ಮಂಗಳವಾರ, ಏಪ್ರಿಲ್ 13, 2021
23 °C

ಮೋಡಿ ಮಾಡಿದ ಆಮ್ರಪಾಲಿ ವಿನ್ಯಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಭರಣ ವಿನ್ಯಾಸ ಕ್ಷೇತ್ರದಲ್ಲಿ ಭಾರತೀಯ ಪರಂಪರೆ ಮತ್ತು ನೆಲದ ಸೊಗಡನ್ನು ಪರಿಚಯಿಸುವಲ್ಲಿ ಆಭರಣ ಬ್ರಾಂಡ್‌ಗಳು ಸದಾ ಮುಂಚೂಣಿಯಲ್ಲಿ ನಿಲ್ಲುತ್ತವೆ. ತರರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ವಿನ್ಯಾಸಗಳಿಗೆ ಹೆಸರಾಗಿರುವ ಆಮ್ರಪಾಲಿ ಈ ಬಾರಿ ಅಪರೂಪದ ಒಡವೆಗಳನ್ನು ಗ್ರಾಹಕರ ಮುಂದಿರಿಸಿದೆ.ಭಾರತದ ಆಭರಣ ವಿನ್ಯಾಸ ಕ್ಷೇತ್ರದ ದಿಗ್ಗಜರ ಸಾಲಿನಲ್ಲಿ ನಿಲ್ಲುವ ಮನೀಷ್ ಅರೋರಾ ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಪ್ಯಾರಿಸ್ ಫ್ಯಾಷನ್ ಸಪ್ತಾಹದಲ್ಲಿ ಪ್ರದರ್ಶಿಸಿದ ಸಂಗ್ರಹವಿದು. ಗ್ರಾಫಿಕ್ಸ್‌ನಲ್ಲಿ ಮೂಡಿಸಿದ ಅಚ್ಚು ಆಧುನಿಕ ತಂತ್ರಜ್ಞಾನದ ಕುಲುಮೆಯಲ್ಲಿ ಒಡವೆಯ ರೂಪ ಪಡೆದಿದ್ದು ಅವುಗಳಿಗೆ ಕೈಯಲ್ಲೇ ವಿವಿಧ ಬಣ್ಣಗಳಲ್ಲಿ ಕುಸುರಿಯಂತಹ ಚಿತ್ತಾರ ಬಿಡಿಸಲಾಗಿದೆ.ಈ ಸಂಗ್ರಹದ ಹೆಸರು `ಇಂಡಿಯಾ ಎನ್‌ಚಾಂಟೆಡ್~ ಎಂದು. ಇಂತಹ ಅಪರೂಪದ ವಿನ್ಯಾಸಗಳನ್ನು ಕಂಡು ಭಾರತೀಯರೂ ಮಂತ್ರಮುಗ್ಧರಾದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಸಂಗ್ರಹ ಗ್ರಾಹಕರನ್ನು ಮೋಡಿ ಮಾಡುವುದು ಖಂಡಿತ.ಉತ್ತಮ ದರ್ಜೆಯ ನವರತ್ನಗಳನ್ನು ಇಲ್ಲಿ ಬಳಸಲಾಗಿದ್ದು, ನಸುಗುಲಾಬಿ, ತಿಳಿ ಹಸಿರುವ ಬಣ್ಣದ ರತ್ನಗಳು, ಉನ್ನತ ಗುಣಮಟ್ಟದ ಮುತ್ತುಗಳಿಂದ ಇನ್ನಷ್ಟು ವಿಲಾಸಿ ನೋಟವನ್ನು ಪಡೆದಿವೆ. ವಿಶ್ವದಲ್ಲೇ ಮುಂಚೂಣಿ ವಿನ್ಯಾಸಕರ ಸಾಲಿನಲ್ಲಿ ನಿಲ್ಲುವ ಮನೀಷ್ ಅರೋರಾ ಅವರ ವಿನ್ಯಾಸ ಎನ್ನುವುದು ಈ ಸಂಗ್ರಹದ ಮತ್ತೊಂದು ಹೆಗ್ಗಳಿಕೆ. ಅಂದಹಾಗೆ, ಈ ಸಂಗ್ರಹ ಅನಿಲ್  ಕುಂಬ್ಳೆ ವೃತ್ತದ ಬಳಿಯಿರುವ ಆಮ್ರಪಾಲಿ ಮಳಿಗೆಯಲ್ಲೂ ಲಭ್ಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.