ಶನಿವಾರ, ಮೇ 15, 2021
26 °C

ಮೊಬೈಲ್ ಚಂದಾದಾರರ ಸಂಖ್ಯೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಬೈಲ್ ಚಂದಾದಾರರ ಸಂಖ್ಯೆ ಹೆಚ್ಚಳ

ದೇಶದ ಮೊಬೈಲ್ ಸಂಪರ್ಕ ಜಾಲಕ್ಕೆ ಜುಲೈ ತಿಂಗಳಲ್ಲಿ 6.67 ದಶಲಕ್ಷ ಜನರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಆ ಮೂಲಕ ದೇಶದ ಒಟ್ಟು  ದೂರವಾಣಿ ಚಂದಾದಾರರ ಸಂಖ್ಯೆ 892 ದಶಲಕ್ಷಕ್ಕೆ ಏರಿದೆ.ಗ್ರಾಮೀಣ ಭಾಗದಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ಮೊಬೈಲ್ ಬಳಕೆದಾರರ ಸಂಖ್ಯೆ, ಅಗ್ಗದ ದರದ ಹ್ಯಾಂಡ್‌ಸೆಟ್‌ಗಳು ಮತ್ತು ಮೌಲ್ಯವರ್ಧಿತ ಕೊಡುಗೆಗಳ ಚಂದಾದಾರ ಸಂಖ್ಯೆ ಹೆಚ್ಚಲು ಮುಖ್ಯ ಕಾರಣ. ದೂರವಾಣಿ ಸಾಂದ್ರತೆಯೂ ಈ ಅವಧಿಯಲ್ಲಿ ಶೇ 74.44ರಷ್ಟಾಗಿದೆ ಎಂದು ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ `ಟ್ರಾಯ್~ ಹೇಳಿದೆ.ಕಳೆದ ತಿಂಗಳು 34.29 ದಶಲಕ್ಷದಷ್ಟಿದ್ದ ನಿಸ್ತಂತು ದೂರವಾಣಿ ಚಂದಾದಾರರ ಸಂಖ್ಯೆ ಜುಲೈ ತಿಂಗಳಲ್ಲಿ ಅಲ್ಪ ಇಳಿಕೆ ಕಂಡಿದ್ದು, 34.18 ದಶಲಕ್ಷದಷ್ಟಾಗಿದೆ. ಆದರೆ, ಈ ಅವಧಿಯಲ್ಲಿ ಬ್ರಾಡ್‌ಬ್ಯಾಂಡ್ ಚಂದಾದಾರರ ಸಂಖ್ಯೆ 12.32 ದಶಲಕ್ಷದಷ್ಟಾಗಿದೆ.ಸುಮಾರು 15 ದಶಲಕ್ಷ ಗ್ರಾಹಕರು ಈ ಅವಧಿಯಲ್ಲಿ ತಮ್ಮ ಸೇವಾ ಸಂಸ್ಥೆ ಬದಲಿಸಲು ಮನವಿ ಸಲ್ಲಿಸಿದ್ದಾರೆ. ಜುಲೈ ತಿಂಗಳಲ್ಲಿ ಗ್ರಾಹಕರ ಕ್ಷೇತ್ರ ದತ್ತಾಂಶ (ವಿಎಲ್‌ಆರ್) ಆಧರಿಸಿದ ಸಕ್ರಿಯ ಮೊಬೈಲ್ ಚಂದಾದಾರರ ಸಂಖ್ಯೆ 601 ದಶಲಕ್ಷದಷ್ಟಿದೆ. ಜುಲೈ ತಿಂಗಳಲ್ಲಿ ರಿಲಯನ್ಸ್ ಕಂಪೆನಿ 1.52 ದಶಲಕ್ಷ ಗ್ರಾಹಕರನ್ನು ಹೊಸದಾಗಿ ತನ್ನ ಸಂಪರ್ಕ ಜಾಲಕ್ಕೆ ಸೇರಿಸಿಕೊಂಡಿದ್ದು, ಒಟ್ಟು ಚಂದಾದಾರರ ಸಂಖ್ಯೆ 144 ದಶಲಕ್ಷಕ್ಕೆ ಏರಿಕೆಯಾಗಿದೆ. ಭಾರ್ತಿ ಏರ್‌ಟೆಲ್ 1.51 ಮತ್ತು ವೊಡಾಫೋನ್ 1.49 ದಶಲಕ್ಷ  ಚಂದಾದಾರರನ್ನು ಹೊಸದಾಗಿ ಸೇರ್ಪಡೆ ಮಾಡಿಕೊಂಡಿವೆ.  ಸರ್ಕಾರಿ ಸ್ವಾಮ್ಯದ `ಬಿಎಸ್‌ಎನ್~ ಚಂದಾದಾರರ ಸಂಖ್ಯೆ ಜುಲೈ ತಿಂಗಳಲ್ಲಿ 95.14 ದಶಲಕ್ಷ ಏರಿದೆ. ಎಂಟಿಎನ್‌ಎಲ್‌ಗ್ರಾಹಕರ ಸಂಖ್ಯೆ 25,578ರಷ್ಟು ಹೆಚ್ಚಿದೆ. ಜೂನ್ ತಿಂಗಳಲ್ಲಿ ಎಂಟಿಎನ್‌ಎಲ್ 2,340 ಚಂದಾದಾರರನ್ನು ಕಳೆದುಕೊಂಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.