ಮಂಗಳವಾರ, ಜೂನ್ 15, 2021
22 °C

ಮೊದಲ ಬಾರಿಗೆ ‘ನೋಟಾ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್‌): ಮುಂಬ­ರುವ ಲೋಕಸಭಾ ಚುನಾವಣೆ­ಯಲ್ಲಿ ಇದೇ ಮೊದಲ ಬಾರಿಗೆ ಮತ­ದಾರರಿಗೆ ‘ನನ್‌ ಆಫ್ ದಿ ಎಬೊವ್‌’ (ನೋಟಾ) ವ್ಯವಸ್ಥೆಯನ್ನು ಚುನಾವಣಾ ಆಯೋಗ ಒದಗಿಸಲಿದೆ.



ಇಡೀ ಮತದಾನದ ಪ್ರಕ್ರಿಯೆ ವಿದ್ಯುನ್ಮಾನ ಮತಯಂತ್ರ (ಎವಿಎಂ) ಮೂಲಕ ನಡೆಯಲಿದ್ದು, ಇದೇ ಮೊದಲ ಬಾರಿಗೆ ದೇಶದಲ್ಲಿ ಮತದಾರ­ರಿಗೆ ಮತಯಂತ್ರದಲ್ಲಿ ‘ನೋಟಾ’ (ಯಾವುದೇ ಅಭ್ಯರ್ಥಿ­ಯನ್ನು ಆಯ್ಕೆ ಮಾಡದಿರುವುದು) ವ್ಯವಸ್ಥೆ ಒದಗಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್‌ ಬುಧವಾರ ತಿಳಿಸಿದರು.



‘ನೋಟಾ’ ಬಳಕೆ ಕುರಿತು ಅಗತ್ಯ ಸೂಚನೆಗಳನ್ನು ನೀಡಲಾಗುವುದು. ಈ ನೂತನ ವ್ಯವಸ್ಥೆಯನ್ನು ಕಳೆದ ನವೆಂ­ಬರ್‌­–­ಡಿಸೆಂಬರ್ ತಿಂಗಳಲ್ಲಿ ಐದು ರಾಜ್ಯ­ಗಳಲ್ಲಿ ನಡೆದ ವಿಧಾನ­ಸಭಾ ಚುನಾ­ವಣೆಯಲ್ಲಿ  ಬಳಸಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.



ವಿಶೇಷ ಚುನಾವಣಾ ವೀಕ್ಷಕರು: ಮುಂಬರುವ ಲೋಕಸಭಾ ಚುನಾ­ವಣೆ ಸಂದರ್ಭ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ವಿಶೇಷ ಕೇಂದ್ರ ವೀಕ್ಷಕರನ್ನು ಕಳುಹಿಸಲಿದೆ. ಕ್ಷೇತ್ರ ಮಟ್ಟದಲ್ಲಿ ಚುನಾವಣಾ ವ್ಯವಸ್ಥೆಯ ಸಮರ್ಪಕ ನಿರ್ವಹಣೆಯ ಹೊಣೆಯನ್ನು ಈ ವೀಕ್ಷಕರು ಹೊರಲಿದ್ದಾರೆ.



‘ಕಾಸಿಗಾಗಿ ಸುದ್ದಿ’ಯಂತಹ ಮಾಧ್ಯಮ­ಗಳಿಗೆ ಸಂಬಂಧಿಸಿದ ವಿಷಯ, ಮತದಾನದ ಪ್ರಮಾಣ, ಚುನಾವಣಾ ಪ್ರಕ್ರಿಯೆಯಲ್ಲಿ ಮತ­ದಾರರ ಪಾಲ್ಗೊಳ್ಳುವಿಕೆಯ ವ್ಯವಸ್ಥೆ­ಯನ್ನೂ ವೀಕ್ಷಕರು ಪರಿಶೀಲಿಸುವರು ಎಂದು ತಿಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.