ಗುರುವಾರ , ಫೆಬ್ರವರಿ 25, 2021
29 °C

ಮೊದಲ ಬಾರಿ ವಿದೇಶಿ ಯೋಧರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊದಲ ಬಾರಿ ವಿದೇಶಿ ಯೋಧರು

ನವದೆಹಲಿ (ಪಿಟಿಐ): ಗಣರಾಜ್ಯೋತ್ಸವ ಪಥಸಂಚಲನದ ಭಾಗವಾಗಿ ರಾಜಪಥದಲ್ಲಿ ಹೆಜ್ಜೆ ಹಾಕುವ ಮೂಲಕ ಫ್ರಾನ್ಸ್‌ನ ಸೈನಿಕರು ಇತಿಹಾಸ ಸೃಷ್ಟಿಸಿದ್ದಾರೆ. ಇದೇ ಮೊದಲ ಬಾರಿ ವಿದೇಶದ ಸೇನಾ ತುಕಡಿಯೊಂದು ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಿದೆ.ಫ್ರಾನ್ಸ್‌ ಸೇನೆಯ 35ನೇ ಕಾಲಾಳು ದಳದ 76 ಯೋಧರು ಲೆ. ಕ. ಪಾಲ್‌ ಬುರಿ ನೇತೃತ್ವದಲ್ಲಿ ಪಥ ಸಂಚಲನ ನಡೆಸಿದರು.

ಫ್ರಾನ್ಸ್‌ ಸೇನೆಯ ಕಾಲಾಳು ಸಂಗೀತ ದಳದ 48 ಸದಸ್ಯರು ಎರಡು ರಾಗಗಳನ್ನು ನುಡಿಸಿದಾಗ ಸಭಿಕರಿಂದ ಭಾರಿ ಕರತಾಡನದ ಮೆಚ್ಚುಗೆ ವ್ಯಕ್ತವಾಯಿತು.ಗಣರಾಜ್ಯೋತ್ಸವ ಸಂಭ್ರಮ ಮತ್ತು ಪಥ ಸಂಚಲನದಲ್ಲಿ ಭಾಗವಹಿಸುವುದು ತಮಗೆ ಮತ್ತು ತಮ್ಮ ತುಕಡಿಗೆ ದೊಡ್ಡ ಗೌರವ ಎಂದು ನಂತರ ಮಾತನಾಡಿದ ಬುರಿ ಹೇಳಿದರು.18ನೇ ಶತಮಾನದ ನಂಟು: ಪಥ ಸಂಚಲನದಲ್ಲಿ ಭಾಗವಹಿಸಿದ್ದ ಫ್ರಾನ್ಸ್‌ನ ಪದಾತಿ ದಳಕ್ಕೆ 18ನೇ ಶತಮಾನದಲ್ಲಿಯೇ ಭಾರತದೊಂದಿಗೆ ನಂಟು ಇತ್ತು. ಈ ದಳ ಹೈದರಾಲಿಯ ಜತೆ ಸೇರಿ ಬ್ರಿಟಿಷರ ವಿರುದ್ಧ ಹೋರಾಡಿತ್ತು.‘35 ಪದಾತಿ ದಳ’ ಫ್ರಾನ್ಸ್‌ನ ಅತ್ಯಂತ ಹಳೆಯ ಸೇನಾ ದಳಗಳಲ್ಲಿ ಒಂದಾಗಿದ್ದು, 1604ರಲ್ಲಿ ಆರಂಭವಾಗಿದೆ.  ಈ ದಳದ ಒಂದು ದೊಡ್ಡ ತುಕಡಿ ಮೂರು ವರ್ಷಗಳ ಕಾಲ ಭಾರತದಲ್ಲಿ  ಇತ್ತು. ಭಾರತದಲ್ಲಿದ್ದ ಫ್ರೆಂಚ್‌ ವಸಾಹತುಗಳಿಗೆ ರಕ್ಷಣೆ ಒದಗಿಸಲು ಅಡ್ಮಿರಲ್ ಬೈಲಿಫ್‌ ನೇತೃತ್ವದಲ್ಲಿ ಈ ತುಕಡಿಯನ್ನು ನಿಯೋಜಿಸಲಾಗಿತ್ತು. ಹೈದರಾಲಿಯ ಸೇನೆಯ ಜತೆ ಸೇರಿ ಈ ತುಕಡಿಯು ಕಡಲೂರ್‌ ಪ್ರದೇಶವನ್ನು ವಶಕ್ಕೆ ಪಡೆದಿತ್ತು. ಅದಕ್ಕೂ ಹಿಂದೆ ಈ ತುಕಡಿಯು ಶ್ರೀಲಂಕಾದ ಟ್ರಿಂಕಾಮಲಿಯನ್ನೂ ವಶಕ್ಕೆ ಪಡೆದಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.