದ ಹಿಡಿದು 2015ರ ರಷ್ಯದ ಸ್ವೆಟ್ಲಾನ್ ಆಲೆಕ್ಸೆವಿಚ್ವರೆಗಿನ 112 ಲೇಖಕರ ಬಗ್ಗೆ ಉಮೇಶ್ ಕೊಟ್ಟಿದ್ದಾರೆ. ಇದರಿಂದಾಗಿ ಆ ಲೇಖಕರ ಬದುಕು– ಸಾಹಿತ್ಯದ ಬಗ್ಗೆ ಒಂದಷ್ಟು ಪ್ರಾಥಮಿಕ ವಿವರಗಳು ಓದುಗರಿಗೆ ಒಂದೆಡೆ ಸಿಗುವಂತಾಗಿದೆ. ಜೊತೆಗೆ ಅವರ ಸಾಹಿತ್ಯವನ್ನು ಓದಲು ಇದು ಪ್ರೇರಣೆ ನೀಡುವಂತಿದೆ.

ಲೇಖಕರು ಇಲ್ಲಿನ ಸಾಹಿತಿಗಳ ಸಾಹಿತ್ಯದ ಸಮಗ್ರ ಹಾಗೂ ಸ್ಥೂಲ ನೋಟವನ್ನು ಕೊಡಲು ಪ್ರಯತ್ನಿದ್ದಾರೆ. ಆ ಸಾಹಿತಿಗಳ ಸಾಹಿತ್ಯದ ಕುರಿತ ಅಭಿಪ್ರಾಯಗಳು, ವಿಶಿಷ್ಟ ಗುಣ, ರಾಜಕೀಯ ನಿಲುವು ಅವರ ಕುರಿತ ಇಲ್ಲಿನ ಬರವಣಿಗೆಯಲ್ಲಿದೆ.

ಸಾಧ್ಯವಿದ್ದ ಕಡೆ ಆ ಲೇಖಕರ ಬರಹಗಳು ಕನ್ನಡಕ್ಕೆ ಅನುವಾದವಾಗಿರುವುದರ ಕಡೆಗೂ ಅವರು ಗಮನ ಸೆಳೆದಿದ್ದಾರೆ. ಅಸಲು ಸಾಹಿತ್ಯ ಬಗ್ಗೆ ಇರುವ ಬದ್ಧತೆ, ಪ್ರೀತಿ, ಶ್ರಮದಿಂದ ರೂಪುಗೊಂಡಿರುವ ಈ ಪುಸ್ತಕ ಜಾಗತಿಕ ಸಾಹಿತ್ಯದ ಬಗ್ಗೆ ಇರುವ ಅರಿವನ್ನು ವಿಸ್ತರಿಸಲು ನೆರವಾಗುವಂತಿದೆ.

ಇದಲ್ಲದೇ ಲೇಖಕರು ತಮ್ಮ ಮುನ್ನುಡಿಯಲ್ಲಿ ಈ ಪ್ರಶಸ್ತಿಗೆ ಇರುವ ಮಿತಿ, ರಾಜಕೀಯ, ಲಾಬಿ ಮತ್ತಿತರ ಸಾಹಿತ್ಯೇತರ ಕಾರಣಗಳನ್ನು ಗುರುತಿಸಿದ್ದಾರೆ. ಸಾಹಿತ್ಯದ ಬಗೆಗಿನ ಅರ್ಥಪೂರ್ಣವಾದ ಆರೋಗ್ಯಕರ ನಿಲುವು, ಪ್ರಯತ್ನ ಇದರ ಹಿಂದಿರುವುದನ್ನು ಇದನ್ನು ಓದಿದ ಎಲ್ಲರೂ ಗುರುತಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.