ಗುರುವಾರ , ಮೇ 6, 2021
22 °C
ರಾಹುಲ್‌ಗಾಂಧಿ ಪ್ರಧಾನಿ ಆಗಿಯೇ ಆಗ್ತಾರೆ: ವಿಶ್ವಾಸ

ಮೋದಿಯಿಂದಲೇ ಬಿಜೆಪಿ ಪತನ:ಮೊಯಿಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋದಿಯಿಂದಲೇ ಬಿಜೆಪಿ ಪತನ:ಮೊಯಿಲಿ

ಹೆಬ್ರಿ : ಕಾಂಗ್ರೆಸ್‌ಗೆ ಬಡವರ ಸೇವೆ ಮಾಡುವ ಮನಸ್ಸು ಹೃದಯದಿಂದ ಬರುತ್ತದೆ ಅಧಿಕಾರ ಮುಖ್ಯವಲ್ಲ. ನಮಗೆ ಕಾಂಗ್ರೆಸಿಗರು ನಾವು ತ್ಯಾಗಿ ಗಳಾದರೆ ಬಿಜೆಪಿಗರು ಬೋಗಿಗಳು ಅವರಿಗೆ ಜನರನ್ನು ಲೂಟಿಮಾಡುವುದೆ ಕಾಯಕ. ಇದನ್ನೆಲ್ಲ  ಜನತೆ ಕಂಡು ಕಾಂಗ್ರೆಸಿಗೆ ಮತ ನೀಡುತ್ತಾರೆ ಬಿಜೆ ಪಿಯ ಕೃತಕ ಅಲೆ ಮಾಯವಾಗಿ ರಾಹುಲ್ ಗಾಂಧಿ ಪ್ರಧಾನಿಯಾಗಿಯೇ ಆಗುತ್ತಾರೆ ಎಂದು ಕೇಂದ್ರ ಸಚಿವ ಡಾ. ಎಂ.ವೀರಪ್ಪ ಮೊಯಿಲಿ ಹೇಳಿದರು.ಅವರು ಹೆಬ್ರಿಯ ಬಸ್ ನಿಲ್ದಾಣದಲ್ಲಿ ಮಂಗಳವಾರ ಉಡುಪಿ ಚಿಕ್ಕಮಗ ಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಪರ ವಾಗಿ ಮತಯಾಚಿಸಿ ಮಾತನಾ ಡಿದರು.ಬಿಜೆಪಿ ರಾಜ್ಯದಲ್ಲಿ 8 ವರ್ಷದಲ್ಲಿ ಜನರಿಗೆ ನರಕಯಾತನೆ ಆಡಳಿತ ನೀಡಿದೆ. ಈಗ ರಾಜ್ಯದಲ್ಲಿ ಶುದ್ಧ ಹಸ್ತ ಮಂತ್ರಿಗಳೊಂದಿಗೆ ಒಳ್ಳೆ ಮನಸ್ಸಿನ ಬಡವರ ಸೇವೆ ಮಾಡುವ ತುಡಿತದ ಸಿದ್ಧರಾಮಯ್ಯ ಮುಖ್ಯಂತ್ರಿಯಾಗಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನಪರ ಕೆಲಸಗಳ ಮೂಲಕ ಜನ ಕಾಂಗ್ರೆಸನ್ನು ಬೆಂಬಲಿಸಿ ಕೃತಕವಾಗಿ ಸೃಷ್ಟಿಸಿದ ಮೋದಿ ಅಲೆಯು ಮಾಯವಾಗಿ ಬಿಜೆಪಿಯೇ ಮೋದಿಯಿಂದ ಪತನವಾಗಲಿದೆ ಎಂದು ಮೊಯಿಲಿ ಹೇಳಿದರು.ಮೋದಿ ಮತ್ತು ಹುಲಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್ ಹುಲಿ ಯೋಜನೆ ಬರುತ್ತದೆ ಎಂದು ಜನರನ್ನು ದಾರಿ ತಪ್ಪಿಸಿದರು ಈಗ ಮೋದಿಯೊಂದಿಗೆ ದೊಡ್ಡ ಹುಲಿಯನ್ನೇ ತಂದು ನಿಲ್ಲಿಸಿದ್ದಾರೆ. ಹಿಂದುತ್ವ ಗೋರಕ್ಷಣೆ ಅಂತೆಲ್ಲ ಮಾತಡುತ್ತಾರೆ ಈಗ ಗೋಭಕ್ಷಕ ಹುಲಿಯನ್ನೇ ಬಿಜೆಪಿಯವರು ಬಿಟ್ಟಿದ್ದಾರೆ ಎಂದು  ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.ಜಾತಿ ಮತ ಭೇದ ಮರೆತು ನಾವೇಲ್ಲ ಒಂದೇ ಎಂದು ಸಾರಿದ ಮಹಾಮಾನವತ ವಾದಿ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿಯವರಿಗೆ ನರಮೇಧ ಮಾಡಿದ ಮೋದಿಯನ್ನು ಹೊಲಿಕೆ ಮಾಡಿ ಬಿಜೆಪಿಯವರು ರಾಜಕೀಯ ಮಾಡುವುದು ಅತ್ಯಂತ ಖೇದಕರ ಇದು ಬಿಜೆಪಿಯವರ ಕೀಳುಮಟ್ಟದ ಮನಸ್ಥಿಯನ್ನು ತೊರಿಸುತ್ತದೆ ಎಂದು ಸಚಿವ ವಿನಯ ಕುಮಾರ್ ಸೊರಕೆ ಬೇಸರ ವ್ಯಕ್ತಪಡಿಸಿದರು.ಕೆಪಿಸಿಸಿ ಸದಸ್ಯ ಗೋಪಾಲ ಭಂಡಾರಿ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಹೆಬ್ರಿ ಪ್ರಸನ್ನ ಬಲ್ಲಾಳ್, ಯುವ ಕಾಂಗ್ರೆಸ್ ಅಧ್ಯಕ್ಷ ಸುಭೋದ್ ರಾವ್,ಮಂಜುನಾಥ ಪೂಜಾರಿ, ಸುಜಾತ ಲಕ್ಷ್ಮಣ ಆಚಾರ್ಯ, ಸುಮ ಅಡ್ಯಂತಾಯ, ವಿಶಾಲಾಕ್ಷಿ ಶೆಟ್ಟಿ, ಶೀನಾ ಪೂಜಾರಿ, ಪ್ರವೀಣ ಬಲ್ಲಾಳ್, ಜಯಕರ ಪೂಜಾರಿ, ಸಂತೋಷ ಶೆಟ್ಟಿ, ಪಕ್ಷದ ವಿವಿಧ ಘಟಕಗಳ  ಮುಖಂಡರು,ಕಾರ್ಯಕರ್ತರು  ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.